ಸೋಮವಾರ, ಜೂಲೈ 6, 2020
23 °C

ಕೆಜಿಎಫ್ ತಾಲ್ಲೂಕಿನಲ್ಲಿ ಭಾರಿ ಮಳೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೆಜಿಎಫ್‌: ನಗರ ಮತ್ತು ಹೊರವಲಯದಲ್ಲಿ ಭಾನುವಾರ ಸಂಜೆ ಚದುರಿದಂತೆ ಭಾರಿ ಮಳೆ ಬಿದ್ದಿದ್ದು, ರಸ್ತೆ ಮೇಲೆ ನೀರು ಹರಿಯಿತು.

ಒಂದೇ ಸಮನೆ ಸುರಿದ ಮಳೆಯಿಂದಾಗಿ ಸಣ್ಣಪುಟ್ಟ ಕುಂಟೆಗಳು ತುಂಬಿ ಹರಿದಿವೆ. ಕೆರೆಗಳಿಗೆ ನೀರು ಹರಿದುಬರಲು ಶುರುವಾಗಿದೆ. ನಗರದಲ್ಲಿ ಚರಂಡಿಗಳಿಂದ ನೀರು ಉಕ್ಕಿ ಹರಿದು ತಗ್ಗು ಪ್ರದೇಶದ ಮನೆಗಳ ನಿವಾಸಿಗಳಿಗೆ ಭೀತಿಯ ವಾತಾವರಣ ಉಂಟು ಮಾಡಿದೆ.

ಊರಿಗಾಂಪೇಟೆಯ ಬೃಹತ್‌ ರಾಜಕಾಲುವೆಗೆ ನೀರು ಹರಿದುಹೋಗುತ್ತಿದೆ. ಸುತ್ತ ಮುತ್ತ ಇರುವ ಓಣಿಗಳ ಮನೆಗಳಲ್ಲಿ ನೀರು ಸಂಗ್ರಹವಾಗಿದೆ. ನಷ್ಟದ ಪ್ರಮಾಣ ಇನ್ನೂ ತಿಳಿದುಬಂದಿಲ್ಲ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.