ಮುಳಬಾಗಿಲು: ತಾಲ್ಲೂಕಿನ ದೊಡ್ಡಗುರ್ಕಿ ಸರ್ಕಾರಿ ಪ್ರಾಥಮಿಕ ಶಾಲೆಯ ಹಳೆ ಕಟ್ಟಡ ಹಾಗೂ ಅಂಗನವಾಡಿ ಕಟ್ಟಡಗಳು ಅನೈತಿಕ ಚಟುವಟಿಕೆಗಳ ಅಡ್ಡೆಯಾಗಿ, ಕುಡುಕರ ತಾಣವಾಗಿ ಬದಲಾಗಿದೆ.

ಮುಳಬಾಗಿಲು ತಾಲ್ಲೂಕಿನ ಉತ್ತನೂರು ಮುಖ್ಯ ರಸ್ತೆಯಲ್ಲಿರುವ ದೊಡ್ಡ ಗುರ್ಕಿ ಗ್ರಾಮದಲ್ಲಿ ಸರ್ಕಾರಿ ಪ್ರಾಥಮಿಕ ಶಾಲೆ ಹಾಗೂ ಅಂಗನವಾಡಿ ಕೇಂದ್ರಗಳಿಗೆ ಸುಸಜ್ಜಿತ ನೂತನ ಕಟ್ಟಡಗಳಿವೆ. ಆದರೆ, ಹಳೆಯ ಕಟ್ಟಡಗಳು ಕೆಲವೇ ದಿನಗಳಲ್ಲಿ ನಾಶವಾಗುವ ಸ್ಥಿತಿಗೆ ತಲುಪಿದೆ.

ಗ್ರಾಮದ ಮಧ್ಯದಲ್ಲಿರುವ ಶಾಲಾ ಕಟ್ಟಡ ವಿಶಾಲವಾದ ಪ್ರದೇಶದಲ್ಲಿ 2008-09 ರಲ್ಲಿ ವಿಶಾಲವಾದ ಕೊಠಡಿಗಳನ್ನು ಒಳಗೊಂಡಂತೆ ಶಾಲಾ ಕಟ್ಟಡ, ಸುಸಜ್ಜಿತ ಅಡುಗೆ ಕೋಣೆ ಹಾಗೂ ಅಂಗನವಾಡಿ ಕೇಂದ್ರದ ಕಟ್ಟಡಗಳನ್ನು ನಿರ್ಮಿಸಲಾಗಿತ್ತು. ಆದರೆ, ಕಟ್ಟಡ ತೀರಾ ಹಳೆಯದಾಗಿರುವ ಪರಿಣಾಮ ಇತ್ತೀಚೆಗೆ ಶಾಲೆ ಹಾಗೂ ಅಂಗನವಾಡಿ ಕೇಂದ್ರಗಳಿಗೆ ನೂತನ ಕಟ್ಟಡ ನಿರ್ಮಿಸಲಾಗಿದೆ.

ನೂತನ ಕಟ್ಟಡ ನಿರ್ಮಾಣ ಮಾಡಿರುವುದರಿಂದ ಹಳೆಯ ಕಟ್ಟಡಗಳಿಂದ ವಿದ್ಯಾರ್ಥಿಗಳು ಹಾಗೂ ಕಚೇರಿಯನ್ನು ಸ್ಥಳಾಂತರಿಸಲಾಗಿದೆ. ಹಾಗಾಗಿ ಹಳೆಯ ಕಟ್ಟಡದ ಸುತ್ತಲೂ ಗಿಡಗಂಟೆ ಬೆಳೆದು ವಿಷಜಂತುಗಳ ತಾಣವಾಗಿದೆ. ಜೊತೆಗೆ ಹಳೆಯ ಕಟ್ಟಡ ಕೆಲವೇ ದಿನಗಳಲ್ಲಿ ಬೀಳುವ ಹಂತ ತಲುಪಿದೆ. ಹಾಗಾಗಿ ಕಟ್ಟಡ ಕೂಡಲೇ ತೆರವು ಮಾಡಬೇಕೆಂದು ಸಾರ್ವಜನಿಕರು ಒತ್ತಾಯಿಸಿದರು.

ಹಳೆಯ ಶಾಲಾ, ಅಂಗನವಾಡಿ ಹಾಗೂ ಅಕ್ಷರ ದಾಸೋಹ ಕೇಂದ್ರದ ಮೂರೂ ಕಟ್ಟಡದ ಗೋಡೆಗಳು ಬಹುತೇಕ ಬಿರುಕು ಬಿಟ್ಟಿದ್ದು, ಕೆಲವೇ ದಿನಗಳಲ್ಲಿ ಗೋಡೆಗಳು ಕುಸಿಯುವ ಮಟ್ಟದಲ್ಲಿವೆ. ಇನ್ನು ಗೋಡೆಗಳಿಗೆ ಪ್ಲಾಸ್ಟಿಂಗ್ ಮಾಡಲಾಗಿದ್ದ ಬಹುಪಾಲು ಸಿಮೆಂಟ್ ಉದುರುತ್ತಿದೆ. ಸುಮಾರು 17 ವರ್ಷಗಳಷ್ಟು ಹಳೆಯ ಕಟ್ಟಡದ ಚಾವಣಿಯ ಸಿಮೆಂಟ್, ಪ್ಲಾಸ್ಟಿಂಗ್ ಉದುರುತ್ತಾ ಚಾವಣಿ ಕುಸಿಯುವ ಮಟ್ಟಕ್ಕೆ ತಲುಪಿದೆ.

ಕಟ್ಟಡದ ಸುಮಾರು ಹತ್ತಕ್ಕೂ ಹೆಚ್ಚು ಮರದ ಕಿಟಕಿಗಳು, ಮೂರು ಬಾಗಿಲು ಗೆದ್ದಲು ಹಿಡಿದು ಮುರಿದು ಹಾಳಾಗಿವೆ. ಕೆಲವು ಕಿಟಕಿಗಳ ಮರದ ಹಲಗೆಗಳು ಕೊಠಡಿಗಳಲ್ಲಿ ಬಿದ್ದಿದ್ದರೆ, ಬಹುತೇಕ ಕಿಟಕಿಗಳು ಪರರ ಪಾಲಾಗಿವೆ. ಬಾಗಿಲುಗಳು ಮುರಿದು ಹಾಳಾಗಿವೆ.

ಕುಡುಕರ ಅಡ್ಡೆಯಾದ ಕೊಠಡಿಗಳು: ಶಾಲಾ ಕೊಠಡಿಗಳು ಕುಡುಕರ ಅಡ್ಡೆಯಾಗಿದೆ. ಹಾಗಾಗಿ ಮದ್ಯಪಾನದ ನೂರಾರು ಪ್ಲಾಸ್ಟಿಕ್ ಬಾಟೆಲ್ ಹಾಗೂ ಮದ್ಯದ ಬಾಟಲಿಗಳು ಬಿದ್ದಿವೆ. ಶಾಲೆಯಲ್ಲಿ ತ್ಯಾಜ್ಯ ಹಾಗೂ ಗಿಡಗಂಟೆ ಬೆಳೆದಿದ್ದು ಹಾವು, ಚೇಳು ಮತ್ತಿತರ ವಿಷಕಾರಿ ಜೀವಿಗಳ ವಾಸಸ್ಥಾನವಾಗಿ ಬದಲಾಗಿದೆ. ಹಾಗಾಗಿ ಶಾಲೆ ಸುತ್ತಲೂ ವಿದ್ಯಾರ್ಥಿಗಳು ಭಯಬೀಳುವಂತಾಗಿದೆ.

Cut-off box - ಕಟ್ಟಡ ತೆರವಿಗೆ ಶೀಘ್ರ ಕ್ರಮ ಕಟ್ಟಡ ಶಿಥಿಲಾವಸ್ಥೆ ತಲುಪಿರುವ ಪರಿಣಾಮ ಕಟ್ಟಡ ಕೆಡವಿ ತೆರವುಗೊಳಿಸಲು ಈಗಾಗಲೇ ಲೋಕೋಪಯೋಗಿ ಇಲಾಖೆ ಅನುಮತಿಗಾಗಿ ಹಲವು ಬಾರಿ ಅರ್ಜಿ ಸಲ್ಲಿಸಲಾಗಿದೆ. ಹಾಗಾಗಿ ಇನ್ನೂ ಅನುಮತಿ ಸಿಕ್ಕಿಲ್ಲ. ಆದರೂ ಕಟ್ಟಡ ತೆರವಿಗಾಗಿ ಶೀಘ್ರ ಕ್ರಮ ಕೈಗೊಳ್ಳಲಾಗುವುದು. ಎನ್.ರಾಮಚಂದ್ರಪ್ಪ ಕ್ಷೇತ್ರ ಶಿಕ್ಷಣಾಧಿಕಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.