ಭಾನುವಾರ, ಜುಲೈ 25, 2021
22 °C

ಎಂ.ಜಿ.ಮಾರುಕಟ್ಟೆಯಲ್ಲಿ ತರಕಾರಿ ವ್ಯಾಪಾರಕ್ಕೆ ಅನುಮತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೆಜಿಎಫ್‌: ರಾಬರ್ಟ್‌ಸನ್‌ಪೇಟೆಯ ಎಂ.ಜಿ.ಮಾರುಕಟ್ಟೆಯಲ್ಲಿ ತರಕಾರಿ ಅಂಗಡಿಗಳನ್ನು ಬೆಳಿಗ್ಗೆ 8ರಿಂದ ಸಂಜೆ 6ರವರೆವಿಗೂ ತೆರೆಯಲು ಅವಕಾಶ ನೀಡಲಾಗಿದೆ.

ಎಂ.ಜಿ.ಮಾರುಕಟ್ಟೆಯಲ್ಲಿ ಮಂಗಳವಾರ ಮಾರುಕಟ್ಟೆಯ ವರ್ತಕರ ಸಂಘ ಮತ್ತು ತರಕಾರಿ ಅಂಗಡಿ ಮಾಲೀಕರ ಜತೆ ಮಾತನಾಡಿದ ಶಾಸಕಿ ಎಂ.ರೂಪಕಲಾ, ಮಲೆಯಾಳಿ ಮೈದಾನದಲ್ಲಿಯೇ ಸಗಟು ವ್ಯಾಪಾರ ಮಾಡಬೇಕು. ಚಿಲ್ಲರೆ ವ್ಯಾಪಾರವನ್ನು ಮಾತ್ರ ಎಂ.ಜಿ.ಮಾರುಕಟ್ಟೆಯಲ್ಲಿ ಮಾರಬೇಕು. ಕೊರೊನಾ ವೈರಸ್ ಹರಡದಂತೆ ಎಲ್ಲ ಮುಂಜಾಗ್ರತೆ ವಹಿಸಿದರೆ ಅವಕಾಶ ನೀಡುವುದಾಗಿ ಹೇಳಿದರು.

ನಂತರ ತಹಶೀಲ್ದಾರ್ ಕೆ.ರಮೇಶ್‌ ಮತ್ತು ನಗರಸಭೆ ಆಯುಕ್ತ ಸಿ.ರಾಜು ಅವರ ಜತೆ ಸಮಾಲೋಚಿಸಿದ ಶಾಸಕಿ ಕೆಲವು ಷರತ್ತುಗಳೊಂದಿಗೆ ಮಾರುಕಟ್ಟೆಯಲ್ಲಿ ಚಿಲ್ಲರೆ ವ್ಯಾಪಾರ ಮಾಡಲು ಅವಕಾಶ ನೀಡುವುದಾಗಿ ಪ್ರಕಟಿಸಿದರು.

ಪ್ರತಿದಿನ ಸರದಿ ಮೇರೆಗೆ ಅಂಗಡಿ ತೆಗೆಯಬೇಕು. ಅರವತ್ತು ವರ್ಷ ವಯಸ್ಸು ದಾಟಿದವರು ವ್ಯಾಪಾರಕ್ಕೆ ಕುಳಿತುಕೊಳ್ಳಬಾರದು. ಎಲ್ಲರೂ ಕಡ್ಡಾಯವಾಗಿ ಮಾಸ್ಕ್‌ ಧರಿಸಬೇಕು. ಅಂಗಡಿಗಳ ಮುಂಭಾಗದಲ್ಲಿ ವಿಸ್ತರಣೆ ಮಾಡಿಕೊಂಡು ವ್ಯಾಪಾರ ಮಾಡಬಾರದು. ತರಕಾರಿ ಮಾರುಕಟ್ಟೆಯೊಳಗೆ ಯಾವುದೇ ವಾಹನ ಬರಬಾರದು ಎಂದು ಷರತ್ತನ್ನು ವಿಧಿಸಲಾಯಿತು. ಎಲ್ಲಾ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವುದಾಗಿ ತರಕಾರಿ ವ್ಯಾಪಾರಿಗಳು ಅಭಯ ನೀಡಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು