ಸೋಮವಾರ, ಮಾರ್ಚ್ 20, 2023
30 °C

ನಾಯಿ ಸ್ಮಾರಕದ ಶಿಲಾಶಾಸನ ಪತ್ತೆ

ಜಿ.ವಿ.ಪುರುಷೋತ್ತಮರಾವ್ Updated:

ಅಕ್ಷರ ಗಾತ್ರ : | |

Prajavani

ಮುಳಬಾಗಿಲು: ಬೆಂಗಳೂರಿನ ಶಾಸನ ಸಂಶೋಧನೆ ಮಾಡುವ ಹವ್ಯಾಸಿ ತಂಡ ಬುಧವಾರ ತಾಲ್ಲೂಕಿನ ಮೇಲಾಗಾಣಿ ಗ್ರಾಮದಲ್ಲಿ ಅಪರೂಪದ ‘ಲೋಗ’ನೆಂಬ ನಾಯಿ ಸ್ಮಾರಕಕ್ಕೆ ಸಂಬಂಧಿಸಿದ ಇದುವರೆವಿಗೂ ಬೆಳಕಿಗೆ ಬಾರದ ಶಿಲಾಶಾಸನವನ್ನು ಗುರುತಿಸಿದ್ದಾರೆ.

ಬೆಂಗಳೂರು ನಗರದ ಧನಪಾಲ್ ಮತ್ತು ಪ್ರೊ.ಕೆ.ಆರ್. ನರಸಿಂಹನ್ ಶಿಲಾಶಾಸನ ಕುರಿತು ಮಾತನಾಡಿ, ರಾಜ್ಯದಲ್ಲಿ ಸಿಕ್ಕಿರುವ ನಾಲ್ಕು ಅಪರೂಪದ ಶಾಸನಗಳಲ್ಲಿ ಇದು ಒಂದಾಗಿದೆ ಎಂದು ತಿಳಿಸಿದರು.

‘ಲೋಗ’ನೆಂಬ ನಾಯಿ ಎಪ್ಪತೈದು ಹಂದಿಗಳನ್ನು, ಮತ್ತೊಂದು ಪಿರಿಸಂದಿಯ ಮಗ ‘ಧಳಗ’ನೆಂಬ ನಾಯಿ ಇಪ್ಪತ್ತಾರು ಹಂದಿಗಳನ್ನೂ ಕೊಂದ ಕಾರಣ ಇಲ್ಲಿ ಸ್ಮಾರಕ ನಿರ್ಮಿಸಲಾಗಿದೆ. ಇಲ್ಲಿಯೇ ಮತ್ತೊಂದು ಅಪೂರ್ವವಾದ ಸುಂದರ ಲಿಪಿಯ ಬರಹಗಳಿಂದ ಕೂಡಿದ ಶ್ರೀಪುರುಷನ ಮಗನಾಗಿದ್ದ ದುಗ್ಗಮಾರ ಎಲೆಯಪ್ಪನ ಶಾಸನವೂ ಸಿಕ್ಕಿದೆ. ಇದರೊಂದಿಗೆ ತುಂಡಾದ ಭರ್ಜರಿ ವೀರಗಲ್ಲೊಂದು ಪತ್ತೆಯಾಗಿದೆ’ ಎಂದು ವಿವರಿಸಿದರು.

ಮೇಲಾಗಾಣಿ ಉಪನ್ಯಾಸಕರಾದ ರತ್ನಪ್ಪ, ಸಾಗರ್, ಭಜರಂಗದಳದ ಚಲಪತಿ, ಪ್ರವೀಣ ಭಾಗವಹಿಸಿದ್ದರು.

ಗ್ರಾಮದಲ್ಲಿ ಸಿಕ್ಕಿರುವ ಅಪರೂಪದ ಶಾಸನಗಳನ್ನು ಸಂರಕ್ಷಿಸುವುದಾಗಿ ಕೆಪಿಸಿಸಿ ಮುಖಂಡ ಎ.ಸಿ. ಸುಭಾಷ್‌ ಚಂದ್ರ ಗೌಡ ತಂಡಕ್ಕೆ ಭರವಸೆ ನೀಡಿದ್ದಾರೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು