ಮಂಗಳವಾರ, ಜನವರಿ 19, 2021
17 °C

ರಸ್ತೆ ತೆರವಿಗೆ ಒತ್ತಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮುಳಬಾಗಿಲು: ಖಾಸಗಿ ಕಾರ್ಖಾನೆಯವರು ಅಕ್ರಮವಾಗಿ ಕಾಂಪೌಂಡ್ ನಿರ್ಮಿಸಿರುವ ಪರಿಣಾಮ ರಸ್ತೆಯ ಅನುಕೂಲವಿಲ್ಲದಂತಾಗಿದೆ. ಕೂಡಲೇ ರಸ್ತೆಗೆ ಸ್ಥಳ ತೆರವುಗೊಳಿಸಬೇಕು ಎಂದು ಒತ್ತಾಯಿಸಿ ಎಸ್ಎಫ್ಐ ನೇತೃತ್ವದಲ್ಲಿ ವೀರಭದ್ರನಗರಕ್ಕೆ ಸೇರಿದ ಕೈಗಾರಿಕಾ ಕ್ಷೇತ್ರದ ನೆರೆಹೊರೆಯ ನಿವಾಸಿಗಳು ತಾಲ್ಲೂಕು ಕಚೇರಿ ಮುಂದೆ ಗುರುವಾರ ಪ್ರತಿಭಟನೆ ನಡೆಸಿದರು.

ನಗರದ ವೀರಭದ್ರನಗರ ವಾರ್ಡ್‌ಗೆ ಸೇರಿದ ಇಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪರಿಶಿಷ್ಟ ಜಾತಿಗೆ ಸೇರಿದವರು ವಾಸಿಸುತ್ತಿದ್ದಾರೆ. ಈ ಪ್ರದೇಶದಲ್ಲಿ ಇಪ್ಪತೈದು ವರ್ಷಗಳಿಂದ ವಾಸವಾಗಿರುತ್ತಾರೆ. ಹಲವಾರು ವರ್ಷಗಳಿಂದ ರಸ್ತೆ ಇದ್ದು ಸಾರ್ವಜನಿಕವಾಗಿ ಓಡಾಡುವ ರಸ್ತೆಯನ್ನು ಬಂದ್ ಮಾಡಲಾಗಿದೆ ಎಂದು ದೂರಿದರು.

ಈ ರಸ್ತೆ ಬಿಟ್ಟರೆ ಇಲ್ಲಿನ ನಿವಾಸಿಗಳಿಗೆ ಬೇರೆ ರಸ್ತೆಯ ವ್ಯವಸ್ಥೆ ಇರುವುದಿಲ್ಲ. ಕೂಡಲೇ ಅಧಿಕಾರಿಗಳ ಸ್ಥಳ ತೆರವಿಗೆ ಕ್ರಮವಹಿಸಬೇಕು ಎಂದು ಒತ್ತಾಯಿಸಿದರು.

ಉಪ ತಹಶೀಲ್ದಾರ್ ಕೆ.ಎಲ್. ಜಯರಾಮ್‌ಗೆ ಮನವಿ ಪತ್ರ ಸಲ್ಲಿಸಲಾಯಿತು. ಎಸ್ಎಫ್ಐ ಜಿಲ್ಲಾ ಅಧ್ಯಕ್ಷ ಅಂಬ್ಲಿಕಲ್ ಶಿವಪ್ಪ, ವೀರಭದ್ರನಗರ ನಿವಾಸಿಗಳಾದ ಶಂಕರಪ್ಪ, ರೆಡ್ಡಪ್ಪ, ಡಿಶ್ಮಣಿ, ಜಯರಾಮರೆಡ್ಡಿ, ಶ್ರೀನಿವಾಸ ಗೋಪಿ, ಸರಸ್ಪತಮ್ಮ, ಸುಜಾತಾ, ಮಂಜುಳಮ್ಮ, ಪವಿತ್ರಾ, ಲಲಿತಮ್ಮ ಭಾಗವಹಿಸಿದ್ದರು. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.