ಕೋಲಾರ: ಜಿಲ್ಲೆಯಲ್ಲಿ ರಾಗಿ ಬೆಳೆದ ರೈತರ ಅದೃಷ್ಟ ಈ ಬಾರಿ ಖುಲಾಯಿಸುವಂತಿದೆ. 2025-26ನೇ ಸಾಲಿನ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿಯಲ್ಲಿ ಕ್ವಿಂಟಲ್ ರಾಗಿ ದರವನ್ನು ₹ 4,886ಕ್ಕೆ ಹೆಚ್ಚಿಸಲಾಗಿದೆ. ಜೊತೆಗೆ ಖರೀದಿ ಪ್ರಮಾಣವನ್ನೂ ಏರಿಸಲಾಗಿದೆ.

ಪ್ರತಿ ರೈತರಿಂದ ಉತ್ಪಾದನೆಗೆ ಅನುಗುಣವಾಗಿ ಪ್ರತಿ ಎಕರೆಗೆ 10 ಕ್ವಿಂಟಲ್ನಂತೆ ಗರಿಷ್ಠ 50 ಕ್ವಿಂಟಲ್ ಮೀರದಂತೆ ಗುಣಮಟ್ಟದ ರಾಗಿಯನ್ನು ಖರೀದಿಸಲಾಗುತ್ತದೆ. ಕಳೆದ ವರ್ಷ ಗರಿಷ್ಠ 20 ಕ್ವಿಂಟಲ್ ಮಾತ್ರ ಖರೀದಿಸಲಾಗುತಿತ್ತು. ಅಂತೆಯೇ ಕಳೆದ ವರ್ಷ ಕ್ವಿಂಟಲ್ ರಾಗಿ ದರ ₹ 4,290 ಇತ್ತು. ಈ ಬಾರಿ ₹ 596 ಹೆಚ್ಚಿಸಿ ₹ 4,886 ನಿಗದಿ ಮಾಡಲಾಗಿದೆ. ಸರ್ಕಾರದ ಈ ನಿರ್ಧಾರದಿಂದ ರಾಗಿ ಬೆಳೆದವರ ಮೊಗದಲ್ಲಿ ಖುಷಿಯ ಗೆರೆಗಳು ಮೂಡಿವೆ.

ಡಿ.31ರವರೆಗೆ ನೋಂದಣಿಗೆ ಅವಕಾಶವಿದ್ದು, ಜಿಲ್ಲೆಯ ರೈತರು ಹೆಚ್ಚಿನ ಸಂಖ್ಯೆಯಲ್ಲಿ ನೋಂದಾಯಿಸಿಕೊಳ್ಳಲು ಮುಂದಾಗಿದ್ದಾರೆ. ಈವರೆಗೆ 564 ರೈತರು ಸುಮಾರು 13,837 ಕ್ವಿಂಟಲ್ ಮಾರಾಟ ಮಾಡಲು ನೋಂದಾಯಿಸಿದ್ದಾರೆ.

ಇಡೀ ರಾಜ್ಯದಲ್ಲಿ ಪರಿಗಣಿಸಿದರೆ 21,719 ರೈತರು ನೋಂದಣಿ ಮಾಡಿಕೊಂಡಿದ್ದು, 5.63 ಲಕ್ಷ ಕ್ವಿಂಟಲ್ ರಾಗಿ ಮಾರಾಟ ಮಾಡುವುದಾಗಿ ಬರೆಸಿದ್ದಾರೆ.

ಜಿಲ್ಲೆಯ ಪ್ರಮುಖ ಬೆಳೆ ಎನಿಸಿರುವ ರಾಗಿಯನ್ನು ಈ ವರ್ಷದ ಮುಂಗಾರು ಹಂಗಾಮಿನಲ್ಲಿ ಸುಮಾರು 54 ಸಾವಿರ ಹೆಕ್ಟೇರ್ನಲ್ಲಿ ಬೆಳೆಯಲಾಗಿದೆ. ಕೆಲವೇ ದಿನಗಳಲ್ಲಿ ಕಟಾವು ಆರಂಭವಾಗಲಿದೆ.

ಆರಂಭದಲ್ಲಿ ಮಳೆ ಕೊರತೆ ಕಾಡಿದ್ದರಿಂದ ರೈತರು ಸಮಸ್ಯೆ ಎದುರಿಸಿದರು. ನಂತರ ಮಳೆ ಬಂದಿದ್ದರಿಂದ ಉತ್ತಮ ಫಸಲು ಬಂದಿದೆ.

ಎಲ್ಲಾ ತಾಲ್ಲೂಕುಗಳಲ್ಲಿ ರಾಗಿ ಖರೀದಿ ಕೇಂದ್ರಗಳನ್ನು ಈಗಾಗಲೇ ತೆರೆಯಲಾಗಿದೆ. ಮಾಲೂರು ತಾಲ್ಲೂಕಿನಲ್ಲಿ ಹೆಚ್ಚು ರಾಗಿ ಬೆಳೆಯುವ ಕಾರಣ ಎರಡು ಕೇಂದ್ರಗಳನ್ನು ತೆರೆಯಲಾಗಿದೆ. ಕೃಷಿ ಇಲಾಖೆ ನೀಡಿರುವ ಗುರುತಿನ ಸಂಖ್ಯೆ, ಆಧಾರ್ ಸಂಖ್ಯೆಯನ್ನು ಕಡ್ಡಾಯವಾಗಿ ಖರೀದಿ ಕೇಂದ್ರಕ್ಕೆ ನೀಡಿ ಬಯೋ ಮೆಟ್ರಿಕ್ ಮೂಲಕ ನೋಂದಣಿ ಮಾಡಿಕೊಳ್ಳಬಹುದು.

ಖರೀದಿ ಪ್ರಕ್ರಿಯೆ ಜನವರಿ 1ರಿಂದ ಮಾರ್ಚ್ 31ವರೆಗೆ ನಡೆಯಲಿದೆ. ಈ ಬಾರಿ ಹೆಚ್ಚಿನ ಪ್ರಮಾಣದಲ್ಲಿ ರಾಗಿ ಖರೀದಿ ನಿರೀಕ್ಷಿಸಲಾಗಿದೆ ಎಂದು ಕರ್ನಾಟಕ ಆಹಾರ ನಾಗರಿಕ ಸರಬರಾಜು ನಿಗಮದ ಜಿಲ್ಲಾ ವ್ಯವಸ್ಥಾಪಕ ಪ್ರಸಾದ್ ‘ಪ್ರಜಾವಾಣಿ’ಗೆ ತಿಳಿಸಿದರು.

ರೈತರು ಕಡ್ಡಾಯವಾಗಿ ಕೃಷಿ ಇಲಾಖೆಯಿಂದ ಜಾರಿಗೊಳಿಸಿರುವ ಫ್ರೂಟ್ಸ್ (ರೈತರ ನೋಂದಣಿ ಮತ್ತು ಏಕೀಕೃತ ಫಲಾನುಭವಿ ಮಾಹಿತಿ ವ್ಯವಸ್ಥೆ –Farmer Registration and Unified Beneficiary Information System- FRUITS) ದತ್ತಾಂಶದಲ್ಲಿ ನೋಂದಾಯಿಸಿಕೊಂಡು, ಫ್ರೂಟ್ಸ್ ಐ.ಡಿ ಪಡೆದಿರಬೇಕು ಎಂದು ಹೇಳಿದರು.

ಬಂಗಾರಪೇಟೆ ಮತ್ತು ಮಾಲೂರು ತಾಲ್ಲೂಕುಗಳಲ್ಲಿ ಹೆಚ್ಚಾಗಿ ರೈತರು ರಾಗಿ ಬೆಳೆಯುವುದರಿಂದ ಆ ಭಾಗದಲ್ಲಿ ಅವಶ್ಯವಿದ್ದರೆ ಹೋಬಳಿ ಮಟ್ಟದಲ್ಲಿಯೂ ಖರೀದಿ ಕೇಂದ್ರ ಪ್ರಾರಂಭ ಮಾಡುವಂತೆ ಈಗಾಗಲೇ ಜಿಲ್ಲಾಧಿಕಾರಿ ಎಂ.ಆರ್.ರವಿ ಸೂಚಿಸಿದ್ದು, ಅದರಂತೆ ಕ್ರಮ ವಹಿಸಲಾಗಿದೆ.

ಕಳೆದ ವರ್ಷ ರಾಗಿ ಇಳುವರಿ ಕುಂಠಿತಗೊಂಡಿತ್ತು. ಹೀಗಾಗಿ, ನೋಂದಣಿ ಕೂಡ ಕಡಿಮೆ ಆಗಿತ್ತು. ನೋಂದಣಿ ದಿನಾಂಕವನ್ನು ವಿಸ್ತರಿಸಿದ್ದರೂ ಪ್ರಯೋಜನವಾಗಿರಲಿಲ್ಲ.

1.20 ಲಕ್ಷ ಕ್ವಿಂಟಲ್ ಖರೀದಿ ನಿರೀಕ್ಷೆ

ಈ ಬಾರಿ ಜಿಲ್ಲೆಯಲ್ಲಿ 1.20 ಲಕ್ಷ ಕ್ವಿಂಟಲ್ ರಾಗಿ ಖರೀದಿ ಆಗುವ ನಿರೀಕ್ಷೆ ಇಟ್ಟುಕೊಂಡಿದ್ದೇವೆ. ಈ ಬಾರಿ ಉತ್ತಮ ಮಳೆ ಆಗಿರುವ ಕಾರಣ ಹೆಚ್ಚಿನ ಫಸಲು ಬರುವ ನಿರೀಕ್ಷೆ ಇದೆ. ಜೊತೆಗೆ ರಾಗಿ ಖರೀದಿ ಪ್ರಮಾಣ ಹೆಚ್ಚಿಸಲಾಗಿದೆ. ಜೊತೆಗೆ ದರವನ್ನೂ ಹೆಚ್ಚಿಸಲಾಗಿದೆ. ಕಳೆದ ಬಾರಿ 83 ಸಾವಿರ ಕ್ವಿಂಟಲ್ ರಾಗಿ ಖರೀದಿ ಮಾಡಲಾಗಿತ್ತು. ಕಳೆದ ಬಾರಿ ರೈತರಿಗೆ ಹಣ ಪಾವತಿ ತಡವಾಗಿತ್ತು. ಆದರೆ ಈ ಬಾರಿ ರಾಗಿ ಖರೀದಿಸಿದ 15 ದಿನಗಳಲ್ಲಿ ರೈತರ ಖಾತಿಗೆ ಡಿಬಿಟಿ ಮೂಲಕ ಹಣ ಪಾವತಿ ಮಾಡಲಾಗುವುದು ಪ್ರಸಾದ್ ಜಿಲ್ಲಾ ವ್ಯವಸ್ಥಾಪಕ ಕರ್ನಾಟಕ ಆಹಾರ ನಾಗರಿಕ ಸರಬರಾಜು ನಿಗಮ

ಇನ್ನೂ ರಾಗಿ ಕಟಾವು ಮಾಡಿಲ್ಲ

ಕೋಲಾರ ಜಿಲ್ಲೆಯ ಹಲವೆಡೆ ಇನ್ನೂ ರಾಗಿ ಕಟಾವು ಮಾಡಿಲ್ಲ. 10 ದಿನಗಳ ನಂತರ ರಾಗಿ ಕಟಾವಿಗೆ ಉತ್ತಮ ಸುಗ್ಗಿ ಕಾಲ. ಕನಿಷ್ಠ ಬೆಂಬಲ ದರ ಹೆಚ್ಚಿಸಿದ್ದರೂ ರೈತರು ಖರೀದಿ ಕೇಂದ್ರಕ್ಕೆ ಮಾರಾಟ ಮಾಡುವುದು ಕಡಿಮೆ. ಕೆಲವರು ಮನೆಯಲ್ಲಿ ಇಟ್ಟುಕೊಂಡಿರುತ್ತಾರೆ. ಬೀಜ ಹಾಗೂ ಆಹಾರಕ್ಕೆ ಹೆಚ್ಚಾಗಿ ಬಳಸುತ್ತಾರೆ. ಜಿಲ್ಲೆಯ ಪ್ರಮುಖ ಆಹಾರ ರಾಗಿಮುದ್ದೆ. ಹೆಚ್ಚು ಬೆಳೆದವರು ಮಾತ್ರ ಮಾರಾಟ ಮಾಡುತ್ತಾರೆ ಟಿ.ವಿ.ರಮೇಶ್ ರಾಗಿ ಬೆಳೆಗಾರ ತೊಟ್ಲಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.