ಶನಿವಾರ, 23 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಂಗಲಿ: ಅದ್ದೂರಿಯಾಗಿ ನಡೆದ ಕರಗ ಮಹೋತ್ಸವ

Published 4 ಜೂನ್ 2023, 14:37 IST
Last Updated 4 ಜೂನ್ 2023, 14:37 IST
ಅಕ್ಷರ ಗಾತ್ರ

ನಂಗಲಿ (ಮುಳಬಾಗಿಲು): ಗ್ರಾಮದ ದ್ರೌಪದಮ್ಮ ದೇವಿಯ 56ನೇ ವರ್ಷದ ಕರಗ ಮಹೋತ್ಸವ ಸಂಪ್ರದಾಯದಂತೆ ಅದ್ದೂರಿಯಾಗಿ ಭಾನುವಾರ ನಡೆಯಿತು.

ಕರಗ ಮಹೋತ್ಸವ ಪ್ರಯುಕ್ತ ದೇವಾಲಯದಲ್ಲಿ ಒಂದು ವಾರದಿಂದ ಕಲ್ಯಾಣೋತ್ಸವ ಹಸಿಕರಗ ಮುಂತಾದ ವಿಶೇಷವಾದ ಪೂಜಾ ಕಾರ್ಯಕ್ರಮ ನಡೆದವು. ಶನಿವಾರ ಮಧ್ಯರಾತ್ರಿ ಕರಗಕ್ಕೆ ಚಾಲನೆ ಸಿಕ್ಕಿತು. ನಂತರ ಕರಗವನ್ನು ತವರು ಮನೆ ಎನ್.ಕುರುಬರಹಳ್ಳಿ ಗ್ರಾಮಕ್ಕೆ ಎತ್ತಿಕೊಂಡು ಹೋಗಿ ಗ್ರಾಮದಲ್ಲಿ ವಿಶೇಷ ಪೂಜೆ ಮುಗಿದ ನಂತರ ನಂಗಲಿಗೆ ವಾಪಸ್ಸಾಯಿತು.

ನಂತರ ನಂಗಲಿ ಗ್ರಾಮದ ಗಂಗಮ್ಮ, ಗಣೇಶ, ಕೋದಂಡರಾಮ, ವಾಸವಿ, ನಾಗದೇವತಾ ಮುಂತಾದ ದೇವಾಲಯಗಳ ಮುಂದೆ ವಿಶೇಷ ಪೂಜೆ ಮುಗಿಸಿಕೊಂಡು ಗ್ರಾಮದಲ್ಲಿ ಮೆರವಣಿಗೆ ಸಾಗಿತು.

ಗ್ರಾಮದ ಎಲ್ಲಾ ಮನೆಗಳ ಬಳಿಗೆ ಕರಗ ಹೋದ ತಕ್ಷಣ ಮಹಿಳೆಯರು ಕರಗಕ್ಕೆ ಪೂಜೆ ಮಾಡಿ ನಮಸ್ಕರಿಸಿದರು. ಕರಗ ಸಂಜೆ ಅಗ್ನಿಕುಂಡದಲ್ಲಿ ಇಳಿಯುವ ಮೂಲಕ ಮಹೋತ್ಸವ ಪೂರ್ಣಗೊಂಡಿತು. ಸಂಜೆ ಒನಕೆ ಕರಗ ಹಾಗೂ ಗಾವು ಪೂಜಾ ಕಾರ್ಯಕ್ರಮ ನಡೆದವು.

ರಾತ್ರಿ ಗ್ರಾಮದ ಗಂಗಮ್ಮ, ಕೋದಂಡರಾಮಸ್ವಾಮಿ ವಿನಾಯಕ, ನಾಗ ದೇವತಾ, ವಾಸವಿ, ಶ್ರೀರಾಮ ಮುಂತಾದ ದೇವರ ಪಲ್ಲಕ್ಕಿ ಉತ್ಸವ ನಡೆದವು.

ದ್ರೌಪದಮ್ಮ ದೇವಿಯ ವಿಗ್ರಹವನ್ನು ವಿಶೇಷವಾಗಿ ಅಲಂಕಾರ ಮಾಡಲಾಗಿತ್ತು
ದ್ರೌಪದಮ್ಮ ದೇವಿಯ ವಿಗ್ರಹವನ್ನು ವಿಶೇಷವಾಗಿ ಅಲಂಕಾರ ಮಾಡಲಾಗಿತ್ತು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT