ಬುಧವಾರ, ಆಗಸ್ಟ್ 4, 2021
26 °C
ಬೇತಮಂಗಲ ಕೆರೆ ಅಂಗಳ ಸ್ವಚ್ಛತಾ ಕಾರ್ಯಕ್ಕೆ ಶಾಸಕಿ ರೂಪಕಲಾ ಚಾಲನೆ

ಪಾಲಾರ ಕೆರೆಗೆ ಕೆ.ಸಿ ವ್ಯಾಲಿ ನೀರು ಶೀಘ್ರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೇತಮಂಗಲ: ಕೆ.ಸಿ.ವ್ಯಾಲಿ ಯೋಜನೆಯ ಮೂಲಕ ₹1300 ಕೋಟಿ ಅನುದಾನದಲ್ಲಿ ಕೋಲಾರ ಜಿಲ್ಲೆಯ ಕೆರೆಗಳಿಗೆ ನೀರು ಹರಿಸಲಾಗುತ್ತದೆ ಎಂದು ಶಾಸಕಿ ಎಂ.ರೂಪಕಲಾ ಶಶಿಧರ್ ಹೇಳಿದರು.

ಬಿಇಎಂಎಲ್ ಕಂಪನಿ ಸಹಕಾರದಿಂದ ಬೇತಮಂಗಲ ಪಾಲಾರ ಕೆರೆ ಅಂಗಳದಲ್ಲಿರುವ ಜಾಲಿ ಗಿಡಗಳನ್ನು ತೆರವು ಮಾಡುವ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿದರು.

ಜಿಲ್ಲೆಯಲ್ಲೆ ದೊಡ್ಡ ಕೆರೆಗಳಾದ ಬೇತಮಂಗಲದ ಪಾಲಾರ ಕೆರೆ ಹಾಗೂ ರಾಮಸಾಗರ ಕೆರೆಗಳಿಗೆ ನೀರು ತುಂಬಿಸಿದರೆ, ಈ ಭಾಗದ ಸಾವಿರಾರು ರೈತ ಕುಟುಂಬಗಳಿಗೆ ಜೀವನ ನಡೆಸಲು ಸಹಕಾರಿ ಆಗುತ್ತದೆ ಎಂದು ಹೇಳಿದರು.

2-3 ತಿಂಗಳಲ್ಲಿ ಕೆ.ಸಿ ವ್ಯಾಲಿ: ಜಿಲ್ಲೆಯ ಅರ್ಧ ಕೆರೆಗಳಿಗೆ ಕೆ.ಸಿ.ವ್ಯಾಲಿ ನೀರು ತುಂಬಿದೆ. ಕೆಲವೇ ದಿನಗಳಲ್ಲಿ ಬೇತಮಂಗಲ ಸೇರಿದಂತೆ ಅನೇಕ ಕೆರೆಗಳು ಸಹ ತುಂಬಲಿವೆ. ಅಷ್ಟರಲ್ಲಿಯೇ ದೊಡ್ಡ ಕೆರೆಗಳನ್ನು ಸಂಪೂರ್ಣ ಸ್ವಚ್ಛ ಮಾಡಿ, ಮತ್ತಷ್ಟು ಆಳ ಮಾಡಿ ನೀರು ಶೇಖರಣೆ ಮಾಡಲಾಗುತ್ತದೆ ಎಂದರು.

ಕೆರೆಯ ಮಣ್ಣು ತುಂಬಿಕೊಂಡು ಹೋಗಿ: ರೈತರು ಜಮೀನಿಗೆ, ಇಟ್ಟಿಗೆ ಕಾರ್ಖಾನೆಗೆ ಕೆರೆಯ ಮಣ್ಣು ತುಂಬಿಕೊಂಡು ಹೋಗಬಹುದು. ವಾಹನ ತಂದರೆ ಸಾಕು ಬೇಕಾದಷ್ಟು ಮಣ್ಣನ್ನು ಜೆಸಿಬಿ ಮೂಲಕ ತುಂಬಿಸಲಾಗುವುದು. ಇದರಿಂದ ಕೆರೆಯೂ ಸ್ವಚ್ಛವಾದಂತಾಗುತ್ತದೆ. ಅಗತ್ಯ ಇರುವವರಿಗೆ
ಮಣ್ಣು ದೊರೆಯುತ್ತದೆ ಎಂದು ಹೇಳಿದರು. ಬಿಇಎಂಎಲ್ ಅಧಿಕಾರಿ ವೇಣು ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.