ಗುರುವಾರ , ಜುಲೈ 29, 2021
23 °C
ಘಟ್ಟರಾಗಡಹಳ್ಳಿ: 12 ಮಕ್ಕಳು ಕೋವಿಡ್‌ ಕೇರ್ ಸೆಂಟರ್‌ಗೆ

ಕೆಜಿಎಫ್: ಮಕ್ಕಳಿಗೆ ಹಬ್ಬಿದ ಕೊರೊನಾ ಸೋಂಕು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೆಜಿಎಫ್: ನಗರದ ಹೊರವಲಯದ ಘಟ್ಟರಾಗಡಹಳ್ಳಿಯಲ್ಲಿ ವ್ಯಾಪಕವಾಗಿ ಕೊರೊನಾ ಸೋಂಕು ಹರಡಿದ್ದು, ಗ್ರಾಮದ 12 ಮಕ್ಕಳನ್ನು ಕೋವಿಡ್‌ ಕೇರ್ ಸೆಂಟರ್‌ಗೆ ಕಳಿಸಲಾಗಿದೆ.

ಗ್ರಾಮದಲ್ಲಿ ಈಚೆಗೆ ನಡೆದ ರ್‍ಯಾಪಿಡ್ ಆ್ಯಂಟಿಜೆನ್‌ ಪರೀಕ್ಷೆಯಲ್ಲಿ ಗ್ರಾಮದ ಬಹುತೇಕ ಮಂದಿಸೋಂಕಿಗೆ ತಗುಲಿರುವುದು ಪತ್ತೆಯಾಯಿತು. ಅದರ ಜೊತೆಗೆ ಅವರ ಕುಟುಂಬದಲ್ಲಿರುವ ಮಕ್ಕಳಿಗೂ ಸೋಂಕು ತಗಲಿರುವುದು ಕಂಡು ಬಂದಿತು. ಗ್ರಾಮದಲ್ಲಿ ಒಟ್ಟು 36 ಮಂದಿಯನ್ನು ಈವರೆಗೆ ಕೋವಿಡ್ ಕೇರ್ ಸೆಂಟರ್‌ಗೆ ಕಳಿಸಲಾಗಿದ್ದು, ಅವರ ಪೈಕಿ 12 ಮಕ್ಕಳು ಇದ್ದಾರೆ.

ಮಕ್ಕಳು ಚಟುವಟಿಕೆಯಿಂದ ಇದ್ದಾರೆ. ಹೊರನೋಟಕ್ಕೆ ಯಾವುದೇ ಕೋವಿಡ್‌ ಲಕ್ಷಣಗಳು ಕಂಡುಬಂದಿಲ್ಲ. ಗ್ರಾಮವನ್ನು ಸಂಪೂರ್ಣವಾಗಿ ಕಂಟೈನ್ಮೆಂಟ್ ವಲಯ ಎಂದು ಘೋಷಿಸಲಾಗಿದೆ. ಸೋಂಕಿತರನ್ನು ಬಿಜಿಎಂಎಲ್ ಆಸ್ಪತ್ರೆ ಮತ್ತು ಸಂಭ್ರಂ ಮೆಡಿಕಲ್ ಕಾಲೇಜಿಗೆ ಸೇರಿಸಲಾಗಿದೆ. ಪೆದ್ದಪಲ್ಲಿ ಗ್ರಾಮದಲ್ಲಿ ಶನಿವಾರ ಲಸಿಕೆ ಅಭಿಯಾನವನ್ನು ಪ್ರಾರಂಭಿಸಲಾಗಿದೆ ಎಂದು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಮಂಜುನಾಥ್ ತಿಳಿಸಿದ್ದಾರೆ. ಸರ್ಕಲ್‌ ಇನ್‌ಸ್ಪೆಕ್ಟರ್ ವೆಂಕಟರಮಣಪ್ಪ, ಸಬ್‌ ಇನ್‌ಸ್ಪೆಕ್ಟರ್ ಸೋಮಶೇಖರ್ ಗ್ರಾಮಕ್ಕೆ ಭೇಟಿ ನೀಡಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು