ಕೋಲಾರ: ತಾಲ್ಲೂಕಿನ ವಕ್ಕಲೇರಿ ಹೋಬಳಿ ಅರಭಿಕೊತ್ತನೂರು ಗ್ರಾಮದ ಸರ್ವೆ ನಂ 152ರಲ್ಲಿ ಕೋಲಾರ ನಗರಸಭೆ ವ್ಯಾಪ್ತಿಯ ಘನತ್ಯಾಜ್ಯ ವಿಲೇವಾರಿಗಾಗಿ ನೆಲಭರ್ತಿ ಜಾಗಕ್ಕಾಗಿ ವಿಭಜನೆಯಲ್ಲಿ 5 ಎಕರೆ ಜಮೀನು ಮಂಜೂರಾತಿ ಮಾಡಲಾಗಿರುತ್ತದೆ.

ಈ ಜಮೀನು ಕೋಲಾರ ನಗರದಿಂದ ಬೆಂಗಳೂರು ರಸ್ತೆಯ ಮೂಲಕ ನರಸಾಪುರ-ವಕ್ಕಲೇರಿ ರಸ್ತೆಯಲ್ಲಿ ಬರುವ ಆಂಜನೇಯಸ್ವಾಮಿ ದೇವಸ್ಥಾನದ ಹತ್ತಿರಕ್ಕೆ ಸುಮಾರು 15ಕಿ.ಮೀ ದೂರದಲ್ಲಿರುತ್ತದೆ. ಈ ಜಮೀನನ್ನು ಕೋಲಾರ ನಗರದಲ್ಲಿರುವ ಕಟ್ಟಡಗಳ ತ್ಯಾಜ್ಯವನ್ನು ಹಾಕಲು ಸ್ಥಳವಾಗಿ ಅಧಿಸೂಚನೆಯನ್ನು ಹೊರಡಿಸಿದೆ. ಈ ಸರ್ವೆ ನಂಬರ್ನನಲ್ಲಿ ಕಟ್ಟಡಗಳ ತ್ಯಾಜ್ಯವನ್ನು ಹಾಕುವ ಸ್ಥಳವಾಗಿ ಅಧಿಸೂಚನೆಯನ್ನು ಹೊರಡಿಸಲು ಯಾವುದಾದರು ತಂಟೆ ತಕರಾರು, ಸಿವಿಲ್ ವ್ಯಾಜ್ಯಗಳು, ಸಲಹೆ ಸೂಚನೆಗಳೇನಾದರೂ ಇದ್ದಲ್ಲಿ ಈ ಮೂಲಕ ಸಲ್ಲಿಸಬಹುದಾಗಿರುತ್ತದೆ.

ಅವಧಿ ಮೀರಿ ಬರುವ ಯಾವುದೇ ಆಕ್ಷೇಪಣೆಗಳು ಸಲಹೆ, ಸೂಚನೆಗಳನ್ನು ಪರಿಗಣಿಸಲಾಗುವುದಿಲ್ಲ ಎಂದು ನಗರಸಭೆಯ ಪೌರಾಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.