ಭಾನುವಾರ, 15 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ರಕ್ಷಾ ಬಂಧನ ಆಚರಣೆ; ಹೆಣ್ಣಿನ ರಕ್ಷಣೆಗೆ ಆಗ್ರಹ

Published : 19 ಆಗಸ್ಟ್ 2024, 14:11 IST
Last Updated : 19 ಆಗಸ್ಟ್ 2024, 14:11 IST
ಫಾಲೋ ಮಾಡಿ
Comments

ಕೋಲಾರ: ನಗರದ ಸೋಮೇಶ್ವರ ದೇವಾಲಯದಲ್ಲಿ ಸೋಮವಾರ ಕದಂಬ ಸೇವಾ ಫೌಂಡೇಷನ್‌ನಿಂದ ಎರಡನೇ ವರ್ಷದ ರಕ್ಷಾ ಬಂಧನ ಕಾರ್ಯಕ್ರಮ ನಡೆಯಿತು.

ವಿವಿಧ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿತ್ತಿರುವವರು ಮತ್ತು ಸೋಮೇಶ್ವರ ದೇವಾಲಕ್ಕೆ ಬಂದ 500ಕ್ಕೂ ಹೆಚ್ಚು ಮಂದಿಗೆ ರಕ್ಷೆ ಕಟ್ಟುವ ಮೂಲಕ ರಕ್ಷಾ ಬಂಧನ ಆಚರಿಸಲಾಯಿತು.

ಸಹೋದರ-ಸಹೋದರಿಯರ ನಡುವಿನ ಬಾಂಧವ್ಯವನ್ನು ಬೆಸೆಯುವುದು ಮಾತ್ರವಲ್ಲ; ಸಮಾಜದ ಎಲ್ಲಾ ಮಹಿಳೆಯರನ್ನು ಗೌರವದಿಂದ ಕಂಡು ಅವರಿಗೆ ರಕ್ಷಣೆ ನೀಡುವುದು ಪ್ರತಿಯೊಬ್ಬ ಪ್ರಜ್ಞಾವಂತ ನಾಗರಿಕರ ಜವಾಬ್ದಾರಿ ಎಂಬ ಅರಿವು ಮೂಡಿಸಲಾಯಿತು.

‘ಇತ್ತೀಚೆಗೆ ಸಮಾಜದಲ್ಲಿ ಅತ್ಯಾಚಾರ ಪ್ರಕರಣಗಳು ಹೆಚ್ಚುತ್ತಿದ್ದು, ನಿಯಂತ್ರಣಕ್ಕೆ ಸರ್ಕಾರ ಕಠಿಣ ಕಾನೂನು ರೂಪಿಸಬೇಕು. ಈ ಮೂಲಕ ಹೆಣ್ಣುಮಕ್ಕಳ ರಕ್ಷಣೆಗೆ ಮುಂದಾಗಬೇಕು’ ಎಂದು ಕದಂಬ ಸೇವಾ ಫೌಂಡೇಷನ್‌ ಸಂಸ್ಥಾಪಕ ಅಧ್ಯಕ್ಷ ಹೊಲ್ಲಂಬಳ್ಳಿ ಶಿವು ಆಗ್ರಹಿಸಿದರು.

ಕದಂಬ ಸೇವಾ ಫೌಂಡೇಷನ್‍ನ ಕಾರ್ಯದರ್ಶಿ ಅನಿಲ್ ಕುಮಾರ್, ಖಜಾಂಚಿಗಳಾದ ಆರ್.ನಂದಿನಿ, ಸಂಘಟನಾ ಕಾರ್ಯದರ್ಶಿಗಳಾದ ಆಕಾಶ್ ಜಿ.ಆರ್ ಮತ್ತು ಲಕ್ಷ್ಮಿ ಎಸ್., ಚಂದನ, ಸ್ಕೌಟ್ಸ್ ಬಾಬು, ಆನಂದ್ ಜೀವಿ, ಹೂವಳ್ಳಿ ನಾಗರಾಜ್, ಮತ್ತಿಕುಂಟೆ ಕೃಷ್ಣ, ಅಪ್ಪಿ ನಾರಾಯಣಸ್ವಾಮಿ, ನಳಿನಿಗೌಡ, ಅರುಣಮ್ಮ, ಸವಿತಾ ಪಾ‌ಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT