ಕೋಲಾರ: ದ್ವಿತೀಯ ಪಿಯು ವಾಣಿಜ್ಯ ವಿಭಾಗದಲ್ಲಿ ಕೋಲಾರದ ಮಹಿಳಾ ಸಮಾಜ ಪಿಯು ಕಾಲೇಜಿನ ವಿದ್ಯಾರ್ಥಿನಿ ಎಚ್.ಬಿ.ಭಾರ್ಗವಿ 600ಕ್ಕೆ 597 ಅಂಕ ಪಡೆದು ರಾಜ್ಯಕ್ಕೆ ಮೂರನೇ ರ್ಯಾಂಕ್ ಮತ್ತು ನಗರದ ಎಸ್ಡಿಸಿ ಪಿಯು ಕಾಲೇಜಿನ ಹಾಸಿಕಾ ಎಲ್.ಆನೂರ್ (595 ಅಂಕ) 5ನೇ ರ್ಯಾಂಕ್ ಪಡೆದಿದ್ದಾರೆ.

'ರ್ಯಾಂಕ್ ನಿರೀಕ್ಷೆ ಇರಲಿಲ್ಲ. ಉತ್ತಮ ಅಂಕ ಬರುವ ವಿಶ್ವಾಸವಿತ್ತು. ಸಿ.ಎ ಮಾಡುವ ಗುರಿ ಇದೆ. ಅದಕ್ಕಾಗಿಯೇ ವಾಣಿಜ್ಯ ವಿಭಾಗಕ್ಕೆ ಸೇರಿದ್ದೆ. ಪೋಷಕರ ಒತ್ತಡ ಇರಲಿಲ್ಲ. ಕಾಲೇಜಿನಿಂದ ಪ್ರೋತ್ಸಾಹ ಸಿಕ್ಕಿತು. ಬೆಳಗಿನ ಅವಧಿಯಲ್ಲಿ ಹೆಚ್ಚು ಓದುತ್ತಿದ್ದೆ. ಅಂದಿನ ಪಾಠವನ್ನು ಅಂದೇ ಓದುತ್ತಿದ್ದೆ’ ಎಂದು ಭಾರ್ಗವಿ 'ಪ್ರಜಾವಾಣಿ'ಗೆ ಪ್ರತಿಕ್ರಿಯಿಸಿದರು. ಈಕೆಯ ತಂದೆ ಎಚ್.ಬಿ.ಭಾಸ್ಕರ್ ಬಂಗಾರಪೇಟೆ ತಾಲ್ಲೂಕಿನ ಹುದುಕುಳ ಗ್ರಾಮದಲ್ಲಿ ಪುರೋಹಿತರಾಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.