ರಸ್ತೆ ಸೌಲಭ್ಯವಿಲ್ಲದೆ ಕಾಲು ದಾರಿಯೇ ಮುಖ್ಯ ರಸ್ತೆಯಾಗಿರುವುದು
ಮನೆಗಳಿಗೆ ರಸ್ತೆ ಇಲ್ಲ ವಿದ್ಯುತ್ ದೀಪ ಅಳವಡಿಸಿಲ್ಲ. ಗಿಡಗಳು ಹೆಚ್ಚಾಗಿದ್ದು ಹಾವುಗಳ ಕಾಟ ಹೆಚ್ಚಾಗಿದೆ. ಹಾಗಾಗಿ ಸಂಜೆ ಆಗುತ್ತಿದ್ದಂತೆ ಮಕ್ಕಳನ್ನು ಮನೆಯಿಂದ ಹೊರ ಬರದಂತೆ ಕಾಯಬೇಕಿದೆ.
ರಾಣಿ ಕಣಿವೇನಹಳ್ಳಿ ಗ್ರಾಮದ ನಿವಾಸಿ
ಮನೆ ಹತ್ತಿರ ಬೈಕ್ ಬರುವಷ್ಟು ರಸ್ತೆಯಿಲ್ಲ. ರೋಗಿಗಳನ್ನು ತುರ್ತಾಗಿ ಆಸ್ಪತ್ರೆಗೆ ಕರೆದೊಯ್ಯಬೇಕಾದರೆ ಹೊತ್ತುಕೊಂಡು ಗ್ರಾಮದ ಮುಖ್ಯ ರಸ್ತೆಗೆ ಬರಬೇಕಾದ ಪರಸ್ಥಿತಿ ಇದೆ. ಹಾಗಾಗಿ ರಸ್ತೆ ಅಭಿವೃದ್ಧಿಪಡಿಸಿ.
ಚಂದ್ರಪ್ಪ ಕಣಿವೇನಹಳ್ಳಿ ಗ್ರಾಮಸ್ಥ
ನರೇಗಾ ಅನುದಾನ ಮೂಲಕ ಕ್ರಮ
ಪಂಚಾಯಿತಿಗೆ ಪಿಡಿಒ ಆಗಿ ಬಂದು ಒಂದು ತಿಂಗಳು ಕಳೆದಿದೆ. ಇದರ ಬಗ್ಗೆ ನನಗೆ ಮಾಹಿತಿ ಇಲ್ಲ. ಗ್ರಾಮಕ್ಕೆ ಭೇಟಿ ನೀಡಿ ಸಮಸ್ಯೆ ನಿವಾರಿಸಲು ನರೇಗಾ ಯೋಜನೆಯಲ್ಲಿ ಅನುದಾನ ನೀಡುವ ಮೂಲಕ ಕ್ರಮ ಕೈಗೊಳ್ಳಲಾಗುವುದು- ಮಹಾಲಿಂಗಪ್ಪ ಅಬ್ಬೇನಹಳ್ಳಿ ಗ್ರಾಮ ಪಂಚಾಯಿತಿ ಪಿಡಿಒ
ಅನುದಾನ ಸಾಲುತ್ತಿಲ್ಲ
ಪಂಚಾಯಿತಿಯಿಂದ ಅನುದಾನ ಬರುವುದು ಸಾಲುತ್ತಿಲ್ಲ. 15ನೇ ಹಣಕಾಸು ಯೋಜನೆಯಲ್ಲಿ ಒಂದು ಅಥವಾ ಎರಡು ಲಕ್ಷ ಅನುದಾನ ನೀಡುತ್ತಾರೆ. ಅದರಲ್ಲಿ ರಸ್ತೆ ಮಾಡಲು ಸಾಧ್ಯವಿಲ್ಲ. ಇನ್ನು ಸಣ್ಣಪುಟ್ಟ ಮೋರಿ ಕೆಲಸ ಮಾಡಿದ್ದೇವೆ. ಅನುದಾನದ ಕೊರತೆ ಗ್ರಾಮದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ನಡೆಸಲು ಸಾಧ್ಯವಾಗುತ್ತಿಲ್ಲ- ವೆಂಕಟಮ್ಮ ಕಣಿವೇನಹಳ್ಳಿ ಗ್ರಾಮ ಪಂಚಾಯಿತಿ ಸದಸ್ಯೆ.