ನಗರಸಭೆಯಿಂದ ಮಲೀನ ನೀರು ಹರಿಯುವ ಚೆಂಬರ್‌ಗಳ ಬಳಿ ಪೈಪ್‌ಲೈನ್ ದುರಸ್ತಿ ಕಾರ್ಯ ನಡೆಯುತ್ತಿದೆ. ಸಾರ್ವಜನಿಕರು ದೂರು ನೀಡಿದ ತಕ್ಷಣ ಅಥವಾ ನಗರಸಭೆ ಗಮನಕ್ಕೆ ಬಂದ ತಕ್ಷಣ ಚೆಂಬರ್ ದುರಸ್ತಿ ಮಾಡಲಾಗುತ್ತಿದೆ.
ರಾಜಣ್ಣ ಆರೋಗ್ಯಾಧಿಕಾರಿ ನಗರಸಭೆ
ನಗರದಲ್ಲಿ ಒಳಚರಂಡಿ ವ್ಯವಸ್ಥೆ ಹಾಳಾಗಿದ್ದು ರಸ್ತೆಗಳಲ್ಲಿ ಕೊಳಚೆ ನೀರು ಚೆಂಬರ್‌ಗಳಿಂದ ಹೊರ ಬರುತ್ತಿದೆ. ಇದರಿಂದ ನಾಗರಿಕರಿಗೆ ತೊಂದರೆಯಾಗುತ್ತಿದೆ. ಸಂಬಂಧಪಟ್ಟ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ.