ಗುರುವಾರ , ಸೆಪ್ಟೆಂಬರ್ 23, 2021
27 °C

ಗಾಂಜಾ ಗಿಡ ವಶ: ಆರೋಪಿ ಸೆರೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬಂಗಾರಪೇಟೆ: ತಾಲ್ಲೂಕಿನ ಬಲಮಂದೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಭೀಮಗಾನಹಳ್ಳಿಯ ಸರ್ವೆ ನಂ. 214ರ ಸರ್ಕಾರಿ ಗೋಮಾಳದಲ್ಲಿ ಬೆಳೆದಿದ್ದ ಗಾಂಜಾ ಗಿಡಗಳನ್ನು ಪತ್ತೆಹಚ್ಚಿದ ಅಬಕಾರಿ ಪೊಲೀಸರು ಆರೋಪಿ ದೇವರಾಜ್ ಎಂಬಾತನನ್ನು ಬಂಧಿಸಿದ್ದಾರೆ.

ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಅಬಕಾರಿ ಇನ್‌ಸ್ಪೆಕ್ಟರ್ ಪಿ.ಕೆ. ಶಶಿಕಲಾ ಸುಮಾರು
₹ 65 ಸಾವಿರ ಮೌಲ್ಯದ 2.5 ಕೆ.ಜಿ ಗಾಂಜಾ ಗಿಡಗಳನ್ನು ವಶಕ್ಕೆ
ಪಡೆದಿದ್ದಾರೆ.

ಆರೋಪಿಯು ಗೋಮಾಳ ಜಮೀನಿನ ಕಲ್ಲುಬಂಡೆಗಳ ಮಧ್ಯೆ ಪಾತಿ ಮಾಡಿ 8 ಗಾಂಜಾ ಗಿಡಗಳನ್ನು
ಬೆಳೆದಿದ್ದ. ದಾಳಿ ನಡೆಸಿದ ತಂಡದಲ್ಲಿ ಅಬಕಾರಿ ಉಪ ನಿರೀಕ್ಷಕರಾದ ಪ್ರಕೃತಿ ಜೈ, ಎಂ.ಆರ್. ಶಿವಶಂಕರ್, ಸಿಬ್ಬಂದಿ ಲಕ್ಷ್ಮಣ್, ಮಂಜುನಾಥ್, ಹನುಮಂತು ಇದ್ದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.