ಶ್ರೀನಿವಾಸಪುರ: ಮಾವು ಬೆಳೆಗೆ ಉಂಟಾಗುತ್ತಿರುವ ರೋಗಬಾಧೆಯಿಂದ ಮಾವು ಬೆಳೆಗಾರರು ಕಂಗಾಲಾಗಿದ್ದು, ಪರಿಹಾರ ಸಂಬಂಧ ವಿಜ್ಞಾನಿಗಳು ಸಕಾಲಿಕ ಮಾಹಿತಿ ನೀಡಬೇಕು ಎಂದು ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ತಿಳಿಸಿದರು.

ಪಟ್ಟಣದ ಮಾರುತಿ ಸಮುದಾಯ ಭವನದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಮಾವು ಬೆಳೆಗಾರರಿಗೆ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಕ್ಷೇತ್ರದ ಅಭಿವೃದ್ಧಿಗಾಗಿ ಕೈಗಾರಿಕಾ ವಲಯ ಸ್ಥಾಪನೆಗೆ ಬೇಕಾದ ರೂಪುರೇಷೆ ಸಿದ್ಧತೆಯಲ್ಲಿ ತೊಡಗಿದ್ದೇನೆ ಎಂದರು.

ಮಾವು ಅಭಿವೃದ್ಧಿ ಮಂಡಲಿ ಅಧ್ಯಕ್ಷ ಡಾ.ಬಿ.ಸಿ.ಮುದ್ದು ಗಂಗಾಧರ್ ಮಾತನಾಡಿ, ‘ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲೂ ಸಭೆ ನಡೆಸಿ ಅಲ್ಲಿನ ಮಾವು ಬೆಳೆಗಾರರ ಸಮಸ್ಯೆಗಳ ಬಗ್ಗೆ ಮಾಹಿತಿ ಪಡೆದಿದ್ದೇನೆ. ಅದಕ್ಕೆ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬೇಕಿದೆ. ಮುಖ್ಯಮಂತ್ರಿ ಬಳಿಯೂ ಮಾತನಾಡುತ್ತೇನೆ. ಮುಂದಿನ ದಿನಗಳಲ್ಲಿ ಉತ್ತರ ಕರ್ನಾಟಕದಲ್ಲೂ ಪ್ರವಾಸ ಮಾಡಿ ಅಲ್ಲಿನ ಮಾವು ಬೆಳೆಗಾರರ ಕಷ್ಟ ನಷ್ಟಗಳ ಬಗ್ಗೆ ಮಾಹಿತಿ ಪಡೆಯುತ್ತೇನೆ’ ಎಂದು ಹೇಳಿದರು.

ಜಿಲ್ಲಾ ಮಾವು ಬೆಳೆಗಾರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ನೀಲಟೂರು ಚಿನ್ನಪ್ಪರೆಡ್ಡಿ, 2019 ಹಾಗೂ 2025ರಲ್ಲಿ ಮಾವು ಬೆಳೆಗಾರರು ಅನುಭವಿಸಿದ್ದ ಕಷ್ಟ, ನಷ್ಟಗಳ ಬಗ್ಗೆ ವಿವರಿಸಿದರು.

ಮಾವು ಅಭಿವೃದ್ಧಿ ಮಂಡಲಿ ವ್ಯವಸ್ಥಾಪಕ ಟಿ.ಆರ್.ವೇದಮೂರ್ತಿ, ತೋಟಗಾರಿಕೆ ಉಪನಿರ್ದೇಶಕ ಕುಮಾರಸ್ವಾಮಿ, ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ದಿಂಬಾಲ್ ಅಶೋಕ್, ತೋಟಗಾರಿಕೆ ಹಿರಿಯ ತಾಲ್ಲೂಕು ನಿರ್ದೇಶಕ ಎಂ.ಶ್ರೀನಿವಾಸನ್, ಎಎಚ್ಒಗಳಾದ ಎನ್.ಹರೀಶ್, ಮಂಜುನಾಥ್, ರಮ್ಯರಾಣಿ, ಶ್ರೀನಿವಾಸ್, ಹೊಗಳಗೆರೆ ತೋಟಗಾರಿಕೆ ನಿರ್ದೇಶಕ ಮಂಜುನಾಥ್, ಮಾವು ಮಂಡಲಿ ಉಪನಿರ್ದೇಶಕಿ ಅಸ್ಮನಾಜ್, ಮಾವು ಬೆಳೆಗಾರರ ತಾಲ್ಲೂಕು ಅಧ್ಯಕ್ಷ ಸೀತರಾಮರೆಡ್ಡಿ, ವಿಜ್ಞಾನಿಗಳಾದ ನಟರಾಜ್, ಗಂಗಾಧರ್, ಆಂಜನೇಯರೆಡ್ಡಿ, ಶಿವಾರೆಡ್ಡಿ, ಶ್ರೀನಿವಾಸಗೌಡ, ಕೃಷಿ ಅಧಿಕಾರಿ ಮಹೇಶ್ಬಾಬು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.