ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನ.12ಕ್ಕೆ ನಗರಸಭೆ ಚುನಾವಣೆ: ಪರಿಶೀಲನೆ

ಭದ್ರತಾ ಕೋಠಡಿಗೆ ಜಿಲ್ಲಾಧಿಕಾರಿ ಜೆ.ಮಂಜುನಾಥ್ ಭೇಟಿ
Last Updated 9 ನವೆಂಬರ್ 2019, 17:30 IST
ಅಕ್ಷರ ಗಾತ್ರ

ಕೋಲಾರ: ಜಿಲ್ಲೆಯ ಮೂರು ನಗರಸಭೆಗಳಿಗೆ ನ.12ರಂದು ನಡೆಯಲಿರುವ ಚುನಾವಣೆ ಸಂಬಧ ಶನಿವಾರ ಜಿಲ್ಲಾಧಿಕಾರಿ ಜೆ.ಮಂಜುನಾಥ್ ಇಲ್ಲಿನ ಜೂನಿಯರ್ ಕಾಲೇಜಿಗೆ ಭೇಟಿ ನೀಡಿ, ಮತಯಂತ್ರಗಳ ಪರಿಶೀಲನೆ ನಡೆಸಿದರು.

ಮತಂಯತ್ರಗಳಲ್ಲಿ ಅಭ್ಯರ್ಥಿಗಳ ಬ್ಯಾಲೆಟ್ ಪೇಪರ್‌ ಜೋಡಣೆ ಮಾಡಲಾಗುತ್ತಿದ್ದು, ಪ್ರಕ್ರಿಯೆಯನ್ನು ವೀಕ್ಷಿಸಿ ಯಾವುದೇ ಗೊಂದಲಗಳಿಗೆ ಅವಕಾಶ ನೀಡದಂತೆ ಅಧಿಕಾರಿ, ಸಿಬ್ಬಂದಿಗೆ ಸೂಚಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಜಿಲ್ಲಾಧಿಕಾರಿ ಜೆ.ಮಂಜುನಾಥ್, ‘ಮೂರು ನಗರಸಭೆಗಳ ಚುನಾವಣೆಗೆ ಸಿದ್ದತೆ ಮಾಡಿಕೊಳ್ಳಲಾಗುತ್ತಿದ್ದು, ಯಾವುದೇ ಲೋಪದೋಷಗಳು ಎದುರಾಗದಂತೆ ಎಚ್ಚರವಹಿಸಲಾಗಿದೆ’ ಎಂದು ತಿಳಿಸಿದರು.

‘ಅಭ್ಯರ್ಥಿಗಳನ್ನು ಮತಂತ್ರಗಳ ಗುಂಡಿಗಳಿಗೆ ಸೆಟ್ ಮಾಡಲಾಗುತ್ತಿದ್ದು, ಆ ಪ್ರಕ್ರಿಯೆ ಮಾಡಿದ ಬಳಿಕ ಪ್ರಾಯೋಗಿಕವಾಗಿ ಮತದಾನವನ್ನೂ ಮಾಡಿ ಪರಿಶೀಲನೆ ನಡೆಸಿ, ಅದನ್ನು ಅಳಿಸಿದ ಬಳಿಕ ಚುನಾವಣೆ ಕಾರ್ಯಕ್ಕೆ ಬಳಸಲಾಗುತ್ತದೆ’ ಎಂದು ಹೇಳಿದರು.

‘ಈಗಾಗಲೇ ಚುನಾವಣೆ, ಮತದಾನಕ್ಕೆ ಸಂಬಧಿಸಿದಂತೆ ಸಿಬ್ಬಂದಿಗೆ ಅಗತ್ಯ ತರಬೇತಿ ನೀಡಲಾಗಿದ್ದು, ನ.೧೧ರಂದು ಮತದಾನಕ್ಕೆ ಬೇಕಿರುವ ಪರಿಕರಗಳನ್ನು ಪಡೆದುಕೊಳ್ಳಬಹುದು, ನ.೧೦ರಂದೇ ಪರಿಕರಗಳನ್ನು ನಿಗಧಿ ಮಾಡಲಾಗುತ್ತದೆ. ಪ್ರತಿ ಮತದಾನ ಕೇಂದ್ರಕ್ಕೂ ೪ ಮಂದಿ ಸಿಬ್ಬಂದಿಯನ್ನು ನಿಯೋಜಿಸಲಾಗಿದ್ದು, ಪೊಲೀಸ್ ಸಿಬ್ಬಂದಿಯನ್ನೂ ನೇಮಿಸಲಾಗಿದೆ’ ಎಂದು ವಿವರಿಸಿದರು.

‘ನೀತಿ ಸಂಹಿತೆ ಉಲ್ಲಂಘನೆ ತಡೆಯಲು ಎಂಸಿಸಿ ತಂಡ ರಚನೆ ಮಾಡಲಾಗಿದ್ದು, ಇದರ ನಡುವೆಯೂ ಶುಕ್ರವಾರ ನಗರದ 25ವಾರ್ಡಿನ ಅಭ್ಯರ್ಥಿ ಪರ ಬೆಂಬಲಿಗರು ಕೈಗಡಿಯಾರ ಹಂಚಿಕೆ ಮಾಡುತ್ತಿದ್ದರು ಪತ್ತೆಯಾಗಿದೆ, ಇದಕ್ಕೆ ಸಂಬಂಧಿಸಿದಂತೆ ಕೈಗಡಿಯಾರ ತಂದಿದ್ದ ವೈಕ್ತಿಯ ವಿರುದ್ಧ ದೂರು ದಾಖಲಿಸಲಾಗಿದೆ’ ಎಂದು ತಿಳಿಸಿದರು.

‘ಇತ್ತೀಚಿಗೆ ರಾತ್ರಿ 2 ಗಂಟೆ ಸಮಯದಲ್ಲಿ ಕುಕ್ಕರ್‌ಗಳನ್ನು ಹಂಚಲಾಗುತ್ತಿದೆ ಎಂಬ ಬಗ್ಗೆಯೂ ಮಾಹಿತಿ ಬಂದಿದ್ದು, ಪರಿಶೀಲನೆ ನಡೆಸಲಾಗಿದೆ. ಯಾವುದೇ ವಾರ್ಡ್‌ನಲ್ಲಿ ಇಂತಹ ಚಟುವಟಿಕೆಗಳು ಕಂಡುಬಂದಲ್ಲಿ ಸಾರ್ವಜನಿಕರು ಮುಕ್ತವಾಗಿ ಪೊಲೀಸ್‌ಠಾಣೆ ಅಥವಾ ತಮಗೆ ದೂರು ಸಲ್ಲಿಸಬಹುದು’ ಎಂದು ಹೇಳಿದರು.

‘ಈಗಾಗಲೇ 144 ಸೆಕ್ಷನ್ ಜಾರಿ ಮಾಡಲಾಗಿರುವುದರಿಂದ ಚುನಾವಣೆಗೆ ಅನುಕೂಲವಾಗಲಿದ್ದು, ಶಾಂತಿಯುತ ಮತದಾನಕ್ಕೆ ಪ್ರತಿಯೊಬ್ಬರೂ ಕೈಜೋಡಿಸಬೇಕು’ ಎಂದು ಮನವಿ ಮಾಡಿದರು.

‘ಅಯೋಧ್ಯೆ ತೀರ್ಪು ಪ್ರಕಟವಾಗಿದ್ದು, ಈ ಸಂಬಂಧ ಯಾರು ಸಹ ತೀರ್ಪು ವಿಜಯೋತ್ಸವ ಆಚರಿಸುವುದಾಗಲೀ ವಿರೋಧ ವ್ಯಕ್ತಪಡಿಸುವುದಾಗಲೀ ಅಗತ್ಯವಿಲ್ಲ. ಎಂದಿನಂತೆ ದೈನಂದಿನ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಬೇಕು. ಈದ್ ಮಿಲಾದ್ ಪೂರ್ವಭಾವಿ ಸಭೆಯಲ್ಲಿಯೂ ಈಗಾಗಲೇ ಮನವಿ ಮಾಡಲಾಗಿದೆ. ಇದರ ಹೊರತಾಗಿಯೂ ಯಾರಾದರೂ ಕುಚೇಷ್ಟೆಗಳಿಗೆ ಕೈ ಹಾಕಿದರೆ ಮುಲಾಜಿಲ್ಲದೆ ಕ್ರಮಕೈಗೊಳ್ಳಲಾಗುವುದು. ಯಾರೊಬ್ಬರೂ ಅನುಮಾನದ ಸಂದೇಶಗಳಿಗೆ ಕಿವಿಗೊಡದೆ ಸಮಾಜದಲ್ಲ ಶಾಂತಿ ಸುವ್ಯವಸ್ಥೆಗೆ ಧಕ್ಕೆಯಾಗದಂತೆ ನಡೆದುಕೊಳ್ಳಬೇಕು’ ಎಂದು ಎಚ್ಚರಿಕೆ ನೀಡಿದರು.

ಉಪವಿಭಾಗಾಧಿಕಾರಿ ಸೋಮಶೇಖರ್, ತಹಶೀಲ್ದಾರ್ ಶೋಭಿತಾ, ಡಿಡಿಎಲ್‌ಆರ್ ಗೋಪಾಲಯ್ಯ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT