ಗುರುವಾರ , ಸೆಪ್ಟೆಂಬರ್ 23, 2021
28 °C

ಕ್ಷೇತ್ರಕ್ಕೆ ಅನ್ಯಾಯ ಮಾಡಿದ್ದೆ ಮುನಿಯಪ್ಪ ಸಾಧನೆ: ಸಂಸದ ಎಸ್.ಮುನಿಸ್ವಾಮಿ ಕಿಡಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೋಲಾರ: ‘ಮಾಜಿ ಸಂಸದ ಕೆ.ಎಚ್.ಮುನಿಯಪ್ಪ ಅಧಿಕಾರದಲ್ಲಿದಾಗ ಏನು ಸಾಧನೆ ಮಾಡಕ್ಕೆ ಸಾಧ್ಯವಾಗಿಲ್ಲ, ಈಗ ಹೋರಾಟ ಮಾಡಿ ಏನು ಸಾಧನೆ ಮಾಡಲು ಸಾಧ್ಯ’ ಎಂದು ಸಂಸದ ಎಸ್.ಮುನಿಸ್ವಾಮಿ ತಿರುಗೇಟು ನೀಡಿದರು.

ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ನಾನು ಕೋಲಾರ ಜಿಲ್ಲೆಯವನೆ ಅಗಿರುವುದರಿಂದ ಸ್ಥಳೀಯ ವಿಚಾರಗಳ ಬಗ್ಗೆ ಮಾಹಿತಿ ಇದೆ. ಕೆ.ಎಚ್.ಮುನಿಯಪ್ಪ 28 ವರ್ಷ ಅಧಿಕಾರದಲ್ಲಿ ಇದ್ದು, ಏನು ಸಾಧನೆ ಮಾಡಿದ್ದಾರೆ ಎಂಬುದಕ್ಕೆ ಸಾಕ್ಷಿಯಿದೆ’ ಎಂದು ಹೇಳಿದರು.

‘ಹಿಂದೆ ಮಾಜಿ ಸಂಸದ ಕೆ.ಎಚ್.ಮುನಿಯಪ್ಪ ರಿಯಲ್‌ಎಸ್ಟೇಟ್‌ಗೆ ಪ್ರವೇಶ ಮಾಡಿ ಜಮೀನಿಗೆ ಬೆಲೆಯಿಲ್ಲದ ಕಡೆ ವಿನಾಕಾರಣ ಜಮೀನಿನ ದರ ಹೆಚ್ಚು ಮಾಡಿಸಿದರು. ಜಿಲ್ಲೆಗೆ ಮತ್ತು ಲೋಕಸಭಾ ಕ್ಷೇತ್ರಕ್ಕೆ ಅನ್ಯಾಯ ಮಾಡಿದ ಅವರ ದೊಡ್ಡ ಸಾಧನೆ’ ಎಂದು ಆರೋಪಿಸಿದರು.

‘ಇಲ್ಲಿ ರೈಲು ತಯಾರಿಕ ಘಟಕ ಸ್ಥಾಪನೆಯಾವುದಿಲ್ಲ ಎಂಬ ಮಾಹಿತಿ ಅವರಿಗೆ ಅರಿವಿತ್ತು. ಆದರೆ ಚುನಾವಣೆಯಲ್ಲಿ ಜನ ಮತ ಹಾಕುವುದಿಲ್ಲ ಎಂಬ ಭೀತಿಯಿಂದ ವಿಚಾರ ಹೇಳಿರಲಿಲ್ಲ’ ಎಂದು ದೂರಿದರು.

‘ನಾನು ಸಂಸದನಾಗಿ ಆಯ್ಕೆಯಾದಾಗ ಮೊದಲು ರೈಲು ತಯಾರಿಕ ಘಟಕದ ಕುರಿತು ಅಧಿಕಾರಿಗಳನ್ನು ಕೇಳಿದಾಗ ಸಂಪೂರ್ಣ ವಿಚಾರ ತಿಳಿಸಿದರು. ಯೋಜನೆ ಅನುಷ್ಟಾನಗೊಳ್ಳುವ ಸ್ಥಳದಲ್ಲಿ ರೈತರನ್ನು ಎತ್ತಿ ಕಟ್ಟಿ ಜಮೀನಿನ ದರ ಹೆಚ್ಚಿಗೆ ಮಾಡಿಸಿದರು’ ಎಂದು ಆರೋಪಿಸಿದರು.

‘ಈಗಾಗಲೇ ದೇಶದಲ್ಲಿ ರೈಲು ತಯಾರಿಕ ಘಟಕಗಳು ಹೆಚ್ಚಿನ ಸಂಖ್ಯೆಯಲ್ಲಿ ಇರುವುದರಿಂದ ರೈಲು ದುರಸ್ತಿ ಕಾರ್ಯಾಗಾರ ಸ್ಥಾಪನೆ ಮಾಡಲು ಕೇಂದ್ರ ಮತ್ತು ರಾಜ್ಯ ರೈಲ್ವೆ ಸಚಿವರು ತಿಳಿಸಿದ್ದು, ಈ ಯೋಜನೆ ಅನುಷ್ಟಾನಗೊಳಿಸಲು ಕ್ರಮಕೈಗೊಳ್ಳಲಾಗುವುದು’ ಎಂದು ಹೇಳಿದರು.

‘ಇದರಿಂದಾಗ ರೈಲು ದುರಸ್ತಿ ಕಾರ್ಯಾಗಾರ ಸ್ಥಾಪನೆಗೆ 530 ಎಕರೆ ಜಾಗವನ್ನು ಕೂಡಲೇ ಹಸ್ತಾಂತರ ಮಾಡಲು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಜಿಲ್ಲಾಡಳಿತಕ್ಕೆ ನಿರ್ದೇಶನ ನೀಡಿದ್ದು, ಕೆಲಸ ಶುರುವಾಗಿದೆ’ ಎಂದು ವಿವರಿಸಿದರು.

‘ಕೆ.ಎಚ್.ಮುನಿಯಪ್ಪ ಅವರ ಆಟ ಇನ್ನು ಮುಂದು ಏನು ನಡೆಯಲ್ಲ. ಹೊಸ ವರ್ಷ ಹೊಸ ಅವತಾರ ಬಿಡಬೇಕು, ರಮೇಶ್‌ಕುಮಾರ್ ಅವರಿಂದ ಅನೇಕ ವಿಚಾರಗಳ ಬಗ್ಗೆ ತಿಳಿದುಕೊಳ್ಳಬೇಕಾದ ಅಗತ್ಯವಿದೆ. ನಾವು ಕೆಲಸನ್ನ ಮಾಡಿ ತೋರಿಸುತ್ತೆವೆ, ಅಟಲ್ ಭೂ ಜಲ್ ಯೋಜನೆಯಡಿ ಜಿಲ್ಲೆಗೆ ₹ 200 ಕೋಟಿ ಮಂಜೂರಾಗಿದೆ, ಇಂತಹ ಅಭಿವೃದ್ಧಿಗೆ ಕೆಲಸಗಳಿಗೆ ಪ್ರತಿಯೊಬ್ಬರು ಸಹಕಾರ ನೀಡಬೇಕು’ ಎಂದು ಮನವಿ ಮಾಡಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು