ಗುರುವಾರ , ಆಗಸ್ಟ್ 5, 2021
23 °C

100ರ ಗಡಿ ದಾಟಿದ ಸೋಂಕಿತರ ಸಂಖ್ಯೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೋಲಾರ: ಜಿಲ್ಲೆಯಲ್ಲಿ ಶನಿವಾರ 3 ತಿಂಗಳ ಮಗು ಸೇರಿದಂತೆ 8 ಮಂದಿಗೆ ಕೊರೊನಾ ಸೋಂಕು ಇರುವುದು ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆ ಶತಕದ ಗಡಿ ದಾಟಿದೆ.

ಜಿಲ್ಲೆಯಲ್ಲಿ ಮೇ 12ರಂದು ಮೊದಲ ಬಾರಿಗೆ ಕೊರೊನಾ ಸೋಂಕಿತರು ಪತ್ತೆಯಾಗಿದ್ದರು. ಶುಕ್ರವಾರದವರೆಗೆ (ಜುಲೈ 3) ಜಿಲ್ಲೆಯಲ್ಲಿ 94 ಮಂದಿ ಸೋಂಕಿತರಿದ್ದರು. ಶನಿವಾರದ ವೇಳೆಗೆ ಸೋಂಕಿತರ ಸಂಖ್ಯೆ 102ಕ್ಕೆ ಏರಿಕೆಯಾಗಿದೆ.

ಜಿಲ್ಲಾ ಕೇಂದ್ರದ ದರ್ಗಾ ಮೊಹಲ್ಲಾದಲ್ಲಿ ಕೊರೊನಾ ಸೋಂಕಿನಿಂದ ಜೂನ್‌ 29ರಂದು ಮೃತಪಟ್ಟಿದ್ದ ವಯೋವೃದ್ಧ ವ್ಯಕ್ತಿಯ ಪ್ರಕರಣವು ಆರೋಗ್ಯ ಇಲಾಖೆಯನ್ನು ಬೆಚ್ಚಿ ಬೀಳಿಸಿದೆ. ಈ ವ್ಯಕ್ತಿಯೊಬ್ಬರ ಸಂಪರ್ಕದಿಂದಲೇ ಈವರೆಗೆ ಸುಮಾರು 10 ಮಂದಿಗೆ ಸೋಂಕು ತಗುಲಿದೆ.

ಈ ವ್ಯಕ್ತಿಯ ಸಂಬಂಧಿಕರು ಹಾಗೂ ಅಕ್ಕಪಕ್ಕದ ಮನೆಯವರು ಸೇರಿದಂತೆ ಶನಿವಾರ 5 ಮಂದಿಗೆ ಸೋಂಕು ಹರಡಿರುವುದು ಖಚಿತವಾಗಿದೆ. ಇನ್ನೂ ಸುಮಾರು 150 ಮಂದಿಯ ವೈದ್ಯಕೀಯ ವರದಿ ಬರಬೇಕಿದ್ದು, ಸೋಂಕಿತರ ಸಂಖ್ಯೆ ಹೆಚ್ಚಳವಾಗುವ ಆತಂಕವಿದೆ. ಕೋಲಾರದ ಕೋಟೆ ಬಡಾವಣೆಯಲ್ಲಿ 50 ಪುರುಷರೊಬ್ಬರಿಗೆ ಸೋಂಕು ತಗುಲಿದೆ.

ಮುಳಬಾಗಿಲು ತಾಲ್ಲೂಕಿನ ಚೋಳನಗುಂಟೆ ಗ್ರಾಮದ ಆರೋಗ್ಯ ಕಾರ್ಯಕರ್ತರೊಬ್ಬರಿಗೆ ಸೋಂಕು ಹರಡಿರುವುದು ಖಚಿತವಾಗಿದೆ. ಇವರು ಮುಳಬಾಗಿಲಿನ ಖಾಸಗಿ ಆಸ್ಪತ್ರೆಯೊಂದರಲ್ಲಿ ಕೆಲಸ ಮಾಡುತ್ತಾರೆ. ಇದೇ ತಾಲ್ಲೂಕಿನ ದೊಡ್ಡಗುರ್ಕಿ ಗ್ರಾಮದ 65 ವರ್ಷದ ವಯೋವೃದ್ಧೆಗೆ ಸೋಂಕು ಇರುವುದು ಗೊತ್ತಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು