ಶನಿವಾರ, 20 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮುಳಬಾಗಿಲು: ಕಲುಷಿತ ನೀರು ಕುಡಿದು ವ್ಯಕ್ತಿ ಸಾವು?

Published 24 ಜೂನ್ 2024, 8:13 IST
Last Updated 24 ಜೂನ್ 2024, 8:13 IST
ಅಕ್ಷರ ಗಾತ್ರ

ಮುಳಬಾಗಿಲು (ಕೋಲಾರ): ತಾಲ್ಲೂಕಿನ ಊರುಕುಂಟೆ ಮಿಟ್ಟೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಿಂಜೇನಹಳ್ಳಿ ಗ್ರಾಮದ ವ್ಯಕ್ತಿಯೊಬ್ಬರು ಕಲುಷಿತ ನೀರು ಕುಡಿದು ಮೃತಪಟ್ಟಿರುವುದು ಗೊತ್ತಾಗಿದೆ.

ವೆಂಕಟರಮಣಪ್ಪ (50) ಮೃತ ವ್ಯಕ್ತಿ. ಪ್ರಕರಣದಲ್ಲಿ ಐದಕ್ಕೂ ಅಧಿಕ ಮಂದಿ ಅಸ್ವಸ್ಥರಾಗಿದ್ದು, ಎಸ್ ಎನ್‌ ‌ಆರ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಗ್ರಾಮ ಪಂಚಾಯಿತಿ ಟ್ಯಾಂಕ್ ನಿಂದ ಮನೆಗಳಿಗೆ ನಲ್ಲಿ ಸಂಪರ್ಕ ಕಲ್ಪಿಸಲಾಗಿದ್ದು, ನೀರು ಕಲುಷಿತಗೊಂಡಿತ್ತು ಎನ್ನಲಾಗಿದೆ.

'ವೆಂಕಟರಮಣಪ್ಪ ಎಂಬುವರು ಮೃತಪಟ್ಟಿದ್ದು, ಕೆಲವರು ಅಸ್ವಸ್ಥಗೊಂಡಿರುವುದು ನಿಜ. ಆದರೆ, ನೀರಿನ ಸಮಸ್ಯೆಯಿಂದ ಅಲ್ಲ. ನೀರನ್ನು ಪರೀಕ್ಷೆ ಮಾಡಿದ್ದು, ಕಲುಷಿತವಾಗಿಲ್ಲ‌. ಟಿಎಚ್‌ಒ ಭೇಟಿ ನೀಡಿ ಪರಿಶೀಲಿಸಿದರು' ಎಂದು ಪಂಚಾಯಿತಿ ಪಿಡಿಒ ಪದ್ಮಾ 'ಪ್ರಜಾವಾಣಿ'ಗೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT