ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋಲಾರ: ಆಟೊ ಚಲಾಯಿಸಿ ಗಮನ ಸೆಳೆದ ಎಸ್‌ಪಿ ಡಿ.ದೇವರಾಜ್‌

Last Updated 3 ನವೆಂಬರ್ 2022, 11:15 IST
ಅಕ್ಷರ ಗಾತ್ರ

ಕೋಲಾರ: ನಗರದಲ್ಲಿ ಕರ್ನಾಟಕ ರಾಜ್ಯೋತ್ಸವ ಅಂಗವಾಗಿ ಗುರುವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಿ.ದೇವರಾಜ್‌ ಸ್ವಲ್ಪ ದೂರ ಆಟೊ ಚಲಾಯಿಸಿ ಗಮನ ಸೆಳೆದರು.

ಜಯಚಾಮರಾಜೇಂದ್ರ ಒಡೆಯರ್ ಆಟೊ ಸಂಘದಿಂದ ಆಯೋಜಿಸಿದ್ದ ಈ ಕಾರ್ಯಕ್ರಮದಲ್ಲಿ ಅವರು ಆಟೊ ಚಾಲಕರಿ‌ಗೆ ಸಮವಸ್ತ್ರ ವಿತರಿಸಿದರು.

‘ಅಪರಾಧ ತಡೆಯುವಲ್ಲಿ ಆಟೊ ಚಾಲಕರ ವಿಶೇಷ ಪಾತ್ರವಿದೆ. ಹಲವಾರು ಪ್ರಕರಣಗಳಲ್ಲಿ ಅವರು ಪೊಲೀಸರಿಗೆ ಸಹಾಯ ಮಾಡುತ್ತಾರೆ. ರಾಮನಗರ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುವಾಗ ಆಟೊ ಚಾಲಕರಿಗೆ ನನ್ನ ಮೊಬೈಲ್‌ ಸಂಖ್ಯೆ ನೀಡಿದ್ದೆ. ಬಸ್‌ ನಿಲ್ದಾಣ ಸುತ್ತ ರಾತ್ರಿ ನಡೆಯುವ ಚಟುವಟಿಕೆಗಳ ಬಗ್ಗೆ ಮಾಹಿತಿ ನೀಡುತ್ತಿದ್ದರು. ಅಪರಾಧ ಪತ್ತೆ ಹಚ್ಚುವಲ್ಲಿ ಅವರಿಂದ ಹಲವು ಸುಳಿವುಗಳು ಸಿಗುತ್ತವೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

'ಹೊರಗಿನಿಂದ‌ ಬರುವ ಪ್ರವಾಸಿಗರು ಹಾಗೂ ಇತರ ಜನರು ಮೊದಲು ಭೇಟಿ‌‌ ಮಾಡುವುದೇ ಆಟೊ ಚಾಲಕರನ್ನು. ಹೀಗಾಗಿ, ಆಟೊ‌ ಚಾಲಕರು ನೀಟಾಗಿರಬೇಕು. ಸಾರ್ವಜನಿಕರ ಜೊತೆ ‌ಪ್ರೀತಿಯಿಂದ‌‌ ವರ್ತಿಸಬೇಕು. ಖುಷಿಯಿಂದ‌ ಮಾತನಾಡಿಸಬೇಕು.‌ ಕೆಟ್ಟ ವರ್ತನೆ ಇಡೀ ಜಿಲ್ಲೆಗೆ ಅಗೌರವ ಉಂಟು ಮಾಡಿಬಿಡುತ್ತದೆ' ಎಂದು ಎಚ್ಚರಿಕೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT