ಕೆಜಿಎಫ್: ಜಿಲ್ಲೆಗೆ ಶಾಶ್ವತ ನೀರಿನ ಯೋಜನೆ ಜಾರಿಗೆ ತರುವಂತೆ ಒತ್ತಾಯಿಸಿ ಮಂಗಳವಾರ ರಾಬರ್ಟಸನ್ಪೇಟೆ ಕಿಂಗ್ ಜಾರ್ಜ್ ಹಾಲ್ನಲ್ಲಿ ವಿವಿಧ ಸಂಘಟನೆಗಳಿಗೆ ಸೇರಿದ ನೂರಾರು ಮುಖಂಡರು ಸರ್ಕಾರದ ಮೇಲೆ ಒತ್ತಡ ಹೇರಲು ನಿರ್ಧರಿಸಿದರು.

ಸದಾ ಬರಗಾಲವನ್ನು ಎದುರಿಸುವ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗೆ ಸರ್ಕಾರ ಕೊಳಚೆ ನೀರಿನ ಭಾಗ್ಯ ಕೊಟ್ಟಿದೆ. ಹಲವು ವರ್ಷಗಳಿಂದ ಸಂಘಟನೆಗಳು ಶಾಶ್ವತ ಕುಡಿಯುವ ನೀರಿಗೆ ಆಗ್ರಹಿಸಿ ನಡೆಸುತ್ತಿರುವ ಹೋರಾಟಕ್ಕೆ ಯಾವುದೇ ಸರ್ಕಾರ ಕೂಡ ಸ್ಪಂದಿಸುತ್ತಿಲ್ಲ. ಇದಕ್ಕೆ ಜನ ಪ್ರತಿನಿಧಿಗಳು ಕೂಡ ಬೆಂಬಲ ನೀಡುತ್ತಿಲ್ಲ. ತೆಲಂಗಾಣ ಮಾದರಿಯಲ್ಲಿ ಹೋರಾಟ ನಡೆಸುವ ಅವಶ್ಯ ಇದೆ ಎಂದು ಮುಖಂಡ ರಮೇಶ್ ಹೇಳಿದರು.

ಜಲಾಗ್ರಹ ನಮ್ಮ ಹಕ್ಕು. ಬೆಂಗಳೂರಿನ ಕಸವನ್ನು ಕೆಜಿಎಫ್ನಲ್ಲಿ ತಂದು ಸುರಿಯುವ ಯೋಜನೆ ಬಯಲಿಗೆ ಬಂದಾಗ ಇಡೀ ಜನ ದಂಗೆದ್ದರು. ಸರ್ಕಾರ ಸುಮ್ಮನಾಯಿತು. ಈಗ ಅದಕ್ಕಿಂತಲೂ ವಿಷಕಾರಿಯಾದ ಕೊಳಚೆ ನೀರನ್ನು ಬಿಡುತ್ತಿರುವಾಗ ನಾವು ಸುಮ್ಮನಿದ್ದರೆ ಮುಂದಿನ ಪೀಳಿಗೆಗೆ ಅನ್ಯಾಯ ಮಾಡಿದಂತೆ ಎಂದು ಹೇಳಿದರು.

ಕೆಜಿಎಫ್ ಚಿನ್ನದ ಗಣಿಯಲ್ಲಿ ಸುಮಾರು ನಾಲ್ಕು ಟಿಎಂಸಿ ನೀರಿದೆ. ಅದು ಯೋಗ್ಯವಾದ ನೀರು. ಅದನ್ನು ಬಳಸಿಕೊಂಡರೆ ನೀರಿನ ಅಭಾವವನ್ನು ಈ ಭಾಗದಲ್ಲಿ ತಪ್ಪಿಸಬಹುದು ಎಂದು ಸಿಪಿಐ ಮುಖಂಡ ಜ್ಯೋತಿಬಸು ಮಾಹಿತಿ ನೀಡಿದರು.

ಮುಖಂಡ ಹೊಳಲಿ ಪ್ರಕಾಶ್ ಮಾತನಾಡಿ, ನೆರೆಯ ಆಂಧ್ರಪ್ರದೇಶ ಸರ್ಕಾರ ಕೃಷ್ಣಾ ನೀರನ್ನು ತಾಲ್ಲೂಕಿನ ಗಡಿ ಭಾಗದಲ್ಲಿ ಹರಿಸುತ್ತಿದೆ. ಕೃಷ್ಣಾ ನದಿ ನೀರಿನಲ್ಲಿ ನಮ್ಮ ಹಕ್ಕು ಕೂಡ ಇದೆ. ಅದನ್ನು ಪಡೆಯುವ ಪ್ರಕ್ರಿಯೆಗೆ ಚಾಲನೆ ನೀಡಬೇಕು ಎಂದು ಕೋರಿದರು.

ರಾಬರ್ಟಸನ್ಪೇಟೆ ನಗರಸಭೆ ಅಮೃತ ಸಿಟಿ ಯೋಜನೆಯಲ್ಲಿ ಬೇತಮಂಗಲದಿಂದ ಕೆಜಿಎಫ್ ನಗರಕ್ಕೆ ನೀರು ತರಲು 14 ಕಿ.ಮೀ ಉದ್ದದ ಪೈಪ್ಗಳನ್ನು ಅಳವಡಿಸಿತು. ಅಮೃತ ಸಿಟಿ ಯೋಜನೆಯ ಶೇ60ರಷ್ಟು ಹಣವನ್ನು ಕುಡಿಯುವ ನೀರಿಗೆ ವೆಚ್ಚ ಮಾಡಲಾಯಿತು. ಆದರೆ, ಇದುವರೆಗೂ ನಗರದ ಮನೆಗೆ ಒಂದು ತೊಟ್ಟು ನೀರು ಹೋಗಲಿಲ್ಲ ಎಂದು ನಗರಸಭೆ ಮಾಜಿ ಅಧ್ಯಕ್ಷ ದಯಾನಂದ್ ವಿಷಾದ ವ್ಯಕ್ತಪಡಿಸಿದರು.

ಶಾಸಕಿ ರಾಮಕ್ಕ ಅವಿದ್ಯಾವಂತರಾಗಿದ್ದರೂ ಶಾಶ್ವತ ಕುಡಿಯುವ ನೀರಿಗಾಗಿ ಆಗ್ರಹಿಸಿ ವಿಧಾನಸಭೆಯಲ್ಲಿ ವಿಷಯ ಮಂಡನೆ ಮಾಡಿದ್ದರು ಎಂದು ಮಾಜಿ ಶಾಸಕ ವೈ.ಸಂಪಂಗಿ ಹೇಳಿದರು.

ಜಲಾಗ್ರಹ ಸಮಿತಿ ಅಧ್ಯಕ್ಷ ಆಂಜನೇಯರೆಡ್ಡಿ ಹೋರಾಟದ ರೂಪರೇಷೆ ಬಗ್ಗೆ ವಿವರಣೆ ನೀಡಿದರು.

ಜೆಡಿಎಸ್ ಮುಖಂಡ ರಮೇಶ್ ಬಾಬು, ಸಿಪಿಎಂ ಮುಖಂಡರಾದ ಎ.ಆರ್.ಬಾಬು, ತಂಗರಾಜ್, ಒಕ್ಕಲಿಗ ಸಂಘದ ನಿರ್ದೇಶಕ ಡಾ.ರಮೇಶ್, ತ್ಯಾಗರಾಜ್, ರಮೇಶ್ ಕುಮಾರ್, ಕನ್ನಡ ಸಂಘದ ಅಧ್ಯಕ್ಷ ಪ್ರಸನ್ನ ರೆಡ್ಡಿ, ಸುಲೋಚನ, ಸುನಿಲ್, ಡೆಕ್ಕನ್ ರಾಮಕೃಷ್ಣಪ್ಪ, ರಾಮಚಂದ್ರಪ್ಪ, ಅಶ್ವಿನಿ, ನಾಗರಾಜ್ ಮಾತನಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.