ನಾಲ್ಕಲ್ಲ, 40 ಶಾಸಕರು ರಾಜೀನಾಮೆ ಕೊಟ್ರು ಸ್ವೀಕರಿಸುತ್ತೇನೆ: ಸ್ಪೀಕರ್‌

7

ನಾಲ್ಕಲ್ಲ, 40 ಶಾಸಕರು ರಾಜೀನಾಮೆ ಕೊಟ್ರು ಸ್ವೀಕರಿಸುತ್ತೇನೆ: ಸ್ಪೀಕರ್‌

Published:
Updated:

ಕೋಲಾರ: ‘ವಿಧಾನಮಂಡಲ ಕಲಾಪಕ್ಕೆ ಗೈರಾಗಿರುವ ಶಾಸಕರ ಪೈಕಿ ಯಾರೊಬ್ಬರೂ ನನ್ನನ್ನು ಸಂಪರ್ಕಿಸಿಲ್ಲ’ ಎಂದು ವಿಧಾನಸಭಾಧ್ಯಕ್ಷ ಕೆ.ಆರ್.ರಮೇಶ್‌ಕುಮಾರ್ ತಿಳಿಸಿದರು.

ಇಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ಯಾವ ಶಾಸಕರು ರಾಜೀನಾಮೆ ನೀಡುತ್ತಾರೆ ಎಂಬ ಸಂಗತಿ ಗೊತ್ತಿಲ್ಲ. ಮೂರ್ನಾಲ್ಕು ಶಾಸಕರಲ್ಲ, 40 ಶಾಸಕರು ರಾಜೀನಾಮೆ ಕೊಟ್ಟರೂ ಸ್ವೀಕರಿಸುತ್ತೇನೆ’ ಎಂದರು.

‘ಕಲಾಪಕ್ಕೆ ಗೈರಾಗಿರುವ ಶಾಸಕರ ವಿರುದ್ಧ ಶಿಸ್ತುಕ್ರಮ ಕೈಗೊಳ್ಳುವ ಅಧಿಕಾರ ನನಗೆ ಇಲ್ಲ, ಯಾವ ಪಕ್ಷದ ಶಾಸಕರು ಸಭೆಗೆ ಬಂದಿಲ್ಲವೋ ಅವರ ವಿರುದ್ಧ ಆಯಾ ಪಕ್ಷಗಳ ನಾಯಕರು ಕ್ರಮ ತೆಗೆದುಕೊಳ್ಳುತ್ತಾರೆ’ ಎಂದು ಸ್ಪಷ್ಪಪಡಿಸಿದರು.

ಕಂಪ್ಲಿ ಕ್ಷೇತ್ರದ ಕಾಂಗ್ರೆಸ್ ಶಾಸಕ ಕೆ.ಎನ್‌.ಗಣೇಶ್‌ ಪ್ರಕರಣ ಸಂಬಂಧ ಪ್ರತಿಕ್ರಿಯಿಸಿದ ರಮೇಶ್‌ಕುಮಾರ್, ‘ಶಾಸಕನನ್ನು ಬಂಧಿಸುವಂತೆ ಆದೇಶಿಸಲು ನಾನು ಪೊಲೀಸ್ ಅಧಿಕಾರಿಯಲ್ಲ. ರಾಜಕೀಯ ಬೆಳವಣಿಗೆ ಕುರಿತು ಮಾಹಿತಿಯಿಲ್ಲ. ರಾಜ್ಯದಲ್ಲಿ ಚೆನ್ನಾಗಿ ಮಳೆ ಬೆಳೆ ಆಗಲಿ. ಜನರ ಸಮಸ್ಯೆಗೆ ಸ್ಪಂದಿಸುವ ಸಂದರ್ಭದಲ್ಲಿ ಬೇರೆ ವಿಚಾರಗಳ ಬಗ್ಗೆ ಚರ್ಚಿಸುವುದು ವ್ಯರ್ಥ’ ಎಂದರು.

ಬರಹ ಇಷ್ಟವಾಯಿತೆ?

 • 35

  Happy
 • 1

  Amused
 • 0

  Sad
 • 2

  Frustrated
 • 0

  Angry

Comments:

0 comments

Write the first review for this !