ಬುಧವಾರ, ಮೇ 25, 2022
29 °C

ಆವಣಿಯಲ್ಲಿ ಕಂದಾಯ ಅದಾಲತ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮುಳಬಾಗಿಲು: ‘ಸರ್ಕಾರಿ ಸೌಲಭ್ಯಗಳನ್ನು ಮನೆಬಾಗಿಲಿಗೆ ತಲುಪಿಸಲು ಕಂದಾಯ ಮತ್ತು ಪಿಂಚಣಿ ಅದಾಲತ್ ನಡೆಸಲಾಗುತ್ತಿದೆ’ ಎಂದು ಕೋಲಾರ ಉಪವಿಭಾಗಾಧಿಕಾರಿ ಸೋಮಶೇಖರ್ ಹೇಳಿದರು.

ತಾಲ್ಲೂಕಿನ ಅವಣಿ ಗ್ರಾಮದ ರಾಮಲಿಂಗೇಶ್ವರ ದೇವಾಲಯದ ಆವರಣದಲ್ಲಿ ಬುಧವಾರ ಏರ್ಪಡಿಸಲಾಗಿದ್ದ ಕಂದಾಯ ಮತ್ತು ಪಿಂಚಣಿ ಅದಾಲತ್‌ನಲ್ಲಿ ಮಾತನಾಡಿದರು.

ತಹಶೀಲ್ದಾರ್ ಕೆ.ಎನ್.ರಾಜಶೇಖರ್ ಮಾತನಾಡಿ, ಅದಾಲತ್‌ನಲ್ಲಿ ಸ್ವೀಕರಿಸಲಾದ ಎಲ್ಲ ಅರ್ಜಿಗಳ ನೈಜತೆಯನ್ನು ತಿಳಿದು ಸೌಲಭ್ಯ ನೀಡಲಾಗುವುದು. ಸೌಲಭ್ಯ ನೀಡಲು ಸಾಧ್ಯವಾಗದಿದ್ದಲ್ಲಿ ಅರ್ಜಿದಾರರಿಗೆ ಕಾರಣ ನೀಡಲಾಗುವುದು. ಅದಾಲತ್ ಕಾರ್ಯಕ್ರಮದಲ್ಲಿ 670 ಅರ್ಜಿ ಸ್ವೀಕೃತವಾಗಿದೆ ಎಂದರು.

ಸಂಧ್ಯಾ ಸುರಕ್ಷಾ ಅಡಿಯಲ್ಲಿ 229, ವೃದ್ಧಾಪ್ಯ ವೇತನ 10, ನಿರ್ಗತಿಕ ವಿಧಾವ ವೇತನ 31, ಅಂಗವಿಕಲ 12, ರಾಷ್ಟ್ರೀಯ ಕುಟುಂಬ 10, ಅಂತ್ಯಸಂಸ್ಕಾರಕ್ಕೆ ನೆರವು 3, ಮನಸ್ವಿನಿ 1, ಫವತಿ ಖಾತೆ 305, ಪಹಣಿ ತಿದ್ದುಪಡಿಗಾಗಿ 18, ಹಳೇಕ್ರಯ ಪತ್ರ ಖಾತೆ 10, ನ್ಯಾಯಾಲಯ ಅದೇಶ 5, ವಿಭಾಗಪತ್ರಕ್ಕಾಗಿ 7, ವಿಲ್ ಅಡಿ ಖಾತೆಗಾಗಿ 2, ಖಾತೆ ಸಂಬಂಧಿತ 27 ಅರ್ಜಿಗಳು ಬಂದಿದೆ ಎಂದರು.

ಜಿ.ಪಂ ಸದಸ್ಯ ಆರ್.ಕೃಷ್ಣಪ್ಪ, ಆವಣಿ ಗ್ರಾ.ಪಂ ಅಧ್ಯಕ್ಷ ಶ್ರೀರಾಮಪ್ಪ, ಊರುಕುಂಟಿ ಮಿಟ್ಟೂರು ಗ್ರಾ.ಪಂ ಅಧ್ಯಕ್ಷ ಎಂ.ವೆಂಕಟರಾಮಪ್ಪ, ಆವಣಿ ಗ್ರಾ.ಪಂ ಅಧ್ಯಕ್ಷ ಶ್ರೀರಾಮಪ್ಪ, ಉಪ ತಹಶೀಲ್ದಾರ್ ನಾರಾಯಣಸ್ವಾಮಿ, ಕಂದಾಯ ನಿರೀಕ್ಷಕ ಸಿ.ಸುಬ್ರಮಣ್ಯಂ, ಗಿರೀಶ್ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.