ಶನಿವಾರ, ಫೆಬ್ರವರಿ 29, 2020
19 °C

ಸೋಸೈಟಿಗಳು ಡಿಸಿಸಿ ಬ್ಯಾಂಕಿನ ಅವಿಭಾಗ್ಯ ಅಂಗ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ‘ರಾಜಕೀಯದಲ್ಲಿ ಪೈಪೋಟಿ, ಚುನಾವಣೆ ಇರಲಿ, ಆದರೆ ಸಹಕಾರಿ ರಂಗಗಳಲ್ಲಿ ಎಲ್ಲರೂ ಒಂದಾಗಿ, ಪಾರದರ್ಶಕವಾಗಿ ಸೊಸೈಟಿಯನ್ನು ಮುನ್ನಡೆಸುವ ಮೂಲಕ ಒಮ್ಮತದ ತೀರ್ಮಾನಕ್ಕೆ ಒತ್ತು ನೀಡಬೇಕು’ ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಎಂ.ಗೋವಿಂಡದಗೌಡ ಸಲಹೆ ನಿಡಿದರು.

ತಾಲ್ಲೂಕಿನ ಮದ್ದೇರಿ ರೇಷ್ಮೆ ಬೆಳೆಗಾರರ ಹಾಗೂ ರೈತರ ಸೇವಾ ಸಹಕಾರ ಸಂಘದ ಆಡಳಿತ ಮಂಡಳಿಗೆ ಆಯ್ಕೆಯಾಗಿರುವ ಅಧ್ಯಕ್ಷ, ಉಪಾಧ್ಯಕ್ಷ, ನಿರ್ದೇಶಕರನ್ನು ಇತ್ತೀಚಿಗೆ ಅಭಿನಂದಿಸಿ ಮಾತನಾಡಿ, ‘ಎಸ್‌ಎಫ್‌ಸಿಎಸ್‌ಗಳು ಡಿಸಿಸಿ ಬ್ಯಾಂಕಿನ ಅವಿಭಾಜ್ಯ ಅಂಗವಾಗಿದ್ದು, ಇಲ್ಲಿ ಯಾವುದೇ ಅವ್ಯವಹಾರಗಳಿಗೆ ಅವಕಾಶ ನೀಡಬಾರದು’ ಎಂದರು.

‘ಕೇವಲ ಸಾಲ ನೀಡಿ, ವಸೂಲಿಗೆ ಮಾತ್ರ ಸೀಮಿತವಾಗದೇ ಠೇವಣಿ ಸಂಗ್ರಹಕ್ಕೂ ಒತ್ತು ನೀಡಬೇಕು. ಇದರಿಂದ ಸಹಕಾರಿ ವ್ಯವಸ್ಥೆಯನ್ನು ಬಲಗೊಳಿಸಲು ಸಹಕಾರಿಯಾಗುತ್ತದೆ. ಪಕ್ಷಾತೀತ, ಜಾತ್ಯಾತೀತ ವ್ಯವಸ್ಥೆಗೆ ಪುರಸ್ಕಾರ ಸಿಗಬೇಕು. ಅಧಿಕಾರಕ್ಕಾಗಿ ಪೈಪೋಟಿ, ಚುನಾವಣೆ ನಡೆದರೆ ವ್ಯವಸ್ಥೆ ದುರ್ಬಲಗೊಳ್ಳಲು ಕಾರಣವಾಗುತ್ತದೆ’ಎಂದು ಹೇಳಿದರು.

ಡಿಸಿಸಿ ಬ್ಯಾಂಕ್ ನಿರ್ದೇಶಕ ಎಂ.ಎಲ್.ಅನಿಲ್‌ಕುಮಾರ್ ಮಾತನಾಡಿ, ‘ಆರ್ಥಿಕವಾಗಿ ದುರ್ಬಲಗೊಂಡು ನಿಷ್ಕ್ರಯಗೊಂಡಿದ್ದ ಸೊಸೈಟಿಗಳಿಗೆ ಈಗ ಮರು ಜೀವ ಬಂದಿದೆ. ಡಿಸಿಸಿ ಬ್ಯಾಂಕ್ ಬಲಗೊಂಡು ಎಲ್ಲಾ ಆರ್ಥಿಕ ನೆರವು ನೀಡುವ ಶಕ್ತಿ ಪಡೆದುಕೊಂಡಿದ್ದು, ಇದನ್ನು ಸದ್ವಿನಿಯೋಗಿಸಿಕೊಳ್ಳ’ ಎಂದು ಸಲಹೆ ನೀಡಿದರು.

ಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಸೋಮಣ್ಣ, ಕೆ.ವಿ.ದಯಾನಂದ್, ಎಸ್ಎಫ್‌ಸಿಎಸ್ ಅಧ್ಯಕ್ಷ ಎಂ.ಆರ್.ಶ್ರೀನಿವಾಸಗೌಡ, ಮಾಜಿ ಅಧ್ಯಕ್ಷ ಎಸ್.ರಾಮೇಗೌಡ, ಪಿಎಲ್‌ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ರಮೇಶ್, ನಿರ್ದೇಶಕರಾದ ವಿ.ಕೃಷ್ಣಪ್ಪ, ಎಂ.ಮಲ್ಲೇಗೌಡ, ಎನ್.ವೆಂಕಟರೆಡ್ಡಿ ಹಾಜರಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)