ಸೋಮವಾರ, 7 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಎಂಎಫ್‌ಎಆರ್‌ ತಂಡಕ್ಕೆ ಜಯ

Published : 27 ಸೆಪ್ಟೆಂಬರ್ 2023, 16:23 IST
Last Updated : 27 ಸೆಪ್ಟೆಂಬರ್ 2023, 16:23 IST
ಫಾಲೋ ಮಾಡಿ
Comments

ಬೆಂಗಳೂರು: ಎಸ್. ಅಕ್ಷಯ (61ನೇ ನಿಮಿಷ) ಗಳಿಸಿದ ಏಕೈಕ ಗೋಲಿನ ನೆರವಿನಿಂದ ಎಂಎಫ್‌ಎಆರ್‌ ಸ್ಟೂಡೆಂಟ್ಸ್‌ ಯೂನಿಯನ್‌ ಎಫ್‌ಸಿ ತಂಡವು ಬುಧವಾರ ಬಿಡಿಎಫ್‌ಎ ಸೂಪರ್‌ ಡಿವಿಷನ್‌ ಫುಟ್‌ಬಾಲ್‌ ಲೀಗ್‌ ಚಾಂಪಿಯನ್‌ಷಿಪ್‌ನ ಪಂದ್ಯದಲ್ಲಿ 1–0 ಯಿಂದ ರೆಬೆಲ್ಸ್‌ ಎಫ್‌ಸಿ ವಿರುದ್ಧ ಜಯ ಸಾಧಿಸಿತು.

ಮತ್ತೊಂದು ಪಂದ್ಯದಲ್ಲಿ ರಿಯಲ್‌ ಚಿಕ್ಕಮಗಳೂರು ಎಫ್‌ಸಿ ತಂಡವು 1–1ರಿಂದ ಎಫ್‌ಸಿ ಡೆಕ್ಕನ್‌ ತಂಡದೊಂದಿಗೆ ಡ್ರಾ ಸಾಧಿಸಿತು. ರಿಯಲ್‌ ತಂಡದ ಪರವಾಗಿ ಜಿಬಿನ್ ದೇವಸ್ಸಿ (90+6ನೇ), ಡೆಕ್ಕನ್‌ ತಂಡದ ಎನ್‌.ರಾಕೇಶ್ ಸಿಂಗ್ (90+7ನೇ) ತಲಾ ಒಂದು ಗೋಲು ಗಳಿಸಿದರು.

ಇಂದಿನ ಪಂದ್ಯಗಳು

ಬಿಯುಎಫ್‌ಸಿ– ಎಂಇಜಿ ಅಂಡ್‌ ಸೆಂಟರ್‌ ಎಫ್‌ಸಿ (ಮಧ್ಯಾಹ್ನ 1.30)

ರೂಟ್ಸ್‌ ಎಫ್‌ಸಿ– ಎಚ್ಎಎಲ್‌ ಎಫ್‌ಸಿ (ಮಧ್ಯಾಹ್ನ 3.30)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT