ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶ್ರೀಕೃಷ್ಣ ಸ್ತ್ರೀ ವ್ಯಾಮೋಹಿಯಲ್ಲ

Last Updated 11 ಆಗಸ್ಟ್ 2020, 16:06 IST
ಅಕ್ಷರ ಗಾತ್ರ

ಕೋಲಾರ: ‘ಶ್ರೀಕೃಷ್ಣ ದುಷ್ಟ ಶಿಕ್ಷಕ ಹಾಗೂ ಶಿಷ್ಟ ರಕ್ಷಕ. ಜಗತ್ತಿನಲ್ಲಿ ಅನ್ಯಾಯ ಮಾಡುವವರನ್ನು ಶಿಕ್ಷಿಸಿ ಒಳ್ಳೆಯವರನ್ನು ಕಾಪಾಡುತ್ತಾನೆ’ ಎಂದು ಜಿಲ್ಲಾಧಿಕಾರಿ ಸಿ.ಸತ್ಯಭಾಮ ಅಭಿಪ್ರಾಯಪಟ್ಟರು.

ಇಲ್ಲಿ ಮಂಗಳವಾರ ಜಿಲ್ಲಾಡಳಿತ ಭವನದಲ್ಲಿ ನಡೆದ ಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮದಲ್ಲಿ ಮಾತನಾಡಿ, ‘ಕೃಷ್ಣ ಸ್ತ್ರೀ ವ್ಯಾಮೋಹಿಯಲ್ಲ. ಏಕೆಂದರೆ ಕೃಷ್ಣನು ತಾನಾಗಿಯೇ ಹೋಗಿ ಮದುವೆಯಾಗಲಿಲ್ಲ. ಬದಲಿಗೆ 16 ಸಾವಿರ ಗೋಪಿಕೆಯರು ಕೃಷ್ಣನೇ ತಮ್ಮ ಗಂಡನೆಂದು ಒಪ್ಪಿಕೊಂಡು ಹಿಂದೆ ಬಂದರು’ ಎಂದರು.

‘ಕೃಷ್ಣನು ತಾಯಿಗೆ ಮಗನಾಗಿ, ಅಣ್ಣನಿಗೆ ತಮ್ಮನಾಗಿ, ಹೆಂಡತಿಯರಿಗೆ ಒಳ್ಳೆಯ ಪತಿಯಾಗಿ, ಸ್ನೇಹಿತರಿಗೆ ಒಳ್ಳೆಯ ಸ್ನೇಹಿತನಾಗಿ ಪರಿಪೂರ್ಣ ಜೀವನ ನಡೆಸಿದ. ಆದ್ದರಿಂದ ಕೃಷ್ಣನನ್ನು ಫೋಟೋದಲ್ಲಿ ನೋಡದೆ ಮಗನಲ್ಲಿ, ಸ್ನೇಹಿತರಲ್ಲಿ, ಪತಿಯಲ್ಲಿ ಕಾಣಬೇಕು’ ಎಂದು ತಿಳಿಸಿದರು.

ಜಿಲ್ಲಾ ಯಾದವ ಸಮುದಾಯದ ಮುಖಂಡರು ಜಿಲ್ಲಾಧಿಕಾರಿಗೆ ನೆನಪಿನ ಕಾಣಿಕೆ ನೀಡಿ ಪುರಸ್ಕರಿಸಿದರು. ಹರಿಕಥೆ ವಿದ್ವಾನ್‌ ಎನ್.ಆರ್.ಜ್ಞಾನಮೂರ್ತಿ ವಿಶೇಷ ಉಪನ್ಯಾಸ ನೀಡಿದರು. ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಶಿವಸ್ವಾಮಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ರವಿಕುಮಾರ್, ಯಾದವ ಸಮುದಾಯದ ಮುಖಂಡರು ಪಾಲ್ಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT