ಶ್ರೀನಿವಾಸಪುರ: ಕೋಳಿ ಫಾರಂ ನಿರ್ಮಾಣಕ್ಕೆ ಸಾಲ ನೀಡಿಕೆಯಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಆಪಾದಿಸಿ ರಾಜ್ಯ ರೈತ ಸಂಘದ ಕಾರ್ಯಕರ್ತರು ಗುರುವಾರ ಪಟ್ಟಣದ ಕೆನರಾ ಬ್ಯಾಂಕ್ ಶಾಖೆ ಎದುರು ಪ್ರತಿಭಟನೆ ನಡೆಸಿದರು.

ರಾಜ್ಯ ರೈತ ಸಂಘದ ಉಪಾಧ್ಯಕ್ಷ ಕೆ.ನಾರಾಯಣಗೌಡ ಮಾತನಾಡಿ, ಬ್ಯಾಂಕ್ ಕೋಳಿ ಫಾರಂ ಮಾಲೀಕರಿಗೆ ನಿಯಮಗಳನ್ನು ಗಾಳಿಗೆ ತೂರಿ ಕೋಟ್ಯಂತರ ರೂಪಾಯಿ ಸಾಲ ನೀಡಿದೆ. ಇದರಲ್ಲಿ ಮೀಷನ್ ವ್ಯವಹಾರ ನಡೆದಿದೆ. ಕೋಳಿ ಫಾರಂ ನಿರ್ಮಾಣದ ಭೂಮಿಯ ಬಗ್ಗೆ ಅಗತ್ಯ ದಾಖಲೆಗಳನ್ನು ಪರಿಶೀಲಿಸದೆ ಸಾಲ ನೀಡಲಾಗಿದೆ ಎಂದು ಆಪಾದಿಸಿದರು.

ಕೋಳಿ ಫಾರಂ ಮಾಡಲು ಕೆರೆ, ಗುಂಡು ತೋಪು, ಅರಣ್ಯ ಭೂಮಿ ಸರ್ವೆ ನಂಬರ್‌ಗಳಿಗೆ ನಕಲಿ ದಾಖಲೆ ನೀಡಿ, ಸಾಲ ಪಡೆಯಲಾಗಿದೆ. ಈ ಬಗ್ಗೆ ಸರ್ಕಾರ ಸಿಬಿಐ ತನಿಖೆ ನಡೆಸಬೇಕು. ಈ ಹಗರಣದಲ್ಲಿ ಭಾಗಿಯಾಗಿರಬಹುದಾದ ಬ್ಯಾಂಕ್ ವ್ಯವಸ್ಥಾಪಕರು ಹಾಗೂ ಸಿಬ್ಬಂದಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ರೈತರಿಗೆ ಅಗತ್ಯ ಸಾಲ ಕೊಡಿಸಬೇಕು ಎಂದು ಆಗ್ರಹಿಸಿದರು.

ರಾಜ್ಯ ರೈತ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ತೆರ್ನಹಳ್ಳಿ ಆಂಜಿನಪ್ಪ ಮಾತನಾಡಿ, ರೈತರು ಪಡೆದಿರುವ ಬ್ಯಾಂಕ್ ಸಾಲ ಮರುಪಾವತಿ ಮಾಡುವುದು ತಡವಾದರೆ ಅವರ ಜಮೀನು ಹರಾಜು ಹಾಕಿ ಮಾನ ಕಳೆಯುತ್ತಾರೆ. ಆದರೆ, ಶ್ರೀಮಂತ ಉದ್ಯಮಿಗಳು ಸಾಲ ಮರುಪಾವತಿ ಮಾಡದಿದ್ದರೂ, ಬ್ಯಾಂಕ್ ಅಧಿಕಾರಿಗಳು ಅವರ ಬೆನ್ನು ಕಾಯುತ್ತಾರೆ. ಇದಕ್ಕೆ ಭ್ರಷ್ಟಾಚಾರ ಕಾರಣವಾಗಿದೆ. ನಕಲಿ ಒಡವೆ ನೀಡಿ ಸಾಲ ಪಡೆದಿರುವ ಪ್ರಕರಣಗಳೂ ಇರುವುದಾಗಿ ತಿಳಿದುಬಂದಿದೆ. ಇದೆಲ್ಲಾ ಹೊರ ಬರಬೇಕಾದರೆ ಸರ್ಕಾರ ಸೂಕ್ತ ತನಿಖೆ ನಡೆಸಬೇಕು ಎಂದು ಹೇಳಿದರು.

ಈ ಸಂದರ್ಭದಲ್ಲಿ ತಮ್ಮ ಬೇಡಿಕೆಗಳನ್ನು ಒಳಗೊಂಡ ಮನವಿ ಪತ್ರವನ್ನು ಬ್ಯಾಂಕ್ ಶಾಖೆಯ ವ್ಯವಸ್ಥಾಪಕರಿಗೆ ನೀಡಲಾಯಿತು.

ಸಂಘದ ರಾಜ್ಯ ಸಂಚಾಲಕ ಬಂಗವಾದಿ ನಾಗರಾಜಗೌಡ, ಆಚಂಪಲ್ಲಿ ಗಂಗಾಧರ್, ಮುಖಂಡರಾದ ತೆರ್ನಹಳ್ಳಿ ವೆಂಕಿ, ರಮೇಶ್, ಶೇಕ್ ಶಫಿವುಲ್ಲಾ, ಆಲವಾಟ ಶಿವ, ಲೋಕೇಶ್, ಲಕ್ಷ್ಮಣ್, ಮುನಿಯಪ್ಪ, ಸಹದೇವಣ್ಣ, ಆನಂದ್, ಸುಪ್ರೀಂ ಚಲ, ರಂಜಿತ್, ಪುತ್ತೇರಿ ರಾಜು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.