ಕೆಜಿಎಫ್: ಬೇತಮಂಗಲ–ವಿ. ಕೋಟೆ ರಸ್ತೆ ಅಭಿವೃದ್ಧಿ ಕಾಮಗಾರಿಯನ್ನು ಸಂಪೂರ್ಣವಾಗಿ ಪೂರೈಸಲು ಗುತ್ತಿಗೆದಾರರು ಬಿಲ್ ಪಾವತಿಗಾಗಿ ಪಟ್ಟು ಹಿಡಿದಿದ್ದಾರೆ. ಸಂಚಾರಕ್ಕೆ ತೊಂದರೆಯಾಗುವ ಕಾರಣದಿಂದಾಗಿ ಸ್ವಂತ ಖರ್ಚಿನಿಂದ ಕಾಮಗಾರಿ ಶುರು ಮಾಡಿರುವುದಾಗಿ ಶಾಸಕಿ ಎಂ. ರೂಪಕಲಾ ತಿಳಿಸಿದ್ದಾರೆ.
ಬೇತಮಂಗಲ ಹೊರವಲಯದಲ್ಲಿ ಸುಮಾರು ನೂರು ಮೀಟರ್‌ಗಳಷ್ಟು ದಾರಿಯಲ್ಲಿ ಡಾಂಬರನ್ನು ಗುತ್ತಿಗೆದಾರರು ಅಗೆದಿದ್ದಾರೆ. ಅದನ್ನು ದುರಸ್ತಿ ಮಾಡಿಲ್ಲ. ರಸ್ತೆ ನಿರ್ಮಾಣ ಮಾಡಿಲ್ಲ. 32 ಕಿ.ಮೀ ಉದ್ದದ ರಸ್ತೆ ಅಭಿವೃದ್ಧಿಗೆ ಒಟ್ಟು ₹ 46 ಕೋಟಿ ವೆಚ್ಚವಾಗಲಿದೆ ಎಂದುತಿಳಿಸಿದ್ದಾರೆ.
ಕಾಮಗಾರಿಗೆ 2017ರ ಡಿಸೆಂಬರ್‌ನಲ್ಲಿ ಕಾರ್ಯಾದೇಶ ನೀಡಲಾಗಿತ್ತು. ಕಾಮಗಾರಿಯನ್ನು 2018ರ ನವೆಂಬರ್‌ನಲ್ಲಿ ಮುಗಿಸಬೇಕಾಗಿತ್ತು. ಗುಜರಾತ್ ಮೂಲದವರು ರಸ್ತೆ ಅಭಿವೃದ್ಧಿ ಟೆಂಡರ್ ತೆಗೆದುಕೊಂಡಿದ್ದರು. ಗುತ್ತಿಗೆದಾರರು ₹ 18 ಕೋಟಿಯಷ್ಟು ಕಾಮಗಾರಿ ನಡೆಸಿದ್ದರೂ, ಸರ್ಕಾರ ಕೇವಲ ₹ 6 ಕೋಟಿ ಪಾವತಿ ಮಾಡಿದೆ. ಬಾಕಿ ಇರುವ ಹಣವನ್ನು ಕೂಡಲೇ ಮಂಜೂರು ಮಾಡಿ ರಸ್ತೆ ಅಭಿವೃದ್ಧಿಗೆ ಸಹಕರಿಸಬೇಕೆಂದು ಸಚಿವರನ್ನು ಮತ್ತು ಹಿರಿಯ ಅಧಿಕಾರಿಗಳನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದರೂ ಹಣ ಬಿಡುಗಡೆಯಾಗಿಲ್ಲ. ಹಣ ನೀಡದೆ ಕಾಮಗಾರಿ ಮಾಡುವುದಿಲ್ಲ ಎಂದು ಪಟ್ಟುಹಿಡಿದಿದ್ದಾರೆ ಎಂದು ವಿವರಿಸಿದ್ದಾರೆ.
ಜೊತೆಗೆ ರಸ್ತೆ ಅಭಿವೃದ್ಧಿಗೆ ರಸ್ತೆ ಬದಿಯ ಮರಗಳನ್ನು ಕಡಿಯಬೇಕಾಗಿತ್ತು. ಅದಕ್ಕಾಗಿ ಅರಣ್ಯ ಇಲಾಖೆಗೆ ಠೇವಣಿ ಹಣ ನೀಡಬೇಕಾಗಿತ್ತು. ಈ ಸಂಬಂಧವಾಗಿ ಕೂಡ ಉಪ ಅರಣ್ಯ ಸಂರಕ್ಷಣಾಧಿಕಾರಿಯನ್ನು ಭೇಟಿ ಮಾಡಿ ಕಾಲಾವಕಾಶ ಕೋರಲಾಗಿತ್ತು ಎಂದು ಶಾಸಕರು ತಿಳಿಸಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.