ಸೋಮವಾರ, ಮಾರ್ಚ್ 1, 2021
29 °C

ಶಿಕ್ಷಕರ ವರ್ಗಾವಣೆ ಕೌನ್ಸೆಲಿಂಗ್‌ ಆರಂಭ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ 2018-19ನೇ ಸಾಲಿನ ಕೋರಿಕೆ, ಕಡ್ಡಾಯ ವರ್ಗಾವಣೆ ಮತ್ತು ಪರಸ್ಪರ ಘಟಕದೊಳಗಿನ ವರ್ಗಾವಣೆ ಕೌನ್ಸೆಲಿಂಗ್ ಪ್ರಕ್ರಿಯೆ ಇಲ್ಲಿ ಗುರುವಾರ ಆರಂಭಗೊಂಡಿದ್ದು, ಸ್ಥಳ ಆಯ್ಕೆ ಮಾಡಿಕೊಂಡ ಶಿಕ್ಷಕರಿಗೆ ಡಿಡಿಪಿಐ ಕಚೇರಿಯಲ್ಲಿ ವರ್ಗಾವಣೆ ಆದೇಶ ನೀಡಲಾಯಿತು.

ತಾಂತ್ರಿಕ ಕಾರಣದಿಂದಾಗಿ ಮಧ್ಯಾಹ್ನ 3 ಗಂಟೆಗೆ ಆರಂಭವಾದ ವರ್ಗಾವಣೆ ಕೌನ್ಸೆಲಿಂಗ್‌ ಮೊದಲ ದಿನ ಯಾವುದೇ ಗೊಂದಲವಿಲ್ಲದೆ ಯಶಸ್ವಿಯಾಗಿ ನಡೆಯಿತು.

ವರ್ಗಾವಣೆ ಪ್ರಕ್ರಿಯೆ ಸುಗಮವಾಗಿ ನಡೆಸಲು ಕ್ಷೇತ್ರ ಸಂಪನ್ಮೂಲ ಕಚೇರಿ ಸಿಬ್ಬಂದಿ ಹಾಗೂ ಆಯಾ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಸಿಬ್ಬಂದಿಯನ್ನು ಬಳಸಿಕೊಳ್ಳಲಾಯಿತು. ಯಾವುದೇ ಸಮಸ್ಯೆ ಎದುರಾಗದಂತೆ ಕ್ರಮ ವಹಿಸಲಾಯಿತು.

‘ಮೊದಲ ದಿನ ಸಂಜೆ 5.30ರ ವೇಳೆಗೆ 80 ಮಂದಿ ಶಿಕ್ಷಕರು ಕೌನ್ಸೆಲಿಂಗ್‌ನಲ್ಲಿ ಪಾಲ್ಗೊಂಡಿದ್ದರು. ತಡರಾತ್ರಿವರೆಗೂ ಕೌನ್ಸೆಲಿಂಗ್‌ ನಡೆಸಿ 250 ಶಿಕ್ಷಕರ ವರ್ಗಾವಣೆ ಪ್ರಕ್ರಿಯೆ ಪೂರ್ಣಗೊಳಿಸಿದೆವು’ ಎಂದು ನೋಡಲ್ ಅಧಿಕಾರಿ ಸಿ.ಆರ್.ಅಶೋಕ್ ತಿಳಿಸಿದರು.

‘ಶುಕ್ರವಾರ (ಆ.2) ಕ್ರಮಸಂಖ್ಯೆ 251ರಿಂದ 750ವರೆಗಿನ ಶಿಕ್ಷಕರು, ಆ.3ರಂದು ಕ್ರಮಸಂಖ್ಯೆ 751ರಿಂದ 1,400ವರೆಗಿನ ಶಿಕ್ಷಕರು ಹಾಗೂ ಆ.4ರಂದು ಕ್ರಮಸಂಖ್ಯೆ 1,401ರಿಂದ ಆದ್ಯತಾ ಪಟ್ಟಿಯಲ್ಲಿನ ಅಂತ್ಯದವರೆಗೂ ಇರುವ ಶಿಕ್ಷಕರು ಕೌನ್ಸೆಲಿಂಗ್‌ನಲ್ಲಿ ಪಾಲ್ಗೊಳ್ಳಬಹುದು’ ಎಂದು ಹೇಳಿದರು.

ಡಿಡಿಪಿಐ ಕೆ.ರತ್ನಯ್ಯ, ಶಿಕ್ಷಣಾಧಿಕಾರಿಗಳಾದ ಎ.ಎನ್.ನಾಗೇಂದ್ರಪ್ರಸಾದ್, ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಕೆ.ಎಸ್.ನಾಗರಾಜಗೌಡ, ಮಾಧವರೆಡ್ಡಿ, ಕೆಂಪರಾಮು, ವಿಷಯ ಪರಿವೀಕ್ಷಕರಾದ ಶಶಿವಧನ, ಗಾಯಿತ್ರಿ, ಕೃಷ್ಣಪ್ಪ, ವೆಂಕಟೇಶಪ್ಪ, ಅಧೀಕ್ಷಕರಾದ ರಾಜೇಂದ್ರನ್ ಕೌನ್ಸೆಲಿಂಗ್‌ ಪ್ರಕ್ರಿಯೆ ನಿರ್ವಹಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.