ಭಾನುವಾರ, ಸೆಪ್ಟೆಂಬರ್ 27, 2020
27 °C
ಗ್ರಾಮದ ವಠಾರ, ಚಾವಡಿ, ದೇವಸ್ಥಾನಗಳಲ್ಲಿ ಪಾಠ

ಚಿಂತಾಮಣಿ: ಮಕ್ಕಳೆಡೆಗೆ ಶಿಕ್ಷಕರ ನಡಿಗೆ

ಎಂ.ರಾಮಕೃಷ್ಣಪ್ಪ Updated:

ಅಕ್ಷರ ಗಾತ್ರ : | |

Prajavani

ಚಿಂತಾಮಣಿ: ಕೊರೊನಾ ಸೋಂಕು ಹರಡುತ್ತಿರುವ ಕಾರಣ ಶಾಲೆಗಳು ಆರಂಭವಾಗಿಲ್ಲ. ಆದರೆ ತಾಲ್ಲೂಕಿನ ಕೆ.ರಾಗುಟ್ಟಹಳ್ಳಿ ಸರ್ಕಾರಿ ಪ್ರೌಢಶಾಲೆಯ ಶಿಕ್ಷಕರು ಸ್ವಯಂಪ್ರೇರಣೆಯಿಂದ ಗ್ರಾಮಗಳಿಗೆ ತೆರಳಿ ಪಾಠ ಮಾಡುತ್ತಿದ್ದಾರೆ.

ಗ್ರಾಮಗಳಲ್ಲಿನ ಮರಗಳ ಕೆಳಗೆ, ದೇವಸ್ಥಾನ, ವಠಾರ, ಚಾವಡಿ, ಸಮುದಾಯ ಭವನಗಳನ್ನು ಶಾಲೆಗಳಾಗಿ ಪರಿವರ್ತಿಸಿದ್ದಾರೆ. ಈ ಶಾಲೆಯಲ್ಲಿ 10 ಜನ ಶಿಕ್ಷಕರಿದ್ದು, ಇಬ್ಬರಂತೆ ಐದು ಗುಂಪುಗಳನ್ನು ರಚಿಸಿಕೊಂಡಿದ್ದಾರೆ. ಶಾಲೆ ವ್ಯಾಪ್ತಿಯ ಹಳ್ಳಿಗಳನ್ನು 5 ಗುಂಪುಗಳಾಗಿ ವಿಂಗಡಿಸಿ, 5 ನಿಗದಿತ ಸ್ಥಳಗಳನ್ನು ಗುರುತಿಸಿಕೊಂಡಿದ್ದಾರೆ. ಆ ಹಳ್ಳಿಗಳ ವಿದ್ಯಾರ್ಥಿಗಳನ್ನು ನಿಗದಿತ ಸ್ಥಳಕ್ಕೆ ಕರೆಸಿಕೊಂಡು 3 ದಿನಕೊಮ್ಮೆ ಶಿಕ್ಷಕರು ತೆರಳಿ ಪಾಠ ಮಾಡುತ್ತಾರೆ. ನಂತರದ 3 ದಿನಗಳಿಗೆ ಮನೆಪಾಠ ನೀಡಲಾಗುತ್ತದೆ. ಶಿಕ್ಷಕರ ತಂಡ ಪಾಳಿ ಮೂಲಕ ತೆರಳಿ ಎಲ್ಲ ವಿಷಯಗಳನ್ನು ಬೋಧಿಸುತ್ತಿದ್ದಾರೆ.

ದೀರ್ಘ ಕಾಲದಿಂದ ಶಾಲೆಗೆ ರಜೆ ನೀಡಿದ್ದರಿಂದ ಬೇಸರಗೊಂಡಿದ್ದ ಪೋಷಕರಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ವಿದ್ಯಾರ್ಥಿಗಳು ಅಷ್ಟೇ ಉತ್ಸಾಹದಿಂದ ಕಲಿಕೆಯಲ್ಲಿ ನಿರತರಾಗಿದ್ದಾರೆ. ಗ್ರಾಮಸ್ಥರಿಂದಲೂ ಮೆಚ್ಚುಗೆ ವ್ಯಕ್ತವಾಗಿದೆ ಎನ್ನುತ್ತಾರೆ ಶಿಕ್ಷಕರು.

‘ಎನ್.ಕೊತ್ತೂರು, ಕೋಟಗಲ್, ಕೆ.ರಾಗುಟ್ಟಹಳ್ಳಿ, ಬಂಡಮಿಂದಹಳ್ಳಿ, ಕುರುಮಾರ್ಲಹಳ್ಳಿಗಳಿಗೆ ಶಿಕ್ಷಕರ ತಂಡ ತೆರಳಿ ಪಾಠ ಮಾಡುತ್ತಿದೆ. ಶಿಕ್ಷಕರ ಒಂದೊಂದು ತಂಡ ಒಂದೊಂದು ಗ್ರಾಮಕ್ಕೆ ತೆರಳಿ ಶೈಕ್ಷಣಿಕ ಚುಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುತ್ತಾರೆ’ ಎಂದು ಮುಖ್ಯ ಶಿಕ್ಷಕ ಸುಬ್ಬಾರೆಡ್ಡಿ ತಿಳಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು