ಭಾನುವಾರ, ಆಗಸ್ಟ್ 1, 2021
22 °C

ಕೋಟಿಲಿಂಗೇಶ್ವರ ಲೆಕ್ಕಪತ್ರ ಪರಿಶೀಲನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೇತಮಂಗಲ: ಸುಪ್ರೀಂ ಕೋರ್ಟ್‌ ನಿರ್ದೇಶನದಂತೆ ಕೋಟಿಲಿಂಗೇಶ್ವರ ದೇವಾಲಯದ ಆಡಳಿತಾಧಿಕಾರಿ ಕೆ.ವಿ.‌ ಕುಮಾರಿ ಲೆಕ್ಕ ಪತ್ರಗಳನ್ನು ದೇವಾಲಯದ ಸಂಸ್ಥಾಪಕ ಸಾಂಬಶಿವಮೂರ್ತಿ ಅವರ ಪುತ್ರಿ ಅನುರಾಧಾ ಅವರಿಗೆ ಮಂಗಳವಾರ ಹಾಜರುಪಡಿಸಿದರು.

ದೇವಾಲಯದ ಧರ್ಮಾಧಿಕಾರಿ ಪಟ್ಟಕ್ಕಾಗಿ ನಡೆಯುತ್ತಿರುವ ವಿವಾದದ ಕುರಿತು ಈಚೆಗೆ ಸುಪ್ರೀಂ ಕೋರ್ಟ್‌ ನಿರ್ದೇಶನ ನೀಡಿತ್ತು. ಪ್ರತಿ ತಿಂಗಳು 7ರಂದು ಅರ್ಜಿದಾರರಿಗೆ ದೇವಾಲಯದ ಲೆಕ್ಕಪತ್ರಗಳನ್ನು ತೋರಿಸಬೇಕು. ನ್ಯಾಯಾಲಯಕ್ಕೆ ಒಪ್ಪಿಸಬೇಕು ಎಂದು ಸೂಚನೆ ನೀಡಿತ್ತು.

ಈ ವಿಚಾರಕ್ಕೆ ಸಂಬಂಧಿಸಿದಂತೆ ಮಂಗಳವಾರ ಮಧ್ಯಾಹ್ನ 12ರಿಂದ 2ಘಂಟೆವರೆಗೆ ಲೆಕ್ಕಪತ್ರ ಪರಿಶೀಲನೆ ಮಾಡಲು ಬರಬಹುದು ಎಂದು ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದ ಡಾ.ಶಿವಪ್ರಸಾದ್ ಅವರಿಗೆ ಮಾಹಿತಿ ನೀಡಲಾಗಿತ್ತು. ಆದರೆ, ಅವರು ಲೆಕ್ಕಪತ್ರ ಪರಿಶೀಲನೆಗೆ ಬರಲು ನಿರಾಕರಿಸಿದರು. 

ಆದ್ದರಿಂದ ಇನ್ನೊಬ್ಬ ಅರ್ಜಿದಾರರಾದ ಅನುರಾಧಾ ಅವರು ದೇವಾಲಯದ ಕಚೇರಿಗೆ ಭೇಟಿ ನೀಡಿ ಲೆಕ್ಕಪತ್ರಗಳನ್ನು ಪರಿಶೀಲನೆ ಮಾಡಿ ಸಹಿ ಮಾಡಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು