ಬಂಗಾರಪೇಟೆ: ತಾಲ್ಲೂಕಿನಾದ್ಯಂತ ವಿವಿಧ ದೇವಾಲಯಗಳಲ್ಲಿ ಬೀಗ ಮುರಿದು ಹುಂಡಿ ಕಳ್ಳತನ ಮಾಡುತ್ತಿದ್ದ ಐದು ಮಂದಿ ಕಳ್ಳರನ್ನು ಬಂಗಾರಪೇಟೆ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ತಾಲ್ಲೂಕಿನ ಕೊಮ್ಮೇನಹಳ್ಳಿ ನಿವಾಸಿಗಳಾದ ಲೋಕೇಶ್ (35), ಸೋಮ (25), ವೆಂಕಟಪ್ಪ (62), ಮುರುಗೇಶ್ (26), ಮುನಿಯಪ್ಪ (28) ಬಂಧಿತ ಆರೋಪಿಗಳು. ಆರೋಪಿಗಳಿಂದ ₹31,800 ನಗದು, 16 ತಾಳಿ, ಎಂಟು ಗುಂಡು, ಮೂರು ದ್ವಿಚಕ್ರ ವಾಹನ ಹಾಗೂ ಗಡಾರಿಯನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಇತ್ತೀಚೆಗೆ ತಾಲ್ಲೂಕಿನ ಬೂರಮಾಕನಹಳ್ಳಿ ಆಂಜನೇಯಸ್ವಾಮಿ ಹಾಗೂ ಚಿಕ್ಕ ವಲಗಮಾದಿ ಗ್ರಾಮದ ಕೈವಾರ ಯೋಗಿ ನಾರಾಯಣಸ್ವಾಮಿ ದೇವಾಲಯಗಳಲ್ಲಿ ಕಳ್ಳತನವಾಗಿತ್ತು. ಈ ಬಗ್ಗೆ ಅಂಬೂಬಾಯಿ ಅವರು ಬಂಗಾರಪೇಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

ಈ ಸಂಬಂಧ ಪೊಲೀಸ್ ವರಿಷ್ಠಾಧಿಕಾರಿ ಶಿವಾಂಶು ರಜಪೂತ್ ಹಾಗೂ ಪೊಲೀಸ್ ಉಪಾಧೀಕ್ಷಕ ಲಕ್ಷ್ಮಯ್ಯ ಅವರ ಸೂಚನೆ ಮೇರೆಗೆ ಬಂಗಾರಪೇಟೆ ಪೊಲೀಸ್ ಇನ್ಸ್ಪೆಕ್ಟರ್ ಆರ್.ದಯಾನಂದ್ ಅವರ ನೇತೃತ್ವದಲ್ಲಿ ಪಿ.ಎಸ್.ಐ ಪ್ರಕಾಶ್ ನರಸಿಂಗ್ ಹಾಗೂ ಸಿಬ್ಬಂದಿ ತಂಡವು ಕಾರ್ಯಾಚರಣೆ ಕೈಗೊಂಡಿತ್ತು.

ನ.8ರಂದು ಮೂರು ಬೈಕ್ಗಳಲ್ಲಿ ಐದು ಮಂದಿ ಬೂದಿಕೋಟೆ ಕಡೆಯಿಂದ ಬಂಗಾರಪೇಟೆಯತ್ತ ಬರುತ್ತಿದ್ದವರ ಬಳಿ ಗಡಾರಿಯನ್ನು ಕಂಡು ಪೊಲೀಸರು ಪ್ರಶ್ನಿಸಿದಕ್ಕೆ ಸಕಾರಣ ನೀಡಿರಲಿಲ್ಲ. ಐವರಲ್ಲಿ ಒಬ್ಬ ವ್ಯಕ್ತಿ ಅಪರಾಧಿಯಾಗಿದ್ದು ಅವರನ್ನು ವಿಚಾರಣೆಗೆ ಒಳಪಡಿಸಿದಾಗ ದೇವಾಲಯ ಕಳವು ಪ್ರಕರಣವನ್ನು ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ. ಇನ್ನೂ ಹೆಚ್ಚಿನ ವಿಚಾರಣೆ ಕೈಗೊಂಡಾಗ ಸುಮಾರು ಆರು ತಿಂಗಳಿಂದ ತಾಲ್ಲೂಕಿನ ಮಿಟ್ಟಿಮಾಲಹಳ್ಳಿ, ಯಳಬುರ್ಗಿ, ದೊಡ್ಡ ಚಿನ್ನಹಳ್ಳಿ, ಆಜಪನಹಳ್ಳಿ, ಕುಂದರಸನಹಳ್ಳಿ, ಪಲಮಡಗು ದಿನ್ನೂರು. ಮರಾಠ ಹೊಸಹಳ್ಳಿ, ಕಾಡುಕದಿರೇನಹಳ್ಳಿ, ಗುಲ್ಲಹಳ್ಳಿ, ಕಾರಮಾನಹಳ್ಳಿ, ಆಲಂದಾಡಿ ಜ್ಯೋತನಹಳ್ಳಿ, ಬೂರಮಾಕನಳ್ಳಿ, ಚಿಕ್ಕವಲಗಮಾದಿ ಹಾಗೂ ಕೋಲಾರ ಜಿಲ್ಲೆಯಾದ್ಯಂತ ವಿವಿಧ ಪೊಲೀಸ್ ಠಾಣಾ ವ್ಯಾಪ್ತಿಯ ಗ್ರಾಮದ ದೇವಾಲಯಗಳಲ್ಲಿ ಕಳ್ಳತನ ಮಾಡಿರುವುದು ಬೆಳಕಿಗೆ ಬಂದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.