ಸೋಮವಾರ, ನವೆಂಬರ್ 30, 2020
19 °C

ದೇವರ ಉತ್ಸವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನಂಗಲಿ: ದಸರಾ ಪ್ರಯುಕ್ತ ಬೈರಕೂರು ಗ್ರಾಮದಲ್ಲಿ ಗ್ರಾಮ ದೇವತೆಗಳಾದ ಯಲ್ಲಮ್ಮ ಮತ್ತು ಗಂಗಮ್ಮ ದೇವರ ಉತ್ಸವ ಮತ್ತು ಮೆರವಣಿಗೆ ನಡೆಯಿತು.

ಗ್ರಾಮದಲ್ಲಿ ಸುಮಾರು 100 ವರ್ಷಗಳಷ್ಟು ಹಳೆಯದಾದ ಯಲ್ಲಮ್ಮ ಮತ್ತು ಗಂಗಮ್ಮ ದೇವರ ಮೂಲ ವಿಗ್ರಹವನ್ನು ವಿದ್ಯುತ್ ದೀಪಗಳಿಂದ ಅಲಂಕೃತಗೊಂಡಿದ್ದ ವಾಹನಗಳಲ್ಲಿ ಇರಿಸಿಕೊಂಡು ಬಸ್‌ನಿಲ್ದಾಣ ರಸ್ತೆ, ಚೀಕೂರು ರಸ್ತೆ, ಮುಳಬಾಗಿಲು ಹೆಬ್ಬಣಿ ಮುಖ್ಯರಸ್ತೆ ಹಾಗೂ ಗ್ರಾಮದ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು. 

ಪ್ರತಿವರ್ಷದಂತೆ ಸಂಪ್ರದಾಯ ಬದ್ಧವಾಗಿ ನಡೆದ ಉತ್ಸವದ ಪ್ರಯುಕ್ತ ದೇವರ ಮೂಲ ವಿಗ್ರಹಗಳನ್ನು ವಿವಿಧ ಬಗೆಯ ಹೂಗಳಿಂದ ಅಲಂಕಾರ ಮಾಡಲಾಗಿತ್ತು. ನಂತರ ಮಹಾಮಂಗಳಾರತಿ, ಅಭಿಷೇಕ, ತೀರ್ಥ, ಪ್ರಸಾದ ವಿನಿಯೋಗ ಕಾರ್ಯಕ್ರಮ ನಡೆಯಿತು. ನೂರಾರು ಸಂಖ್ಯೆಯಲ್ಲಿ ಸೇರಿದ್ದ ಭಕ್ತರಿಗೆ ಅನ್ನ ಸಂತರ್ಪಣೆ ನಡೆಯಿತು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.