ಗುರುವಾರ , ಆಗಸ್ಟ್ 11, 2022
21 °C

ರೈಲ್ವೆ ರಕ್ಷಣಾ ದಳದ ಸೇವೆ ಅನನ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬಂಗಾರಪೇಟೆ: ‘ರೈಲ್ವೆ ಇಲಾಖೆಯಲ್ಲಿ ರೈಲ್ವೆ ರಕ್ಷಣಾ ದಳ ಜೀವನಾಡಿ ಇದ್ದಂತೆ. ಯಾವುದೇ ಸಂದರ್ಭದಲ್ಲಿ ಏನೇ ಘಟನೆ ಸಂಭವಿಸಿದರೂ ನಮ್ಮೊಂದಿಗೆ ನಿಂತು ಕೆಲಸ ನಿರ್ವಹಿಸುತ್ತಾರೆ’ ಎಂದು ಸ್ಟೇಷನ್ ಮಾಸ್ಟರ್ ರಮೇಶ್ ಗೌಡ ಹೇಳಿದರು.

ಪಟ್ಟಣದ ರೈಲ್ವೆ ರಕ್ಷಣಾ ದಳದಲ್ಲಿ ಎಎಸ್ಐ ಆಗಿ ಕಾರ್ಯ ನಿರ್ವಹಿಸಿ ಸಬ್‌ ಇನ್‌ಸ್ಪೆಕ್ಟರ್ ಆಗಿ ಬಡ್ತಿ ಪಡೆದ ಕೆ.ಸಿ. ಚಂದ್ರಯ್ಯ ಅವರಿಗೆ ಹಮ್ಮಿಕೊಂಡಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಅವರು ಮಾತನಾಡಿದರು.

ಚಂದ್ರಯ್ಯ ಅವರ ಸೇವೆ ಸ್ಮರಣೀಯ. ಹಗಲುರಾತ್ರಿ ಎನ್ನದೆ ಯಾವುದೇ ಸಮಯದಲ್ಲಿ ಏನೇ ಸಮಸ್ಯೆ ಇದ್ದರೂ ಸ್ಥಳಕ್ಕೆ ಬಂದು ಪರಿಹಾರ ಹುಡುಕುತ್ತಿದ್ದರು. ಅವರಿಗೆ ಬಡ್ತಿ ಸಿಕ್ಕಿರುವುದು ಸಂತೋಷದ ಸಂಗತಿ ಎಂದರು.

ರೈಲ್ವೆ ಗುತ್ತಿಗೆದಾರ ಬಾಲಚಂದ್ರ, ಸಿಬ್ಬಂದಿ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.