ಭಾನುವಾರ, ಜುಲೈ 3, 2022
27 °C

ಮತಾಂತರ ನಿಷೇಧ ಮಸೂದೆ ದುರುದ್ದೇಶಪೂರ್ವಕ: ಸಿದ್ದರಾಮಯ್ಯ ವಾಗ್ದಾಳಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೋಲಾರ: ‘ರಾಜ್ಯ ಸರ್ಕಾರವು ಬೆಳಗಾವಿ ವಿಧಾನಮಂಡಲ ಅಧಿವೇಶನದಲ್ಲಿ ಮತಾಂತರ ನಿಷೇಧ ಮಸೂದೆ ಮಂಡಿಸಲು ಹೊರಟಿದೆ. ಈ ರೀತಿ ದುರುದ್ದೇಶಪೂರ್ವಕವಾಗಿ ಒಂದು ಧರ್ಮವನ್ನು ಗುರಿಯಾಗಿಸಿಕೊಂಡು ರಾಜಕೀಯ ಮಾಡುವುದು ಸರಿಯಲ್ಲ’ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಗುಡುಗಿದರು.

ಇಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ಬಲವಂತದ ಮತಾಂತರಕ್ಕೆ ನಮ್ಮ ವಿರೋಧವಿದೆ. ಸೋಮವಾರದಿಂದ ಆರಂಭವಾಗುವ ಅಧಿವೇಶನದಲ್ಲಿ ಬೆಳೆ ಹಾನಿ, ಕೋವಿಡ್‌ ಪರಿಹಾರ, ಬಿಟ್ ಕಾಯಿನ್ ಹಗರಣ, ಟೆಂಡರ್‌ ಪರ್ಸಂಟೇಜ್‌ ವಿಚಾರ, ಮತಾಂತರ ನಿಷೇಧ ಕಾಯ್ದೆ ಸೇರಿದಂತೆ ಸರ್ಕಾರದ ವೈಫಲ್ಯಗಳ ಬಗ್ಗೆ ಚರ್ಚೆ ಮಾಡುತ್ತೇವೆ’ ಎಂದರು.

‘ಶಾಲಾ ಮಕ್ಕಳಿಗೆ ಮೊಟ್ಟೆ ಕೊಡುವ ವಿಚಾರವಾಗಿ ನಾನು ಮಠಾಧೀಶರ ಬಗ್ಗೆ ಮಾತನಾಡಲ್ಲ. ಆಹಾರ ಪದ್ಧತಿ ಅವರವರಿಗೆ ಬಿಟ್ಟಿರೋ ವಿಚಾರ. ಮೊಟ್ಟೆ ಯಾರು ತಿನ್ನುತ್ತಾರೋ ಅವರಿಗೆ ಕೊಡಲಿ, ತಿನ್ನಲ್ಲ ಎಂದರೆ ಕೊಡಬೇಡಿ. ಮೊಟ್ಟೆ ತಿನ್ನುವವರು ತಿನ್ನಲಿ, ತಿನ್ನದೆ ಇರುವವರು ತಿನ್ನುವುದು ಬೇಡ’ ಎಂದು ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು