ಸೋಮವಾರ, 17 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಣ್ಣಾಗಲು ರಾಸಾಯನಿಕಗಳ ಬಳಕೆ: ಮಾವು ತಿನ್ನುವ ಮುನ್ನ ಎಚ್ಚರ

ಮಾವು ಹಣ್ಣಾಗಲು ಬಳಸುವ ರಾಸಾಯನಿಕಗಳು ಆರೋಗ್ಯಕ್ಕೆ ಹಾನಿಕಾರ
Published 21 ಮೇ 2024, 16:02 IST
Last Updated 21 ಮೇ 2024, 16:02 IST
ಅಕ್ಷರ ಗಾತ್ರ

ಬಂಗಾರಪೇಟೆ: ಹಣ್ಣುಗಳ ರಾಜ ಮಾವು. ಈಗ ಅದಕ್ಕೆ ಬೇಡಿಕೆ ಹೆಚ್ಚಿದ್ದು, ಎಲ್ಲರೂ ಮಾವು ಖರೀದಿಸಲು ಮುಗಿ ಬೀಳುತ್ತಿದ್ದಾರೆ. ಆದರೆ ಹಣ್ಣನ್ನು ಮಾಗಿಸಲು ಅನೇಕ ರಾಸಾಯನಿಕಗಳನ್ನು ಬಳಸಿದ್ದು, ಅದು ಆರೋಗ್ಯದ ಕೆಟ್ಟ ಪರಿಣಾಮ ಬೀರುತ್ತಿದೆ.

ಮಾರುಕಟ್ಟೆಯಲ್ಲಿ ಮಾವು ಕಡಿಮೆ ಬೆಲೆಗೆ ಸಿಗುತ್ತಿದೆ. ಆದರೆ, ಮಾವು ಹಣ್ಣಾಗಿಸಲು ವ್ಯಾಪಾರಿಗಳು ಕೃತಕ ರಾಸಾಯನಿಕ ಪದಾರ್ಥಗಳನ್ನು ಬಳಸುತ್ತಿದ್ದಾರೆ.  ಇದರಿಂದ ಮನುಷ್ಯನ ಆರೋಗ್ಯದ ಮೇಲೆ ತೀರಾ ಪರಿಣಾಮ ಬೀರುವ ಸಾಧ್ಯತೆ ಇದೆ. ಗಂಟಲು ಕೆರೆತ, ತುರಿಕೆ, ಚರ್ಮದ ಸಮಸ್ಯೆ, ಅಲರ್ಜಿಯಿಂದ ಹಿಡಿದು ದೀರ್ಘಕಾಲಿಕ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ ಎಂಬುದು ವೈದ್ಯರ ಮಾತಾಗಿದೆ.

ರೈತರು ಹೊಲದಲ್ಲಿ ಬೆಳೆದು ನೈಸರ್ಗಿಕವಾಗಿ ಹಣ್ಣಾಗುವ ಹಣ್ಣನ್ನು ಸೇವಿಸಿ, ಬೆಲೆ ಹೆಚ್ಚಿದ್ದರೂ ಆರೋಗ್ಯಕ್ಕೂ ಉತ್ತಮ.‌

ರಾಸಾಯನಿಕ ಮಾವು ಕಂಡು ಹಿಡಿಯುವುದು ಹೇಗೆ: ಮಾವಿನ ಹಣ್ಣು ರಾಸಾಯನಿಕಗಳಿಂದ ಹಣ್ಣಾಗಿದ್ದಾರೆ ಹಣ್ಣಿನ ಮೇಲೆ ಹಸಿರು ಚುಕ್ಕೆಗಳಿರುತ್ತವೆ. ಜತೆಗೆ ಹಣ್ಣು ಚಿಕ್ಕದಾಗಿರುತ್ತವೆ ಇದನ್ನು ಗಮನಿಸಿ ಖರೀದಿಸಿ.

ಮಾವಿನ ಹಣ್ಣನ್ನು ಕೊಳ್ಳುವಾಗ ಅದನ್ನು ಲಘುವಾಗಿ ಒತ್ತಿ ಮಾವು ಕೆಲವೆಡೆ ಮೃದುವಾಗಿದ್ದು, ಇನ್ನೂ ಕೆಲವೆಡೆ ಗಟ್ಟಿಯಾಗಿದ್ದರೆ ಅದು ರಾಸಾಯನಿಕವಾಗಿ ಹಣ್ಣಾಗಿಸಿರುವುದು ಎಂದರ್ಥ. ಬಿಳಿ ಅಥವಾ ನೀಲಿ ಬಣ್ಣದ ಗುರುತು ಇರುವ ಮಾವು ಕಂಡರೆ ಅದನ್ನು ಖರೀದಿಸಲೇಬಾರದು ಎಂಬುದು ತೋಟಗಾರಿಕಾ ಇಲಾಖೆ ಅಧಿಕಾರಿ ಅನಿತಾ ಅವರ ಮಾತಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT