ಶುಕ್ರವಾರ, ಅಕ್ಟೋಬರ್ 23, 2020
27 °C
ಸಮೀಕ್ಷೆಯಲ್ಲಿ ಮುಳಬಾಗಿಲು ತಾಲ್ಲೂಕು ಜಿಲ್ಲೆಯಲ್ಲೇ ಪ್ರಥಮ

ಬೆಳೆ ಸಮೀಕ್ಷೆಗೆ ಗ್ರಾಮ ಸ್ವಯಂಸೇವಕರು

ಜಿ.ವಿ.ಪುರುಷೋತ್ತಮ್‌ರಾವ್ Updated:

ಅಕ್ಷರ ಗಾತ್ರ : | |

Prajavani

ಮುಳಬಾಗಿಲು: ಬೆಳೆ ಸಮೀಕ್ಷೆ ಯೋಜನೆಗೆ ತಾಲ್ಲೂಕಿನ ರೈತರಿಂದ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ಆದ್ದರಿಂದ ಗ್ರಾಮಗಳಲ್ಲಿರುವ ವಿದ್ಯಾವಂತ ಯುವಕರನ್ನೇ (ಗ್ರಾಮದ ಸ್ವಯಂಸೇವಕರು) ಆಯ್ದುಕೊಂಡು ಅವರ ಮೂಲಕ ಬೆಳೆ ಸಮೀಕ್ಷೆ ನಡೆಸಲಾಗುತ್ತಿದೆ.

ಗ್ರಾಮದ ಸ್ವಯಂಸೇವಕರಿಗೆ ಒಂದು ಸರ್ವೆ ನಂಬರ್ ಪ್ಲಾಟ್‌ಗೆ ₹10 ಪಾವತಿ ಮಾಡಲಾಗುತ್ತದೆ. ಗ್ರಾಮದ ರೈತರನ್ನು ಅವರ ಜಮೀನಿನ ಬಳಿ ಕರೆದುಕೊಂಡು ಹೋಗಿ ಅವರ ಹೊಲದಲ್ಲಿ ಬೆಳೆದಿರುವ ಬೆಳೆಯನ್ನು ರೈತರ ಆ್ಯಪ್‌ನಲ್ಲಿ ದಾಖಲಿಸಬೇಕು.

2020ರ ಬೆಳೆ ಸಮೀಕ್ಷೆಯ ಮೂಲ ಉದ್ದೇಶ ರೈತರ ಜಮೀನಿನಲ್ಲಿರುವ ಬೆಳೆ ಮಾಹಿತಿಯನ್ನು ರೈತರೇ ದಾಖಲಿಸಬೇಕು ಎಂಬುದು. ಇದಕ್ಕಾಗಿ ಗ್ರಾಮಗಳಲ್ಲಿ ವ್ಯಾಪಕ ಪ್ರಚಾರ ನಡೆಸಿ ಹಲವಾರು ರೈತರ ಮೊಬೈಲ್‌ಗಳಿಗೆ ರೈತರ ಬೆಳೆ ಸಮೀಕ್ಷೆ ಆ್ಯಪ್‌ ಡೌನ್‌ಲೋಡ್ ಮಾಡಲಾಯಿತು.

ಇದಕ್ಕೆ ಉತ್ತಮ ಪ್ರತಿಕ್ರಿಯೆ ಬಾರದ ಕಾರಣ ಕಂದಾಯ ಇಲಾಖೆಯ ಗ್ರಾಮಲೆಕ್ಕಿಗರು ಗ್ರಾಮಗಳಿಗೆ ತೆರಳಿ ವಿದ್ಯಾವಂತ ಯುವಕರನ್ನು ಆಯ್ಕೆ ಮಾಡಿದ ನಂತರ ಬೆಳೆ ಸಮೀಕ್ಷೆ ಪ್ರಗತಿ ಸ್ವಲ್ಪ ಮಟ್ಟಿಗೆ ಸುಧಾರಿಸಿದೆ.

***

ಮುಳಬಾಗಿಲು ತಾಲ್ಲೂಕು ಪ್ರಥಮ

‘ರೈತ ಪ್ರತಿನಿಧಿಗಳನ್ನು ಮನವೊಲಿಸಿ ಬೆಳೆ ಸಮೀಕ್ಷೆ ಮಾಡಿಸಲಾಗುತ್ತಿದೆ. ತಾಲ್ಲೂಕಿನ 1,54,966 ಸರ್ವೆ ನಂಬರ್‌ಗಳಲ್ಲಿ ಇದುವರೆಗೂ 78,684 ಸರ್ವೆ ನಂಬರ್‌ಗಳ ಬೆಳೆ ಸಮೀಕ್ಷೆ ನಡೆದಿದೆ. ಒಟ್ಟು ಶೇ 50.78ರಷ್ಟು ಪ್ರಗತಿ ಸಾಧಿಸಲಾಗಿದೆ. ಕೋಲಾರ ಜಿಲ್ಲೆಯಲ್ಲಿ ಮುಳಬಾಗಿಲು ತಾಲ್ಲೂಕು ಮೊದಲ ಸ್ಥಾನದಲ್ಲಿದೆ’ ಎನ್ನುತ್ತಾರೆ ತಹಶೀಲ್ದಾರ್ ಕೆ.ಎನ್.ರಾಜಶೇಖರ್.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು