ಭಾನುವಾರ, ಮೇ 22, 2022
21 °C

ಮುಳಬಾಗಿಲು: ಸಂಭ್ರಮದ ವಿರೂಪಾಕ್ಷಿ ರಥೋತ್ಸವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮುಳಬಾಗಿಲು: ತಾಲ್ಲೂಕಿನ ವಿರೂಪಾಕ್ಷಿ ಗ್ರಾಮದಲ್ಲಿ ಕಾಮಾಕ್ಷಿದೇವಿ ಸಮೇತ ವಿರೂಪಾಕ್ಷೇಶ್ವರ ಸ್ವಾಮಿ ರಥ ಸಪ್ತಮಿ ಹಾಗೂ ಬ್ರಹ್ಮ ರಥೋತ್ಸವ ಗುರುವಾರ ವಿಜೃಂಭಣೆಯಿಂದ ನಡೆಯಿತು.

ಸರ್ಕಾರದ ಪರವಾಗಿ ತಹಶೀಲ್ದಾರ್ ಕೆ.ಎನ್. ರಾಜಶೇಖರ್ ಮತ್ತು ವೇಗಮೊಡಗು ಶಂಕರ್ ಅವರು ರಥೋತ್ಸವಕ್ಕೆ ಚಾಲನೆ ನೀಡಿದರು. ಬೆಂಗಳೂರು ಯಶವಂತಪುರ ಗಾಯತ್ರಿ ದೇವಾಲಯದ ಚಿದಂಬರ ದೀಕ್ಷಿತ್ ಸ್ವಾಮೀಜಿ ನೇತೃತ್ವವಹಿಸಿದ್ದರು. ಪರ್ಯಟೋತ್ಸವ, ವಸಂತೋತ್ಸವ, ನಟರಾಜೋತ್ಸವ, ಶಯನೋತ್ಸವ, ದ್ವಾದಶಿ ಮಂಗಳಾರತಿ, ವೃಷಭ ವಾಹನೋತ್ಸವ, ಗ್ರಾಮೋತ್ಸವ ಕಾರ್ಯಕ್ರಮ ನಡೆಯಿತು.

ಉಪ ತಹಶೀಲ್ದಾರ್ ಎಂ.ಎಚ್. ನಾರಾಯಣಸ್ವಾಮಿ, ರಾಜಸ್ವ ನಿರೀಕ್ಷಕ ಸಿ. ಸುಬ್ರಮಣಿ, ವಿ.ಎಸ್. ಗಿರೀಶ್, ಆಗಮಿಕರಾದ ವಿ.ಎಸ್. ಕುಮಾರಸ್ವಾಮಿ ದೀಕ್ಷಿತ್, ಬೆಂಗಳೂರಿನ ವಿ.ಪಿ. ಆನಂದ ದೀಕ್ಷಿತ್, ವೆಂಕಟೇಶ್‌ ಶರ್ಮ ಭಾಗವಹಿಸಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.