ಮಂಗಳವಾರ, ಜನವರಿ 28, 2020
21 °C
ವಿವೇಕಾನಂದರ ಜಯಂತಿಯಲ್ಲಿ ನಿವೃತ್ತ ಪ್ರಾಧ್ಯಾಪಕ ಪ್ರೊ.ಎಚ್.ಎನ್.ಶ್ರೀನಿವಾಸ್

ವಿವೇಕಾನಂದರ ಚಿಂತನೆ ಸಮಾಜಕ್ಕೆ ಪ್ರಸ್ತುತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ‘ಹಿಂದೂ ಧರ್ಮದ ಶಕ್ತಿಯನ್ನು ವಿಶ್ವಕ್ಕೆ ತೋರಿಸಿಕೊಟ್ಟ ಸ್ವಾಮಿ ವಿವೇಕಾನಂದರ ಚಿಂತನೆಗಳು ಸಮಾಜಕ್ಕೆ ಇಂದಿಗೂ ಪ್ರಸ್ತುತವಾಗಿದೆ’ ಎಂದು ನಿವೃತ್ತ ಪ್ರಾಧ್ಯಾಪಕ ಪ್ರೊ.ಎಚ್.ಎನ್.ಶ್ರೀನಿವಾಸ್ ತಿಳಿಸಿದರು.

ನಗರದ ಸರ್ಕಾರಿ ಮಹಿಳಾ ಕಾಲೇಜಿನಲ್ಲಿ ಭಾನುವಾರ ಹಮ್ಮಿಕೊಂಡಿದ್ದ ವಿವೇಕಾನಂದರ ೧೫೭ನೇ ಜಯಂತಿಯಲ್ಲಿ ಮಾತನಾಡಿ, ‘ಯುವಕರು ದುಶ್ಚಟಗಳಿಂದ ದೂರು ಇರಬೇಕು. ಆದರ್ಶಗಳ ವ್ಯಕ್ತಿತ್ವ ಮೈಗೂಡಿಸಿಕೊಂಡು ಉತ್ತಮ ರಾಷ್ಟ್ರ ನಿರ್ಮಾಣದಲ್ಲಿ ಪಾಲ್ಗೊಳ್ಳಬೇಕು’ ಎಂದು ಸಲಹೆ ನೀಡಿದರು.

‘ಯುವಕರು ಸ್ವಾಮಿವಿವೇಕಾನಂದರ ಹಾದಿಯಲ್ಲಿ ಮುಂದುವರೆದಾಗ ಉತ್ತಮ ಜೀವನ ರೂಪಿಸಿಕೊಳ್ಳುವುದರ ಜತೆಗೆ ಗುರಿ ಸಾಧನೆ ಮಾಡಲು ಸಾಧ್ಯ. ಅವರ ಜಯಂತಿ ಕೇವಲ ಆಚರಣೆಗೆ ಸಿಮೀತಗೊಳ್ಳಬಾರದು. ಅವರ ಸಂದೇಶಗಳ ಕುರಿತು ಅರ್ಥ ಮಾಡಿಕೊಳ್ಳುವುದರ ಜತೆಗೆ ಶಿಕ್ಷಣಕ್ಕೆ ಒತ್ತು ನೀಡಬೇಕು’ ಎಂದು ಹೇಳಿದರು.

‘ವಿವೇಕಾನಂದರು ಕನ್ಯಾಕುಮಾರಿಯ ಬಂಡೆಯ ಮೇಲೆ ಯೋಗಾಭ್ಯಾಸ ನಡೆಸಿದರು. ತಪ್ಪು ದಾರಿಯತ್ತ ಸಾಗುತ್ತಿದ್ದ ಸಮಾಜವನ್ನು ಸರಿದಾರಿಗೆ ತರಲು ಪ್ರಯತ್ನಿಸಿದರು. ಯುವರ ಶಕ್ತಿಯಾಗಿದ್ದಾರೆ. ಆದರೆ ಮಾರ್ಗದರ್ಶನದ ಕೊರತೆ ಯುವ ಮನಸ್ಸುಗಳು ಬೇಡವಾದ ವಿಷಯದ ಕಡೆ ಗಮನ ಹರಿಸುತ್ತಿವೆ’ ಎಂದು ಕಳವಳ ವ್ಯಕ್ತಪಡಿಸಿದರು.

ಕಾಲೇಜು ಅಭಿವೃದ್ದಿ ಸಮಿತಿ ಅಧ್ಯಕ್ಷ ಮುನಿವೆಂಕಟಪ್ಪ ಮಾತನಾಡಿ, ‘ವಿವೇಕನಂದರ ಸಂದೇಶ ಮತ್ತು ಮಾರ್ಗದರ್ಶನವನ್ನು ಪಾಲಿಸುವ ಪ್ರಯತ್ನ ಮಾಡಿದವರು ಸಮಾಜದಲ್ಲಿ ಉತ್ತಮ ವ್ಯಕ್ತಿಯಾಗಿ ಪರಿವರ್ತನೆಯಾಗಬಹುದು’ ಎಂದು ಅಭಿಪ್ರಾಯಪಟ್ಟರು.

‘ಏಕತೆ ಕೊರತೆಯಿಂದಾಗಿ ವ್ಯಾಪಾರಕ್ಕೆ ಬಂದ ೪೦ ಮಿಲಿಯನ್ ಬ್ರಿಟಿಷರು ೩೦೦ ಮಿಲಿಯನ್ ಇದ್ದ ಭಾರತೀಯರನ್ನು ೩೦೦ ವರ್ಷಗಳ ಕಾಲ ಆಳ್ವಿಕೆ ನಡೆಸಿದರು. ವಿವೇಕಾನಂದರಂತಹ ಗಣ್ಯ ವ್ಯಕ್ತಿಗಳ ಚಿಂತನೆಯಿಂದ ಅವರನ್ನು ದೇಶದಿಂದ ಓಡಿಸಲು ಸಹಕಾರಿಯಾಯಿತು’ ಎಂದು ವಿವರಿಸಿದರು.

ಪ್ರಭಾರಿ ಪ್ರಾಂಶುಪಾಲೆ ಪ್ರೊ.ಬೃಂದಾದೇವಿ ಮಾತನಾಡಿ, ‘ವಿವೇಕಾನಂದರು ಚಿಕಾಗೂ ಧಾರ್ಮಿಕ ಸಮ್ಮೇಳನದ ಸಭೆ ಅಣ್ಣ ತಮ್ಮಂದಿರೇ, ಅಕ್ಕ ತಂಗಿಯರೇ ಎಂದು ಸಂಬೋಧಿಸಿದರು. ಯಾವುದೇ ಒಂದು ಧರ್ಮವನ್ನು ಶ್ರೇಷ್ಠ ಧರ್ಮವೆಂದು ಬಿಂಬಿಸುವುದು ಅಪಾಯಕಾರಿಯಾಗಿದೆ. ಹಿಂದು ಧರ್ಮದಲ್ಲಿ ಹೆಚ್ಚಿನ ಸತ್ವತೆ ಇದೆ ಎಂಬುದನ್ನು ಪರಿಚಯಿಸಿಕೊಟ್ಟಿದ್ದಾರೆ’ ಎಂದು ಹೇಳಿದರು.

ಸಹಾಯಕ ಪ್ರಾಧ್ಯಾಪಕರಾದ ಜಿ.ಎಂ.ಪ್ರಕಾಶ್, ಎಲ್.ವಿನುತಾ, ವಿ.ಭಾಗ್ಯಕ್ಷ್ಮಿ, ಕೆ.ಆರ್.ಮಂಜುಳಾ ಹಾಜರಿದ್ದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು