ಜು.6ರಿಂದ ಜಿಲ್ಲಾಮಟ್ಟದ ವಾಲಿಬಾಲ್ ಪಂದ್ಯಾವಳಿ

ಗುರುವಾರ , ಜೂಲೈ 18, 2019
23 °C
ಚಿಂತಾಮಣಿ ತಾಲ್ಲೂಕಿನ ಚಿಲಕಲನೇರ್ಪು ಗ್ರಾಮದಲ್ಲಿ ಆಯೋಜನೆ

ಜು.6ರಿಂದ ಜಿಲ್ಲಾಮಟ್ಟದ ವಾಲಿಬಾಲ್ ಪಂದ್ಯಾವಳಿ

Published:
Updated:

ಕೋಲಾರ: ‘ಅಮೆರಿಕದ ರಾಯಲ್ ಟೆಕ್ಸಾಸ್, ಅಕ್ಷರ ದಿ ಸ್ಕೂಲ್ ಹಾಗೂ ಯುವ ಶಕ್ತಿ ಸಂಘಟನೆಯು ಬಯಲು ಸೀಮೆ ಜಿಲ್ಲಾಮಟ್ಟದ ವಾಲಿಬಾಲ್ ಪಂದ್ಯಾವಳಿಯನ್ನು ಜು.6ಮತ್ತು 7ರಂದು ಚಿಂತಾಮಣಿ ತಾಲ್ಲೂಕಿನ ಚಿಲಕಲನೇರ್ಪು ಗ್ರಾಮದಲ್ಲಿ ಹಮ್ಮಿಕೊಂಡಿದೆ. 

‘ಯುವ ಶಕ್ತಿ ಸಂಘಟನೆಯು ಕಳೆದ 5 ವರ್ಷಗಳಿಂದ ಸಾಮಾಜಿಕ ಸೇವಾ ಚಟುವಟಿಕೆಗಳೊಂದಿಗೆ ಕ್ರೀಡೆಗಳಿಗೂ ಅದ್ಯತೆ ನೀಡುತ್ತಿದೆ. ವಾಲಿಬಾಲ್ ಪಂದ್ಯಾವಳಿಯಲ್ಲಿ ಉತ್ತಮ ಪ್ರದರ್ಶನ ನೀಡಿದ ಆಟಗಾರರನ್ನು ಅಮೆರಿಕದಲ್ಲಿ ನಡೆಯುವ ಕಾಟಿ ಪ್ರೀಮಿಯರ್ ಲೀಗ್ ಪಂದ್ಯಾವಳಿಗೆ ಕಳುಹಿಸಲಾಗುತ್ತದೆ. ಇದಕ್ಕೆ ರಾಯಲ್ ಟೆಕ್ಸಾಸ್ ಲೀಗ್ ಪ್ರಾಯೋಜಕತ್ವ ಇರಲಿದೆ’ ಎಂದು ಯುವ ಶಕ್ತಿ ಸಂಘಟನೆಯ ರಾಜ್ಯ ಘಟಕದ ಅಧ್ಯಕ್ಷ ಶಿವಪ್ರಕಾಶ್‌ ರೆಡ್ಡಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು. 

‘ಬಯಲು ಸೀಮೆಯ ರೈತ ಮಕ್ಕಳ ಸಂಘಟನೆಯಾದ ಯುವ ಶಕ್ತಿ ಈ ನೆಲದ ಉಳಿವು ಹಾಗೂ ಏಳ್ಗೆಗಾಗಿ ಶ್ರಮಿಸುತ್ತಿದೆ. ಪರಿಸರ ಶಕ್ತಿ, ವಿದ್ಯಾಶಕ್ತಿ, ಆರೋಗ್ಯ ಶಕ್ತಿ ಹಾಗೂ ಉದ್ಯೋಗ ಶಕ್ತಿ ಹೆಸರಿನಲ್ಲಿ ಸಾಮಾಜಿಕ ಕಾರ್ಯಗಳನ್ನು ಹಮ್ಮಿಕೊಳ್ಳುತ್ತಿದೆ. ಜತೆಗೆ 20 ಸಾವಿರ ಗಿಡಗಳನ್ನು ನೆಡೆಲು ಸಿದ್ಧತೆ ಕೈಗೊಳ್ಳಲಾಗಿದೆ’ ಎಂದರು.

‘ಯುವಜನರಲ್ಲಿ ಕ್ರೀಡಾ ಮನೋಭಾವ ಬೆಳೆಸುವುದರ ಜತೆಗೆ ಸಾಮಾಜಿಕ ಕಾರ್ಯಕ್ರಮಗಳಿಗೆ ಯುವಕರ ಸಹಭಾಗಿತ್ವ ಪಡೆದುಕೊಳ್ಳಲು ಈ ವಾಲಿಬಾಲ್ ಪಂದ್ಯಾವಳಿ ಆಯೋಜಿಸಲಾಗಿದೆ. ಇದಕ್ಕೆ ಎಲ್ಲರೂ ಸಹಕಾರ ನೀಡಬೇಕು’ ಎಂದು ಮನವಿ ಮಾಡಿದರು.

₹50ಸಾವಿರ ಬಹುಮಾನ: ‘ಪಂದ್ಯಾವಳಿಯಲ್ಲಿ ವಿಜೇತರಾದವರಿಗೆ ಪ್ರಥಮ ಬಹುಮಾನ ₹50 ಸಾವಿರ, ದ್ವಿತೀಯ ಬಹುಮಾನ ₹30 ಸಾವಿರ ಹಾಗೂ ತೃತಿಯ ಬಹುಮಾನ ₹20 ಸಾವಿರ ನಿಗದಿಪಡಿಸಲಾಗಿದೆ. ಸ್ಪರ್ಧೆಯಲ್ಲಿ ಭಾಗವಹಿಸುವ ಪ್ರತಿ  ತಂಡ ₹3 ಸಾವಿರ ಹಣ ಪಾವತಿಸಿ, ನೋಂದಣಿ ಮಾಡಿಸಿಕೊಳ್ಳಬೇಕು. ಪಂದ್ಯಾವಳಿಯಲ್ಲಿ 40 ತಂಡಗಳು ಭಾಗವಹಿಸುವ ನಿರೀಕ್ಷೆಯಿದೆ. ಎಲ್ಲಾ ತಂಡಗಳಿಗೂ ಊಟ, ವಸತಿಯ ಸೌಲಭ್ಯ ನೀಡಲಾಗುವುದು’ ಎಂದು ವಿವರಿಸಿದರು.

ಸಂಘಟನೆಯ ಪದಾಧಿಕಾರಿಗಳಾದ ಪುಟ್ಟರಾಜು, ಮಂಜುನಾಥ್, ಲಕ್ಷ್ಮೀಕಾಂತ್, ಸುಬ್ರಮಣ್ಯ, ರಾಘವೇಂದ್ರ, ನವೀನ್, ಮುನಿರಾಜು ಇದ್ದರು. 

ಹೆಚ್ಚಿನ ಮಾಹಿತಿಗೆ 8861731378 ಅಥವಾ 9113051472ಕ್ಕೆ ಸಂಪರ್ಕಿಸಬಹುದು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !