ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋಲಾರ: ಜಿಲ್ಲೆಗೆ ಯರಗೋಳ್ ಜಲಾಶಯ ಆಸರೆ, ಬರಗಾಲದಲ್ಲಿ ಕೈ ಹಿಡಿದ ನೀರಾವರಿ ಯೋಜನೆ

ಮಂಜುನಾಥ ಎಸ್.
Published 5 ಮೇ 2024, 6:29 IST
Last Updated 5 ಮೇ 2024, 6:29 IST
ಅಕ್ಷರ ಗಾತ್ರ

ಬಂಗಾರಪೇಟೆ: ಕೋಲಾರ, ಬಂಗಾರಪೇಟೆ ಮಾಲೂರು ಪಟ್ಟಣ ಹಾಗೂ ಸುತ್ತಮುತ್ತಲಿನ 45 ಗ್ರಾಮಗಳಿಗೆ ಶುದ್ಧ ಕುಡಿಯುವ ನೀರು ಒದಗಿಸುತ್ತಿದೆ ಯರಗೋಳ್‌ ಜಲಾಶಯ.

ಬಂಗಾರಪೇಟೆ ತಾಲ್ಲೂಕಿನ ಯರಗೋಳ್‌ ಗ್ರಾಮದ ಬಳಿ ವ್ಯರ್ಥವಾಗಿ ತಮಿಳುನಾಡಿಗೆ ಹರಿದು ಹೋಗುತ್ತಿದ್ದ ನೀರಿಗೆ ಅಡ್ಡಲಾಗಿ ನಿರ್ಮಿಸಿರುವ ಡ್ಯಾಂ ಮೂರು ತಾಲ್ಲೂಕಿನ ಜನರ ಕುಡಿಯುವ ನೀರಿನ ಬವಣೆ ತೀರಿಸುತ್ತಿದೆ. ಹಾಗಾಗಿ ಈ ಕೋಲಾರ, ಬಂಗಾರಪೇಟೆ ಮಾಲೂರು ತಾಲ್ಲೂಕಿನಲ್ಲಿ ಬರಗಾಲದಲ್ಲೂ ನೀರಿನ ಅಭಾವ ಕಾಡಲಿಲ್ಲ. 

ಜಲಾಶಯ ಹಿನ್ನೆಲೆ: 2006ರಲ್ಲಿ ಎಚ್‌.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಯೋಜನೆಗೆ ಶಂಕುಸ್ಥಾಪನೆ ಮಾಡಲಾಗಿತ್ತು. 300 ಎಕರೆ ಪ್ರದೇಶದಲ್ಲಿ ಯೋಜನೆ ಕಮಗಾರಿಗೆ ಚಾಲನೆ ನೀಡಲಾಯಿತು. ಆದರೆ ಕಾಮಗಾರಿ 2006 ರಿಂದ 2013ರವೆರೆಗೆ ಸ್ಥಗಿತಗೊಂಡಿತು. 2013ರಲ್ಲಿ ಜಿಲ್ಲೆಯ ಶಾಸಕರ ಒತ್ತಾಯದ ಮೇರೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮರು ಅನುಮೋದನೆ ನೀಡಿ ಶುದ್ಧೀಕರಣ ಘಟಕಕ್ಕೆ ಹಣ ಬಿಡುಗಡೆ ಮಾಡಿದರು. ಸದ್ಯ 17 ವರ್ಷಗಳ ನಂತರ ಯೋಜನೆ ಪೂರ್ಣಗೊಂಡು ಈಚೆಗೆ ಸಿಎಂ ಸಿದ್ದರಾಮಯ್ಯ ಉದ್ಘಾಟನೆ ಮಾಡಿದರು. ಇದು ಕೋಲಾರ ಜಿಲ್ಲೆಗೆ ಮಾಡಿರುವ ಶುದ್ಧ ಕುಡಿಯುವ ನೀರಿನ ಘಟಕ ಇದಾಗಿದೆ. ಈ ಯೋಜನೆ ₹315 ಕೋಟಿ ವೆಚ್ಚದಲ್ಲಿ ಮುಕ್ತಾಯಗೊಂಡಿದೆ.

ಬಂಗಾರಪೇಟೆ ತಾಲ್ಲೂಕಿನಲ್ಲಿ ತೀವ್ರ ಬರಗಾಲವಿದ್ದರೂ ಸಹ ಎಲ್ಲಾ ವಾರ್ಡ್‌ಗಳಿಗೆ ಈ ಜಲಾಶಯ ಸಮರ್ಪಕವಾಗಿ ಕುಡಿಯುವ ನೀರು ಸರಬರಾಜು ಮಾಡುತ್ತಿದೆ.  ಕಳೆದ ಇಪ್ಪತ್ತು ವರ್ಷಗಳಿಂದ ಅನುಭವಿಸಿದ ಬರ ಪರಿಸ್ಥಿತಿ, ನೀರಿನ ತತ್ವಾರ ಈ ಯೋಜನೆ ದೂರ ಮಾಡಿದೆ. ಜನ ಜಾನುವಾರುಗಳಿಗೆ ಪ್ರಾಣಿ ಪಕ್ಷಗಳಿಗೆ ಆಸರೆಯಾಗಿದೆ.

ಯರಗೋಳ್ ಜಲಾಶಯದಲ್ಲಿ ಶೇಖರಣೆಯಾಗಿರುವ ನೀರು
ಯರಗೋಳ್ ಜಲಾಶಯದಲ್ಲಿ ಶೇಖರಣೆಯಾಗಿರುವ ನೀರು
ಯರಗೋಳ್‌ ಡ್ಯಾಂ ಕುಡಿಯುವ ನೀರಿನ ಯೋಜನೆಯಿಂದ ಜನರು ನೆಮ್ಮದಿಯಿಂದ ಇದ್ದಾರೆ. ಮುಂದಿನ ದಿನಗಳಲ್ಲಿ ಗ್ರಾಮೀಣ ಪ್ರದೇಶಗಳಿಗೂ ಕುಡಿಯುವ ನೀರು ಪೂರೈಸುವ ಯೋಜನೆಯನ್ನು ವಿಸ್ತರಿಸಲಾಗುವುದು.
–ಎಸ್.ಎನ್.ನಾರಾಯಣಸ್ವಾಮಿ, ಶಾಸಕ 
ತೀವ್ರ ಬರಗಾಲವಿದ್ದರೂ ಕುಡಿಯುವ ನೀರಿಗೆ ಯಾವುದೇ ಕೊರತೆ ಇಲ್ಲದೆ ಯರಗೋಳ್ ಡ್ಯಾಂನಿಂದ ನೀರು ಪೂರೈಕೆ ಆಗುತ್ತಿರುವುದು ಸಂತಸದ ವಿಷಯ. 
–ಭಾಗ್ಯಮ್ಮ, ಪುರಸಭೆ ಮಾಜಿ ಅಧ್ಯಕ್ಷೆ ಬಂಗಾರಪೇಟೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT