ಕೋಲಾರ: ಎತ್ತಿನಹೊಳೆ ಯೋಜನೆಯಲ್ಲಿ ಕಾಮಗಾರಿಗಳು ಪ್ರಗತಿಯಲ್ಲಿದ್ದು, ಒಂದೂವರೆ ವರ್ಷದ ಒಳಗಾಗಿ ಜಿಲ್ಲೆಯ ನಂಗಲಿ ಗಡಿಯವರೆಗೆ ನೀರು ಹರಿಸುತ್ತೇವೆ ಎಂದು ಆಹಾರ ಸಚಿವ ಕೆ.ಎಚ್.ಮುನಿಯಪ್ಪ ಭರವಸೆ ನೀಡಿದರು.

ಹೊಸ ವರ್ಷದ ಪ್ರಯುಕ್ತ ಗುರುವಾರ ನಗರದ ಸಾಯಿಬಾಬಾ ದೇವಾಲಯಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ ಬಳಿಕ ನಗರದ ಹಾರೋಹಳ್ಳಿಯ ತಮ್ಮ ನಿವಾಸದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಹಲವಾರು ವಿಚಾರ ಹಂಚಿಕೊಂಡರು.

ದೇವನಹಳ್ಳಿಯ ಕುಂದಾಣ ಬಳಿ ನೀರು ಸಂಗ್ರಹಿಸಿ ಮೂರು ಲೈನ್ಗಳಲ್ಲಿ ನೀರನ್ನು ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಿಗೆ ಹರಿಸುತ್ತೇವೆ. ಮಳೆಗಾಲದ ಮೂರ್ನಾಲ್ಕು ತಿಂಗಳಲ್ಲಿ 24 ಟಿಎಂಸಿ ಅಡಿ ನೀರು ಸಂಗ್ರಹವಾಗಲಿದೆ. ರಾಮನಗರ ಜಿಲ್ಲೆಯನ್ನು ಸೇರಿಸಿಕೊಂಡರೂ 16 ಟಿಎಂಸಿ ಅಡಿ ನೀರು ಇದ್ದರೆ ಈ ಎಲ್ಲಾ ಜಿಲ್ಲೆಗಳಿಗೆ ಹರಿಸಲು ಯಾವುದೇ ತೊಂದರೆಯಾಗುವುದಿಲ್ಲ. ಈಗಾಗಲೇ ಎಲ್ಲಾ ಜಿಲ್ಲೆಗಳಲ್ಲಿ ಕೆರೆಗಳನ್ನು ಆಯ್ಕೆ ಮಾಡಲಾಗಿದ್ದು, ಕುಡಿಯುವ ನೀರಿಗೆ ಆದ್ಯತೆ ನೀಡಿ ಆನಂತರ ಕೆರೆಗಳಿಗೆ ಹರಿಸಲಾಗುತ್ತದೆ ಎಂದರು.

ಯಾವುದೇ ಕಾರಣಕ್ಕೂ ಕೆ.ಸಿ ವ್ಯಾಲಿ, ಎಚ್.ಎನ್.ವ್ಯಾಲಿ ನೀರು ಮತ್ತು ಎತ್ತಿನಹೊಳೆ ನೀರನ್ನು ಒಂದಾಗಲು ಬಿಡುವುದಿಲ್ಲ. ಇದಕ್ಕಾಗಿ ಪ್ರತ್ಯೇಕ ಪೈಪ್ಲೈನ್ ಮಾಡಿ ಕುಡಿಯುವ ನೀರಿನ ಟ್ಯಾಂಕಿಗೆ ಹರಿಸಲಾಗುತ್ತದೆ. ದೊಡ್ಡಬಳ್ಳಾಪುರದಲ್ಲಿ 2 ಟಿಎಂಸಿ ಅಡಿ ನೀರನ್ನು ಸಂಗ್ರಹಿಸುವ ಸ್ಥಳವನ್ನು ಗುರುತಿಸಲಾಗಿದ್ದು, ಕೆಲಸ ಪ್ರಗತಿಯಲ್ಲಿದೆ ಎಂದು ಮಾಹಿತಿ ನೀಡಿದರು.

ಬೆಂಗಳೂರಿನ ಕೋಗಿಲು ಬಡಾವಣೆ ಸಂತ್ರಸ್ತರ ತೆರವು ಪ್ರಕರಣದಲ್ಲಿ ನಮ್ಮ ಸರ್ಕಾರ ಮಾನವೀಯ ನೆಲೆಗಟ್ಟಿನ ಆಧಾರದ ಮೇಲೆ ಪುನರ್ವಸತಿಗೆ ಚಿಂತನೆ ನಡೆಸಿದೆ. ಯಾರನ್ನೂ ನಿರಾಶ್ರಿತರನ್ನಾಗಿಸಲು ಸಾಧ್ಯವಾಗುವುದಿಲ್ಲ. ಪ್ರತಿ ತಾಲ್ಲೂಕಿನಲ್ಲಿ ಕನಿಷ್ಠ 1 ಸಾವಿರ ಮನೆ, ನಿವೇಶನಗಳನ್ನು ತಾರತಮ್ಯವಿಲ್ಲದೆ ಎಲ್ಲಾ ವರ್ಗದ ಬಡವರಿಗೂ ನೀಡಲಾಗುತ್ತದೆ. ಕೇರಳದವರಾಗಲಿ, ಯಾರೇ ಏನೇ ಹೇಳಲಿ ಸರ್ಕಾರ ಸೂಕ್ತ ತೀರ್ಮಾನ ಮಾಡುತ್ತದೆ ಎಂದು ತಿಳಿಸಿದರು.

ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ರಾಷ್ಟ್ರ ನಾಯಕರು. ರಾಜ್ಯ ಸರ್ಕಾರದಲ್ಲಿ ಅವರು ಹಸ್ತಕ್ಷೇಪ ಮಾಡಿಲ್ಲ. ವಿರೋಧ ಪಕ್ಷದವರು ಆರೋಪ ಮಾಡುವುದು ಸಾಮಾನ್ಯ. ನಮ್ಮ ಸರ್ಕಾರದ ಅವಧಿಯಲ್ಲಿ ಇಡೀ ರಾಜ್ಯದ ಅಭಿವೃದ್ಧಿ ಆಗುತ್ತಿದೆ. ಕೇರಳ ಚುನಾವಣೆ ವಿಚಾರವಾಗಿ ಅಲ್ಲಿನ ನಮ್ಮ ನಾಯಕರು ಮಾತನಾಡಿದ್ದಾರೆ. ನಾನು ಪ್ರತಿಕ್ರಿಯಿಸುವ ಅವಶ್ಯವಿಲ್ಲ ಎಂದರು.

ಜಿಲ್ಲಾ ಕಾಂಗ್ರೆಸ್ ಕಿಸಾನ್ ಘಟಕದ ಅಧ್ಯಕ್ಷ ಸೀತಿಹೊಸೂರು ಮುರಳಿಗೌಡ, ಕಾಂಗ್ರೆಸ್ ಎಸ್ಸಿ ಘಟಕದ ಜಿಲ್ಲಾಧ್ಯಕ್ಷ ಕೆ.ಜಯದೇವ್, ಆರ್ಯವೈಶ್ಯ ನಿಗಮದ ಅಧ್ಯಕ್ಷ ರಾಮಪ್ರಸಾದ್, ಪಕ್ಷದ ಜಿಲ್ಲಾ ವಕ್ತಾರ ಎಲ್.ಎ.ಮಂಜುನಾಥ್, ನಗರಸಭೆ ಮಾಜಿ ಉಪಾಧ್ಯಕ್ಷ ಎಸ್.ಆರ್.ಮುರಳಿಗೌಡ, ಮುಖಂಡರಾದ ಪ್ರಸಾದ್ಬಾಬು, ನಾಗರಾಜ್ ಇದ್ದರು.

ಮಾನವೀಯ ನೆಲೆಯಲ್ಲಿ ಕೋಗಿಲು ಸಂತ್ರಸ್ತರಿಗೆ ಸಹಾಯ ಬಯಲುಸೀಮೆ ಜಿಲ್ಲೆಗಳಿಗೆ 16 ಟಿಎಂಸಿ ಅಡಿ ನೀರು ಇದ್ದರೆ ಸಾಕು ವಿವಿಧ ದೇಗುಲಗಳಿಗೆ ಭೇಟಿ ನೀಡಿದ ಸಚಿವ

ರಾಜಕೀಯ ಬದಲಾವಣೆ ಕಾಣುತ್ತಿಲ್ಲ ರಾಜ್ಯ ರಾಜಕೀಯದಲ್ಲಿ ಅಂಥ ಯಾವುದೇ ಬದಲಾವಣೆ ಕಾಣುತ್ತಿಲ್ಲ. ಅಂಥ ಯಾವುದೇ ಬದಲಾವಣೆ ಇದ್ದರೆ ಹೈಕಮಾಂಡ್ ನಿರ್ಧಾರ ಕೈಗೊಳ್ಳುತ್ತದೆ. ಅಧಿಕಾರ ಹಸ್ತಾಂತರ ವಿಚಾರ ಸಂಪುಟ ವಿಸ್ತರಣೆ ವಿಚಾರ ಸೇರಿದಂತೆ ಯಾವುದೇ ತೀರ್ಮಾನ ಹೈಕಮಾಂಡ್ಗೆ ಬಿಟ್ಟಿದ್ದು ಎಂದು ಸಚಿವ ಮುನಿಯಪ್ಪ ಹೇಳಿದರು. ಹೊಸ ವರ್ಷದ ಪ್ರಯುಕ್ತ ಎಂದಿನಂತೆ ದೇವಾಲಯಕ್ಕೆ ಭೇಟಿ ನೀಡಿದ್ದು ಉತ್ತಮ ಮಳೆ ಬೆಳೆಯಾಗಲಿ. ಎಲ್ಲಾ ಸಮುದಾಯ ಸುಖ ಶಾಂತಿಯಿಂದ ಬಾಳಲಿ ಎಂಬುದಾಗಿ ಪ್ರಾರ್ಥಿಸಿದ್ದೇನೆ ಎಂದರು. ಕೋಲಾರದ ಸಾಯಿಬಾಬಾ ದೇಗುಲ ಸಂಜೆ ಮುಳಬಾಗಿಲಿನಲ್ಲಿ ಆಂಜನೇಯಸ್ವಾಮಿ ದೇಗುಲಕ್ಕೆ ಭೇಟಿ ನೀಡಿದರು. ರಾತ್ರಿ ಉರುಸ್ ಕಾರ್ಯಕ್ರಮದಲ್ಲಿ ಭಾಗಿಯಾದರು.

ರೈಲ್ವೆ ಯೋಜನೆಗೆ ಜಾಗ ನೀಡಲು ಸಿದ್ಧ, ರಾಜ್ಯದಲ್ಲಿ ಕೇಂದ್ರ ಸರ್ಕಾರ ಕೈಗೊಳ್ಳಲಿರುವ ಯೋಜನೆಗಳಿಗೆ ರಾಜ್ಯ ಕಾಂಗ್ರೆಸ್ ಸರ್ಕಾರ ಭೂಮಿ ಕೊಡಲು ಸಿದ್ಧವಿದೆ ಎಂದು ಸಚಿವ ಮುನಿಯಪ್ಪ ಹೇಳಿದರು. ಶ್ರೀನಿವಾಸಪುರ ಬಳಿ ರೈಲ್ವೆ ಕೋಚ್ ಕಾರ್ಖಾನೆಗೆ 1200 ಎಕರೆ ಗುರುತಿಸಲಾಗಿತ್ತು. ಸರ್ಕಾರದ 500 ಎಕರೆ ರೈತರದ್ದು 700 ಎಕರೆ ಇದೆ. ಆ ಸಂಬಂಧ ದಾಖಲೆಗಳಿವೆ. ನಾನು ರೈಲ್ವೆ ಇಲಾಖೆ ರಾಜ್ಯ ಖಾತೆ ಸಚಿವನಾಗಿದ್ದೆ ಡಿ.ವಿ.ಸದಾನಂದಗೌಡರು ಮುಖ್ಯಮಂತ್ರಿ ಆಗಿದ್ದರು. ಆಗ ಒಪ್ಪಂದ ಆಗಿತ್ತು. ಈಗಲೂ ರಾಜ್ಯ ಸರ್ಕಾರದಿಂದ ಜಾಗ ನೀಡುವುದಕ್ಕೆ ಸಿದ್ಧವಿದ್ದೇವೆ. ಆದರೆ ನನ್ನ ಆತ್ಮೀಯರೂ ಆಗಿರುವ ರೈಲ್ವೆ ಇಲಾಖೆ ರಾಜ್ಯ ಖಾತೆ ಸಚಿವ ವಿ.ಸೋಮಣ್ಣ ಯಾವ ಕಾರಣಕ್ಕೆ ನನ್ನ ಅವಧಿಯಲ್ಲಿ ಪ್ರಯತ್ನ ಪಟ್ಟಿಲ್ಲವೆಂದು ಹೇಳಿಕೆ ನೀಡಿದ್ದಾರೆಯೋ ಗೊತ್ತಿಲ್ಲ. ಭೂಮಿ ಕೊಡುವ ಸಂಬಂಧ ರಾಜ್ಯ ಸರ್ಕಾರದಿಂದ ಪತ್ರ ಬರೆಯಲಾಗಿದೆ. ಸದ್ಯದಲ್ಲೇ ಸಭೆ ನಡೆಸಲಾಗುವುದು ಎಂದರು. ವೈಟ್ಫೀಲ್ಡ್ ಕೋಲಾರಕ್ಕೆ ನೇರ ರೈಲು ಸೇರಿದಂತೆ 12 ಯೋಜನೆಗಳನ್ನು ಮಂಜೂರು ಮಾಡಿದ್ದು ನಾನು ಸಚಿವನಾಗಿದ್ದಾಗ. ಈಗ ಅವರು ಕೆಲಸ ಶುರು ಮಾಡಿದ್ದಾರೆ. ಅಗತ್ಯ ಇರುವ ಕಡೆ ಕೇಳಿದರೆ ಯೋಜನೆಗಳಿಗೆ ಈಗಲೂ ಜಾಗ ನೀಡುತ್ತೇವೆ ಎಂದು ಹೇಳಿದರು.

ಸದ್ಯದಲ್ಲೇ ಇಂದಿರಾ ಕಿಟ್ ವಿತರಣೆ ಅಕ್ಕಿ ಎಣ್ಣೆ ಬೇಳೆ ಉಪ್ಪು ಸಕ್ಕರೆ ಒಳಗೊಂಡ ಇಂದಿರಾ ಪಡಿತರ ಕಿಟ್ ಇಡೀ ವಿಶ್ವದಲ್ಲೇ ಮೊದಲ ಯೋಜನೆಯಾಗಿದೆ. ಶೀಘ್ರದಲ್ಲೇ ಗ್ರಾಹಕರ ಕೈ ತಲುಪಲಿದೆ. 1.26 ಕೋಟಿ ಪಡಿತರ ಚೀಟಿ ಮೂಲಕ 4.5 ಕೋಟಿ ಜನರಿಗೆ ಪೌಷ್ಟಿಕಾಂಶ ಸಿಗಲಿದ್ದು ಕುಟುಂಬದ ಉತ್ತಮ ಆರೋಗ್ಯಕ್ಕೆ ಪೂರಕ ಆಗಲಿದೆ ಎಂದು ಆಹಾರ ಸಚಿವ ಮುನಿಯಪ್ಪ ಹೇಳಿದರು. ಭಾರತದ ಪ್ರಜೆ ದೇಶದ ಯಾವುದೇ ಮೂಲೆಯಲ್ಲಿದ್ದರೂ ಪಡಿತರ ವಿತರಣೆ ನೀಡಲು ಕೇಂದ್ರ ಸರ್ಕಾರ ತೀರ್ಮಾನ ತೆಗೆದುಕೊಂಡಿರುವುದರಿಂದ ಎಲ್ಲರಿಗೂ ಅನುಕೂಲವಾಗಲಿದೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.