ಬುಧವಾರ, ಜನವರಿ 29, 2020
19 °C

ಅಪಘಾತ: ಗಾಯಾಳು ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಾರಟಗಿ: ದ್ವಿಚಕ್ರ ವಾಹನದ ಮೇಲೆ ಲಾರಿ ಹರಿದು ತೀವ್ರ ಗಾಯಗೊಂಡಿದ್ದ ಬೈಕ್‌ನ ಹಿಂಬದಿ ಸವಾರ ಭಾನುವಾರ ರಾತ್ರಿ ಮೃತಪಟ್ಟಿದ್ದಾರೆ.

ರಾಜೀವಗಾಂಧಿ ನಗರದ ರಮೇಶ ಹನುಮಂತಪ್ಪ ನಾಯಕ (25) ಮೃತಪಟ್ಟವರು. ಜ. 7ರಂದು ಗಂಗಾವತಿಯ ಚನ್ನಬಸವತಾತನ ಜಾತ್ರೆಗೆ ದ್ವಿಚಕ್ರ ವಾಹನದಲ್ಲಿ ತೆರಳುವಾಗ ಸಿದ್ದಾಪುರ ಬಳಿ ಲಾರಿ ಹರಿದು, ಬೈಕ್ ಸವಾರ ಮಲ್ಲಿಕಾರ್ಜುನ (25) ಸ್ಥಳದಲ್ಲೇ ಮೃತಪಟ್ಟಿದ್ದರು.

ರಮೇಶನ ತಲೆಗೆ ಗಂಭೀರ ಪೆಟ್ಟು ಬಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಯುವಕ ಮೃತಪಟ್ಟರು.

 

ಪ್ರತಿಕ್ರಿಯಿಸಿ (+)