ಸೋಮವಾರ, ಜನವರಿ 20, 2020
29 °C

ಟ್ರ್ಯಾಕ್ಟರ್‌– ಲಾರಿ ಡಿಕ್ಕಿ: ಇಬ್ಬರ ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಾರಟಗಿ: ಟ್ರ್ಯಾಕ್ಟರ್‌ಗೆ ಲಾರಿ ಡಿಕ್ಕಿ ಹೊಡೆದು, ಟ್ರ್ಯಾಕ್ಟರ್‌ನಲ್ಲಿದ್ದ ಇಬ್ಬರು ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಸಿದ್ದಲಿಂಗನಗರದ (ಸಾಕ್ಷಿ ರೈಸ್‌ ಮಿಲ್‌) ಬಳಿ ಶನಿವಾರ ಜರುಗಿದೆ.

ರಾಯಚೂರು ಜಿಲ್ಲೆ ಸಿಂಧನೂರು ತಾಲ್ಲೂಕು ಹಂಚಿನಾಳಕ್ಯಾಂಪ್‌ ನಿವಾಸಿಗಳಾದ ರಾಘವೇಂದ್ರ (ಟ್ರ್ಯಾಕ್ಟರ್‌ ಚಾಲಕ) (28), ಟ್ರ್ಯಾಲಿಯಲ್ಲಿದ್ದ ಶೇಕ್ಷಾವಲಿ (21) ಮೃತಪಟ್ಟವರು.

ಡಿಕ್ಕಿ ಹೊಡೆದ ರಭಸಕ್ಕೆ ಟ್ರ್ಯಾಕ್ಟರ್‌ ಪಕ್ಕದ ಜಮೀನಿನಲ್ಲಿ ಬಿದ್ದಿದ್ದು, ಲಾರಿ ಟ್ರ್ಯಾಕ್ಟರ್ ಮೇಲೆ ಉರುಳಿಬಿದ್ದಿದೆ.  ಘಟನಾ ಸ್ಥಳವನ್ನು ಪೊಲೀಸರು ಪರಿಶೀಲನೆ ನಡೆಸಿದರು. ಕಾರಟಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು