ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರತಿ ಮನೆಗೂ ನೀರು ಪೂರೈಕೆಗೆ ಕ್ರಮ

Last Updated 27 ಸೆಪ್ಟೆಂಬರ್ 2022, 12:20 IST
ಅಕ್ಷರ ಗಾತ್ರ

ಅಳವಂಡಿ: ಗ್ರಾಮದ ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ಜಿಲ್ಲಾ ಪಂಚಾಯಿತಿ ಹಾಗೂ ಗ್ರಾಮೀಣ ಕುಡಿಯುವ ನೀರು ಹಾಗೂ ನೈರ್ಮಲ್ಯ ಇಲಾಖೆ ಹಾಗೂ ವಿವಿಧ ಇಲಾಖೆಗಳ ಸಂಯುಕ್ತಾಶ್ರಯದಲ್ಲಿ ಹರ್ ಘರ್ ಜಲ್ ಉತ್ಸವದ ವಿಶೇಷ ಗ್ರಾಮ ಸಭೆ ಮಂಗಳವಾರ ನಡೆಯಿತು.

ಸಭೆಯಲ್ಲಿ ಜೆಇ ನರೇಶ ಮಾತನಾಡಿ, ಜಲ ಜೀವನ ಮಿಷನ್ ಯೋಜನೆ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾಗಿದೆ. ಪ್ರತಿ ಜನ ಸಮುದಾಯಕ್ಕೆ ಸಮರ್ಪಕವಾಗಿ ಮೂಲಸೌಕರ್ಯಗಳನ್ನು ಒದಗಿಸುವುದು ಅವಶ್ಯಕತೆ ಇದೆ. ಹಾಗಾಗಿ ಈ ಯೋಜನೆಯಲ್ಲಿ ಪ್ರತಿ ಮನೆ ಮನೆಗೆ ನೀರು ಸರಬರಾಜು ಮಾಡಬೇಕು ಎಂಬುದು ಈ ಯೋಜನೆಯ ಉದ್ದೇಶವಾಗಿದೆ ಎಂದರು.

ಅಳವಂಡಿ ಭಾಗದಲ್ಲಿ 14 ಗ್ರಾಮದಲ್ಲಿ ಜಲ ಜೀವನ ಮಿಷನ್ ಯೋಜನೆಯಲ್ಲಿ ತೆಗೆದುಕೊಂಡಿದ್ದೇವೆ. ಅಂಗನವಾಡಿ, ಶಾಲೆ ಹಾಗೂ ಸರ್ಕಾರಿ ಕಛೇರಿಗಳು, ದೇವಸ್ಥಾನ ಹಾಗೂ ಪ್ರತಿ ಮನೆಗೂ ನೀರನ್ನು ಸರಬರಾಜು ಮಾಡಲಾಗಿದೆ ಎಂದರು.

ಪಿಡಿಒ ಬಸವರಾಜ ಕೀರ್ದೀ ಮಾತನಾಡಿ, ಜಲ ಜೀವನ ಮಿಷನ್ ಯೋಜನೆಯಲ್ಲಿ ಗ್ರಾಮೀಣ ಭಾಗದ ಪ್ರತಿಯೊಂದು ಮನೆ ಮನೆಗೂ ನಲ್ಲಿಯ ಮೂಲಕ ಸಮರ್ಪಕವಾಗಿ ನೀರನ್ನು ಒದಗಿಸುವ ಗುರಿ ಹೊಂದಿದೆ ಎಂದರು.

ಗ್ರಾ.ಪಂ ಅಧ್ಯಕ್ಷೆ ಭಾರತಿ ಬೆಣಕಲ್, ಉಪಾಧ್ಯಕ್ಷೆ ಶಂಕ್ರಮ್ಮ ಜೋಗಿನ್, ಜೆಜೆಎಮ್ ಐಎಸ್ಆರ್ ಎಂ ಸಿಬ್ಬಂದಿಗಳಾದ‌ ದೇವಪ್ಪ, ಸಿದ್ದಪ್ಪ , ಪ್ರಮುಖರಾದ ಹನುಮಂತ,ತೋಟಯ್ಯ, ಪರಶುರಾಮ, ಪ್ರಕಾಶ್, ಹನುಮಂತಪ್ಪ, ಮಲ್ಲಪ್ಪ, ವಸಂತ ರೆಡ್ಡಿ, ಗೀತಾ , ಜಯಾ, ಚೆನ್ನಮ್ಮ, ಶೋಭಾ, ನೀಲಪ್ಪ, ರಫೀಕ, ಬಸವರಾಜ, ನಜೀರ್, ಮಾರುತಿ, ಸುರೇಶ, ವಸಂತ ರೆಡ್ಡಿ, ಧರ್ಮಪ್ಪ, ಕೊಟ್ರಪ್ಪ, ದೇವರಡ್ಡಿ, ಶಿವಮೂರ್ತಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT