ಬಿಜೆಪಿ, ಕಾಂಗ್ರೆಸ್ಸಿಗರ ಚಿತ್ತ ಕೆಆರ್‌ಪಿಪಿ ಪಕ್ಷದತ್ತ

ಗಂಗಾವತಿ: ಕಲ್ಯಾಣ ರಾಜ್ಯ ಪ್ರಗತಿ ಪಕ್ಷ (ಕೆಆರ್‌ಪಿಪಿ) ಸ್ಥಾಪಿಸಿರುವ ಮಾಜಿ ಸಚಿವ ಗಾಲಿ ಜನಾರ್ದನರೆಡ್ಡಿ ಮುಂದಿನ ಚುನಾವಣೆಗೆ ಈಗಾಗಲೇ ಸಿದ್ಧತೆ ನಡೆಸಿದ್ದಾರೆ.
ಕಲ್ಯಾಣ ಕರ್ನಾಟಕ ಪ್ರದೇಶದ ಎಲ್ಲ ಕ್ಷೇತ್ರಗಳಿಗೆ ಭೇಟಿ ನೀಡುವುದರ ಜೊತೆಗೆ ಗಂಗಾವತಿ ಕ್ಷೇತ್ರದಲ್ಲಿ ವಿವಿಧ ಸಮಾಜದ ಮತ್ತು ಪಕ್ಷಗಳ ಮುಖಂಡರನ್ನು ಭೇಟಿ ಆಗುತ್ತಿದ್ದಾರೆ. ಅವರ ಮನ ಗೆಲ್ಲಲು ಪ್ರಯತ್ನ ನಡೆಸಿದ್ದಾರೆ.
ಕೆಕೆಆರ್‌ಪಿಗೆ ಸೇರ್ಪಡೆ: ಮಂಗಳವಾರ ಬಿಜೆಪಿ ಯುವ ಮೋರ್ಚಾ ಜಿಲ್ಲಾ ಘಟಕದ ಅಧ್ಯಕ್ಷ ಯಮನೂರ ಚೌಡ್ಕಿ, ನಗರ ಯೋಜನಾ ಪ್ರಾಧಿಕಾರ ಸದಸ್ಯ ಮನೋಹರಗೌಡ ಹೇರೂರು, ವೀರೇಶ ಬಲಕುಂದಿ, ನಾಗರಾಜ ಚಳಗೇರಿ, ವೀರೇಶ ಸೂಳೆಕಲ್, ಚನ್ನವೀರನಗೌಡ ಕೋರಿ, ಶಿವಕುಮಾರ ಆದೋನಿ, ದುರುಗಪ್ಪ ಆಗೋಲಿ, ರಮೇಶ ಹೊ ಸಮನಿ, ಚಂದ್ರು ಹೇರೂರ, ಕಾಂಗ್ರೆಸ್ ಎಸ್‌ಸಿ ಮೋರ್ಚಾ ಗ್ರಾಮೀಣ ಘಟಕದ ಅಧ್ಯಕ್ಷ ಬಾಲಪ್ಪ ಕಾಮದೊಡ್ಡಿ ಸೇರಿ 150ಕ್ಕೂ ಹೆಚ್ಚು ಕಾರ್ಯಕರ್ತರು ಕೆಆರ್‌ಪಿಪಿ ಸೇರಿದ್ದಾರೆ.
ಕಾಂಗ್ರೆಸ್‌ನ ಮಾಜಿ ಶಾಸಕರು ಸಮಸ್ಯೆಗೆ ಸ್ಪಂದಿಸುವುದಿಲ್ಲ. ಈ ಬಾರಿ ಚುನಾವಣೆಯಲ್ಲಿ ಕಾಂಗ್ರೆಸ್‌ನವರು ಗೆಲ್ಲುತ್ತಾರೆ ಎಂಬ ನಿರೀಕ್ಷೆ ಇಲ್ಲ. ಹೀಗಾಗಿ ಕಾಂಗ್ರೆಸ್‌ಗೆ ರಾಜೀನಾಮೆ ಸಲ್ಲಿಸಿ, ಕೆಆರ್‌ಪಿಪಿ ಸೇರಿರುವೆ.
ಬಾಲಪ್ಪ ಕಾಮದೊಡ್ಡಿ, ಗಂಗಾವತಿ
ಜನವರಿ 16ನಂತರ ಕಲ್ಯಾಣ ಕರ್ನಾಟಕ ಭಾಗದ ಎಲ್ಲ ಕ್ಷೇತ್ರಗಳಲ್ಲಿ ಕಣಕ್ಕಿಳಿಸುವ ಅಭ್ಯರ್ಥಿಗಳ ಪಟ್ಟಿ, ಪಕ್ಷದ ಪ್ರಣಾಳಿಕೆ ಹಂತ ಹಂತವಾಗಿ ಪ್ರಕಟಿಸಲಾಗುತ್ತದೆ.
ಜನಾರ್ದನರೆಡ್ಡಿ, ಕೆಆರ್‌ಪಿಪಿ ಪಕ್ಷದ ಸಂಸ್ಥಾಪಕ
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.