ಅಳವಂಡಿ: ‘ಶಾಲೆಗಳು ದೇವಾಲಯಗಳಾಗಬೇಕು. ವಿದ್ಯಾರ್ಥಿಗಳು ಮೂರ್ತಿ, ಶಿಕ್ಷಕರು ಶಿಲ್ಪಿ, ಪಾಲಕರು ಪೂಜಾರಿಗಳಾದರೇ ಸರ್ವಾಂಗೀಣ ಸದೃಢ ಸಮಾಜ ಕಟ್ಟಲು ಸಾಧ್ಯವಾಗುತ್ತದೆ’ ಎಂದು ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ, ಹೋರಾಟಗಾರ ವೈ.ಎನ್.ಗೌಡರ ಹೇಳಿದರು.

ಸಮೀಪದ ಹಟ್ಟಿ ಗ್ರಾಮದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಿದ್ದ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

‘ಈ ದೇಶದ ಭವಿಷ್ಯ, ಅಭಿವೃದ್ಧಿ ಶಾಲಾ ಕೊಠಡಿಯಲ್ಲಿದೆ. ವಿದ್ಯಾರ್ಥಿಗಳು ದೇಶದ ಭವಿಷ್ಯದ ರೂವಾರಿಗಳು. ಅವರಿಗೆ ಶಿಕ್ಷಣ ಬಹಳ ಮುಖ್ಯ. ಆ ಶಿಕ್ಷಣ ಸಂಸ್ಕಾರಯುತ ಶಿಕ್ಷಣವಾಗಬೇಕು. ಇದರಿಂದ ಮನೆ ಹಾಗೂ ಸಮಾಜಕ್ಕೆ ಉತ್ತಮ ಕೊಡುಗೆ ಕೊಡಲು ಸಾಧ್ಯವಾಗಲಿದೆ. ಗ್ರಾಮೀಣ ಪ್ರದೇಶದಲ್ಲಿ ಶಿಕ್ಷಕರು ಪ್ರಾಮಾಣಿಕವಾಗಿ ತಮ್ಮ ಜವಾಬ್ದಾರಿಯನ್ನು ನಿರ್ವಹಿಸಿದರೆ ವಿದ್ಯಾರ್ಥಿಗಳನ್ನು ಉತ್ತಮ ನಾಗರಿಕರನ್ನಾಗಿ ಮಾಡಬಹುದು’ ಎಂದರು.

ಎಸ್ಡಿಎಂಸಿ ಅಧ್ಯಕ್ಷ ಗುಡದಪ್ಪ, ಭರಮಪ್ಪ ನಗರ, ತೋಟಪ್ಪ ಶಿಂಟ್ರ, ಹೊನ್ನಪ್ಪಗೌಡ, ದ್ಯಾಮಣ್ಣ, ನಿಂಗನಗೌಡ, ರಮೇಶ, ಹನುಮಪ್ಪ, ಗುಂಡಪ್ಪ.ಎಚ್, ಸಂಜಯ ಚವಡಾಳ, ಹನುಮಗೌಡ್ರ, ಈರಪ್ಪ, ಬಸವರಾಜ, ಯಮನೂರಪ್ಪ, ವೆಂಕರಡ್ಡಿ, ಫಕೀರ ಸಿದ್ದಪ್ಪ, ದೇವೇಂದ್ರಪ್ಪ, ಹನುಮಂತಪ್ಪ, ರಾಘವೇಂದ್ರ, ಗುರುರಾಜ, ಸಂಗಪ್ಪ, ಮಾಳವ್ವ, ಮೆಹಬೂಬ್ ಸಾಬ್, ಇಬ್ರಾಹಿಂ ಸಾಬ್, ಮುಖ್ಯಶಿಕ್ಷಕಿ ಸಾವಿತ್ರಿ, ಎಸ್ಡಿಎಂಸಿ ಸದಸ್ಯರು, ಶಾಲೆ ಶಿಕ್ಷಕರು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.