ಬುಧವಾರ, ಜುಲೈ 28, 2021
29 °C

ಕೊಪ್ಪಳ: ಎಎಸ್‍ಐ ಸೇರಿ 13 ಜನರಿಗೆ ಕೋವಿಡ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಯಲಬುರ್ಗಾ: ಕುಕನೂರು ಹಾಗೂ ಯಲಬುರ್ಗಾ ತಾಲ್ಲೂಕು ಒಳಗೊಂಡಂತೆ ಒಟ್ಟು 13 ಕೋವಿಡ್ ಪ್ರಕರಣಗಳು ಸೋಮವಾರ ಪತ್ತೆಯಾಗಿವೆ.

ಪಟ್ಟಣದಲ್ಲಿ ಕಳೆದ ಒಂದು ವಾರದಿಂದ ಪ್ರಕರಣಗಳು ವರದಿಯಾಗುತ್ತಿವೆ. ಅಲ್ಲದೆ, ಸೋಮವಾರ ಪಟ್ಟಣದಲ್ಲಿಯೇ ನಾಲ್ಕು ಜನರಿಗೆ ಸೋಂಕು ದೃಢಪಟ್ಟಿದ್ದು ಅವರನ್ನು ಕೊಪ್ಪಳದ ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಪಟ್ಟಣದ 15ನೇ ವಾರ್ಡ್‌ನಲ್ಲಿ ಒರ್ವ ಮಹಿಳೆ, 5ನೇ ವಾರ್ಡ್‌ನಲ್ಲಿ ಇಬ್ಬರಿಗೆ ಹಾಗೂ ಸ್ಥಳೀಯ ಎಎಸ್‍ಐ ಒಬ್ಬರಿಗೆ ಸೋಂಕು ದೃಢಪಟ್ಟಿದೆ.

ಹಾಗೆಯೇ ಕುದ್ರಿಕೊಟಗಿ ಮತ್ತು ಕರಮುಡಿ ಗ್ರಾಮದ ವ್ಯಕ್ತಿಗಳಿಗೆ ಸೋಂಕು ತಗುಲಿದೆ. ಪಟ್ಟಣ ಪಂಚಾಯಿತಿ ಹಾಗೂ ಗ್ರಾಮ ಪಂಚಾಯಿತಿ ಸಿಬ್ಬಂದಿ ಸೋಂಕಿತರ ವಾಸದ ಪ್ರದೇಶವನ್ನು ಸೀಲ್‍ಡೌನ್ ಮಾಡಿ ಅಗತ್ಯ ಕ್ರಮ ಕೈಗೊಂಡಿದ್ದಾರೆ.

ತಾಲ್ಲೂಕಿನ ವಿವಿಧ ಗ್ರಾಮದ ಅನೇಕರಿಗೆ ಸೋಂಕು ಪತ್ತೆಯಾಗಿದ್ದು ತಾಲ್ಲೂಕು ಕೇಂದ್ರವನ್ನೆ ಮತ್ತೆ ಕಟ್ಟು ನಿಟ್ಟಿನ ಸೀಲ್‍ಡೌನ್ ಮಾಡಬೇಕೆಂಬ ಒತ್ತಾಯಗಳು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು