ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಯಲಬುರ್ಗಾ: ಪುಸ್ತಕ ಜೋಳಿಗೆ ಕಾರ್ಯಕ್ರಮಕ್ಕೆ ಚಾಲನೆ

Published 10 ಮಾರ್ಚ್ 2024, 4:23 IST
Last Updated 10 ಮಾರ್ಚ್ 2024, 4:23 IST
ಅಕ್ಷರ ಗಾತ್ರ

ಯಲಬುರ್ಗಾ: ‘ಪುಸ್ತಕಗಳು ಅತ್ಯಂತ ಅಮೂಲ್ಯವಾದ ವಸ್ತುಗಳು. ಸಾರ್ವಜನಿಕರು ಅವುಗಳನ್ನು ಹಾಳು ಮಾಡದೆ ಶಾಲೆಗಳಿಗೆ ದೇಣಿಗೆಯಾಗಿ ನೀಡಬೇಕು. ಪುಸ್ತಕ ಹಳೆಯದಾದರೂ ಅದರಲ್ಲಿರುವ ವಿಷಯ ವಸ್ತು ಮಾತ್ರ ಮಹತ್ವದ್ದಾಗಿರುತ್ತದೆ’ ಎಂದು ಶಾಲಾಭಿವೃದ್ಧಿ ಹಾಗೂ ಮೇಲುಸ್ತುವಾರಿ ಸಮಿತಿ ಅಧ್ಯಕ್ಷ ಶರಣು ಕಳಸಪ್ಪನರ್ ಹೇಳಿದರು.

ತಾಲ್ಲೂಕಿನ ಬಂಡಿಹಾಳ ಗ್ರಾಮದ ಬಾಲಪ್ಪ ಚಿಗರಿ ಸರ್ಕಾರಿ ಪ್ರೌಢಶಾಲೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಪುಸ್ತಕ ಜೋಳಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ,‘ಹಳೆ ಪುಸ್ತಕಗಳು ಈಗ ಮಾರುಕಟ್ಟೆಯಲ್ಲಿ ಸಿಗುವುದಿಲ್ಲ. ಕೆಲವರ ಮನೆಯಲ್ಲಿ ಉಪಯೋಗಿಸದೇ ಹಾಗಿಯೇ ಇಟ್ಟುಕೊಂಡಿದ್ದಾರೆ. ಅಂಥ ಪುಸ್ತಕಗಳನ್ನು  ಶಾಲೆಗಳಿಗೆ ನೀಡಿದರೆ ವಿದ್ಯಾರ್ಥಿಗಳಿಗೆ ಅನುಕೂಲವಾಗುತ್ತದೆ’ ಎಂದರು.

ಶಿಕ್ಷಕ ಬಸವರಾಜ ಮುಗಳಿ ಮಾತನಾಡಿ,‘ಶಾಲೆಯಲ್ಲಿ ಗ್ರಂಥಾಲಯ ಅಭಿವೃದ್ಧಿ ಮಾಡಲು ಮಕ್ಕಳೊಂದಿಗೆ ಪುಸ್ತಕ ಜೋಳಿಗೆ ಕಾರ್ಯಕ್ರಮ ಆಯೋಜಿಸಲಾಗಿದೆ. ಮುಂದಿನ ದಿನಗಳಲ್ಲಿ ಹೊಸ ಹೊಸ ಪುಸ್ತಕಗಳನ್ನು ಸಂಗ್ರಹಿಸಿಡಲಾಗುವುದು’ ಎಂದು ಹೇಳಿದರು.

ಗ್ರಾಮದ ಅನೇಕ ಕುಟುಂಬಗಳು ತಮ್ಮ ಮನೆಯಲ್ಲಿರುವ ಸಾಹಿತ್ಯಕ, ಸ್ಪರ್ಧಾತ್ಮಕ ಹಾಗೂ ಇನ್ನಿತರ ಮಹತ್ವದ ಪುಸಕ್ತಗಳನ್ನು ಜೋಳಿಗಿಗೆ ಹಾಕಿದರು.

ವಿರೂಪಕ್ಷಪ್ಪ ಶ್ರೀಗಿರಿ, ಮಂಜುನಾಥ ಬೂಸನ್ನವರ, ಕೆರೆ ಬಸವರಾಜ ಬಂಡ್ರಿ, ಶಿಕ್ಷಕ ಶರಣಪ್ಪ ದೊಡ್ಡಮನಿ, ಭೀಮಾಂಬಿಕಾ ಮೂಗನೂರು, ಸರಸ್ವತಿ ತೆಗ್ಗಿನಮನಿ ಹಾಗೂ ಇತರರು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT